ಅಬುದಾಭಿಯಲ್ಲಿ ಭರ್ಜರಿ ₹49 ಕೋಟಿ ಲಾಟ್ರಿ ಗೆದ್ದ ಉಡುಪಿಯ ಶಂತನು!

KannadaprabhaNewsNetwork |  
Published : Feb 05, 2026, 04:30 AM IST
Shantanu

ಸಾರಾಂಶ

ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ.

 ಮಸ್ಕತ್‌: ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ.

ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು

ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಮಸ್ಕತ್‌ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದಾರೆ. ಜ.20 ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಡ್ರಾ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಆದರೆ ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಈ ಟಿಕೆಟನ್ನು ಜಂಟಿಯಾಗಿ ಖರೀದಿಸಿದ್ದರು. ಹೀಗಾಗಿ ಅದರಲ್ಲಿ ಅರ್ಧ ಹಣ ಅಂದರೆ ಸರಿ ಸುಮಾರು 24.5 ಕೋಟಿ ರು. ಹಣ ಅವರ ಗೆಳೆಯನಿಗೆ ಸಿಗಲಿದೆ,

ಡ್ರಾ ಫಲಿತಾಂಶ ನೇರ ಪ್ರಸಾರ

ಡ್ರಾ ಫಲಿತಾಂಶ ನೇರ ಪ್ರಸಾರವಾಗಿದ್ದು, ಕಾರ್ಯಕ್ರಮ ಆಯೋಜಕರೊಂದಿಗೆ ಶಾಂತನು ಸಂತಸ ವ್ಯಕ್ತಪಡಿಸಿದ್ದಾರೆ. ‘2021ರಿಂದಲೂ ಬಿಗ್‌ ಟಿಕೆಟ್‌ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದ್ದು, ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಹರ್ಷಿಸಿದ್ದಾರೆ. ಇದೇ ವೇಳೆ ಅವರು, ‘ ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ’ ಎಂದಿದ್ದಾರೆ.

1992ರಲ್ಲಿ ಯುಎಇನಲ್ಲಿ ಬಿಗ್‌ ಟಿಕೆಟ್‌ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರು.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರು.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು