ತೈವಾನ್‌ ಓಪನ್‌ ಅಥ್ಲೆಟಿಕ್ಸ್‌ :ಭಾರತಕ್ಕೆ ಮತ್ತೆ 6 ಚಿನ್ನ

KannadaprabhaNewsNetwork |  
Published : Jun 09, 2025, 11:53 PM ISTUpdated : Jun 10, 2025, 05:37 AM IST
ಯಶಸ್‌ | Kannada Prabha

ಸಾರಾಂಶ

ತೈವಾನ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 2ನೇ ಹಾಗೂ ಕೊನೆಯ ದಿನವಾದ ಭಾನುವಾರ ಭಾರತ ಮತ್ತೆ 6 ಚಿನ್ನದ ಪದಕಗಳೊಂದಿಗೆ 9 ಪದಕಗಳನ್ನು ಜಯಿಸಿತು. ಕೂಟದ ಮೊದಲ ದಿನವೂ ಭಾರತ 6 ಚಿನ್ನದ ಪದಕ ಜಯಿಸಿತು.

 ತೈಪೆ ಸಿಟಿ: ತೈವಾನ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 2ನೇ ಹಾಗೂ ಕೊನೆಯ ದಿನವಾದ ಭಾನುವಾರ ಭಾರತ ಮತ್ತೆ 6 ಚಿನ್ನದ ಪದಕಗಳೊಂದಿಗೆ 9 ಪದಕಗಳನ್ನು ಜಯಿಸಿತು. ಕೂಟದ ಮೊದಲ ದಿನವೂ ಭಾರತ 6 ಚಿನ್ನದ ಪದಕ ಜಯಿಸಿತು.

ಭಾನುವಾರ ಮಹಿಳೆಯರ 400 ಮೀ. ಹರ್ಡಲ್ಸ್‌ ಓಟದಲ್ಲಿ ವಿದ್ಯಾ ರಾಮರಾಜ್‌, ಪುರುಷರ ಜಾವೆಲಿನ್‌ ಥ್ರೋನಲ್ಲಿ ರೋಹಿತ್‌ ಯಾದವ್‌, ಮಹಿಳೆಯರ 800 ಮೀ. ಓಟದಲ್ಲಿ ಪೂಜಾ, ಪುರುಷರ 800 ಮೀ. ಓಟದಲ್ಲಿ ಕೃಷನ್‌ ಕುಮಾರ್‌, ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ಅನ್ನು ರಾಣಿ ಚಿನ್ನ ಗೆದ್ದರು. ಸಂತೋಷ್‌, ವಿಶಾಲ್‌, ಧರಮ್‌ವೀರ್‌ ಹಾಗೂ ಮನು ಅವನ್ನೊಳಗೊಂಡ ಪುರುಷರ 4X400 ಮೀ. ರಿಲೇ ತಂಡ ಚಿನ್ನ ಜಯಿಸಿತು.

ಕರ್ನಾಟಕದ ಯಶಸ್‌ ಪಾಲಾಕ್ಷ ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ 42.22 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು.

ಮಹಿಳೆಯರ ಲಾಂಗ್‌ ಜಂಪ್‌ನಲ್ಲಿ ಶೈಲಿ ಸಿಂಗ್‌ ಹಾಗೂ ಆ್ಯನ್ಸಿ ಸೋಜನ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

ಪ್ರೊ ಲೀಗ್‌ ಹಾಕಿ: ಇಂದು ಭಾರತಕ್ಕೆ ಡಚ್‌ ಸವಾಲು

ಆಮ್ಸ್‌ಸ್ಟೆಲ್‌ವೀನ್‌: ಭಾರತ ಪುರುಷರ ಹಾಕಿ ತಂಡ ಎಫ್ಐಎಚ್ ಪ್ರೊ ಲೀಗ್‌ ಟೂರ್ನಿಯ ಯುರೋಪ್‌ ಚರಣದಲ್ಲಿ ಸೋಮವಾರ ತನ್ನ 2ನೇ ಪಂದ್ಯವನ್ನು ನೆದರ್‌ಲೆಂಡ್ಸ್‌ ವಿರುದ್ಧ ಆಡಲಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧವೇ ಭಾರತಕ್ಕೆ 1-2 ಗೋಲುಗಳ ಸೋಲು ಎದುರಾಗಿತ್ತು. ಈ ಸೋಲಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಪ್ರೊ ಲೀಗ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ 2026ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಪ್ರೊ ಲೀಗ್‌ನಲ್ಲಿ ಭಾರತಕ್ಕೆ ಇನ್ನೂ 7 ಪಂದ್ಯ ಬಾಕಿ ಇದೆ. ಒಂದು ವೇಳೆ ಪ್ರೊ ಲೀಗ್‌ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದೆ ಇದ್ದರೆ, ಬಿಹಾರದ ರಾಜ್‌ಗಿರ್‌ನಲ್ಲಿ ಸೆ.5-14ರ ವರೆಗೂ ನಡೆಯಲಿರುವ ಏಷ್ಯಾಕಪ್‌ನಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆಯಬಹುದು.

PREV
Read more Articles on

Recommended Stories

ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದ್ದ ಕಾಂಗ್ರೆಸ್ಸಿಗರು
ಮೈಸೂರು ಫ್ಯಾಕ್ಟರಿ ಕೇಸ್‌ : ವಶಪಡಿಸಿಕೊಂಡ ಡ್ರಗ್ಸ್‌ಮೌಲ್ಯ ₹435 ಕೋಟಿಗೆ