ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮಾತುಕತೆ ಮುಂದಕ್ಕೆ

KannadaprabhaNewsNetwork |  
Published : Feb 23, 2026, 01:45 AM IST
India US Trade Deal

ಸಾರಾಂಶ

ವಿದೇಶಗಳ ಮೇಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆಯನ್ನು ಅಮೆರಿಕ ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಬೆನ್ನಲ್ಲೇ, ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಭಾರತ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಮುಖ್ಯ ಸಂಧಾನಕಾರರ ಮಟ್ಟದ ಸಭೆಯನ್ನು ಮುಂದೂಡಲಾಗಿದೆ.

ನವದೆಹಲಿ: ವಿದೇಶಗಳ ಮೇಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆಯನ್ನು ಅಮೆರಿಕ ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಬೆನ್ನಲ್ಲೇ, ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಭಾರತ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಮುಖ್ಯ ಸಂಧಾನಕಾರರ ಮಟ್ಟದ ಸಭೆಯನ್ನು ಮುಂದೂಡಲಾಗಿದೆ.

ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ನಿರ್ಧಾರ

ಸುಪ್ರೀಂ ಕೋರ್ಟ್‌ ಹಾಗೂ ಆ ಬಳಿಕ ತೀರ್ಪಿನ ನಂತರದ ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡೂ ದೇಶಗಳು ಸಹಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಮಾತುಕತೆಗೆ ಸಂಬಂಧಿಸಿ ಇಬ್ಬರಿಗೂ ಸರಿಹೊಂದುವಂಥ ಹೊಸ ದಿನಾಂಕವನ್ನು ಶೀಘ್ರವೇ ಗೊತ್ತು ಮಾಡಲಿವೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಸುಪ್ರೀಂಕೋರ್ಟ್‌ ಆದೇಶದಿಂದಾಗಿ ತೆರಿಗೆ ಪ್ರಮಾಣದ ಕುರಿತು ಹೊಸದಾಗಿ ಚರ್ಚೆ

ಭಾರತದ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪನ್‌ ಜೈನ್‌ ನೇತೃತ್ವದ ಭಾರತೀಯ ಸಂಧಾನಕಾರರ ತಂಡ ಫೆ.23ರಿಂದ 3 ದಿನಗಳ ಕಾಲ ವ್ಯಾಪಾರ ಒಪ್ಪಂದ ಕುರಿತು ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಬೇಕಿತ್ತು. ಈ ತಂಡವು ಪ್ರಸ್ತಾಪಿತ ಮಧ್ಯಂತರ ಒಪ್ಪಂದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಅಂತಿಮಗೊಳಿಸುವ ಕೆಲಸ ಮಾಡಬೇಕಿತ್ತು. ಆದರೆ ಇದೀಗ ಅಮೆರಿಕ ಸುಪ್ರೀಂಕೋರ್ಟ್‌ ಆದೇಶದಿಂದಾಗಿ ತೆರಿಗೆ ಪ್ರಮಾಣದ ಕುರಿತು ಹೊಸದಾಗಿ ಚರ್ಚೆ, ಚೌಕಾಸಿ ನಡೆಸಬೇಕಾದ ಸಂದರ್ಭ ಎದುರಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಇಂಥದ್ದೊಂದು ನಿರ್ಧಾರಕ್ಕೆ ಬಂದಿವೆ.

ಈ ಮೊದಲಿನ ನಿರ್ಧಾರದ ಅನ್ವಯ ಭಾರತದ ಉತ್ಪನ್ನಗಳ ಮೇಲೆ ಶೇ.18ರಷ್ಟು ತೆರಿಗೆ ಹೇರಲು ಅಮೆರಿಕ ನಿರ್ಧರಿಸಿತ್ತು. ಆದರೆ ಭಾರತ ತನ್ನ ನಿರ್ಧಾರ ಬಹಿರಂಗಪಡಿಸಿರಲಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಿಲ್ಲಿ ಪೊಲೀಸರಿಂದ ಉಗ್ರ ಜಾಲ ಬಯಲು
ನಾನು ಸತ್ತರೆ ಏನ್ಮಾಡ್ಬೇಕು : ಆಪ್ತರಿಗೆ ಖಮೇನಿ ಸಲಹೆ!