ಪೂರ್ವ ಲಡಾಖ್‌ನಲ್ಲಿ ಪರಸ್ಪರ ಶಾಂತಿ ಮಾತುಕತೆ - 4 ವರ್ಷಗಳ ಬಳಿಕ 5 ಗಡೀಲಿ ಭಾರತ- ಚೀನಾ ದೀಪಾವಳಿ

KannadaprabhaNewsNetwork |  
Published : Nov 01, 2024, 12:13 AM ISTUpdated : Nov 01, 2024, 06:21 AM IST
ಭಾರತೀಯ ಸೇನೆ | Kannada Prabha

ಸಾರಾಂಶ

ಪೂರ್ವ ಲಡಾಖ್‌ನಲ್ಲಿ ಪರಸ್ಪರ ಶಾಂತಿ ಮಾತುಕತೆ ಮೂಲಕ ಸೇನಾ ಹಿಂಪಡೆತ ನಡೆದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ 5 ಗಡಿ ಪ್ರದೇಶಗಳಲ್ಲಿ ಗುರುವಾರ ಭಾರತ ಮತ್ತು ಚೀನಾ ಯೋಧರು ಪರಸ್ಪರ ಸಿಹಿ ಹಂಚಿ ದೀಪಾವಳಿ ಆಚರಿಸಿದ್ದಾರೆ.

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಪರಸ್ಪರ ಶಾಂತಿ ಮಾತುಕತೆ ಮೂಲಕ ಸೇನಾ ಹಿಂಪಡೆತ ನಡೆದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ 5 ಗಡಿ ಪ್ರದೇಶಗಳಲ್ಲಿ ಗುರುವಾರ ಭಾರತ ಮತ್ತು ಚೀನಾ ಯೋಧರು ಪರಸ್ಪರ ಸಿಹಿ ಹಂಚಿ ದೀಪಾವಳಿ ಆಚರಿಸಿದ್ದಾರೆ.

2020ರಲ್ಲಿ ಗಲ್ವಾನ್‌ನಲ್ಲಿ ಉಭಯ ದೇಶಗಳ ನಡುವೆ ಭಾರೀ ಸಂಘರ್ಷ ನಡೆದ ಬಳಿಕ ಯೋಧರು ಗಡಿಯಲ್ಲಿ ದೀಪಾವಳಿ ಸಿಹಿ ಹಂಚುವ ಸಂಪ್ರದಾಯಕ್ಕೆ ಬ್ರೇಕ್‌ ಹಾಕಿದ್ದರು. ಆದರೆ ಕಳೆದ ಕೆಲ ಸಮಯದಿಂದ ಉಭಯ ದೇಶಗಳ ನಡುವೆ ಪೂರ್ವ ಲಡಾಖ್‌ ಬಿಕ್ಕಟ್ಟು ಇತ್ಯರ್ಥ್ಯ ಸಂಬಂಧ ನಡೆದ ಹಿಂಬಾಗಿಲ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ, ಇತ್ತೀಚೆಗೆ ಎರಡೂ ದೇಶಗಳು ವಿವಾದಿತ ಪ್ರದೇಶದಿಂದ ತಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿ ಅ.30ರ ಬುಧವಾರ ಅದನ್ನು ಫೂರ್ಣಗೊಳಿಸಿದ್ದವು. ಅದರ ಬೆನ್ನಲ್ಲೇ ಅರುಣಾಚಲ ಪ್ರದೇಶದ ಬುಮ್ ಲಾ ಮತ್ತು ವಾಚಾ/ಕಿಬಿತ್‌, ಲಡಾಖ್‌ನ ಚುಶುಲ್-ಮೊಲ್ಡೊ ಮತ್ತು ಸಿಕ್ಕಿಂನ ನಾಥು ಲಾ ಎಂಬ ಐದು ಬಾರ್ಡರ್‌ ಪರ್ಸನಲ್‌ ಮೀಟಿಂಗ್‌ (ಬಿಪಿಎಂ) ಕೇಂದ್ರಗಳಲ್ಲಿ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ಮುಂದಿನ ಭಾಗವಾಗಿ ವಿವಾದಿತ ಪ್ರದೇಶಗಳಲ್ಲಿ ಉಭಯ ದೇಶಗಳು ಗುರುವಾರದಿಂದಲೇ ಜಂಟಿ ಪಹರೆ ನಡೆಸಲಿವೆ. ಈ ಮೂಲಕ ಪೂರ್ವ ಲಡಾಖ್‌ ಪ್ರದೇಶವನ್ನು ಸಂಘರ್ಷಮುಕ್ತ ಮಾಡುವ ಗುರಿ ಹಾಕಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ