ಹೈಜಾಕ್‌ ಆಗಿದ್ದ ಪಾಕಿಗಳಿದ್ದ ಇರಾನಿ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

KannadaprabhaNewsNetwork |  
Published : Mar 31, 2024, 02:03 AM IST
ನೌಕಾಪಡೆ | Kannada Prabha

ಸಾರಾಂಶ

ಇಂಡಿಯಾ ಜಿಂದಾಬಾದ್‌ ಎಂದ ಪಾಕ್‌ ಮೀನುಗಾರರು ತಮ್ಮನ್ನು ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಧನ್ಯವಾದ ಸಲ್ಲಿಸಿದ್ದಾರೆ.

ನವದೆಹಲಿ: ಏಡೆನ್‌ ಕೊಲ್ಲಿಯಲ್ಲಿ 23 ಪಾಕಿಸ್ತಾನಿ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಇರಾನ್‌ ಮೀನುಗಾರಿಕಾ ಹಡಗು ‘ಆಲ್‌ ಕಂಬರ್‌’ ಅನ್ನು ಸೊಮಾಲಿಯಾ ಕಡಲ್ಗಳ್ಳರು ಹೈಜಾಕ್‌ ಮಾಡಿದ ಘಟನೆ ನಡೆದಿದೆ. ಆದರೆ ಈ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ, ಕಡಲ್ಗಳ್ಳರಿಂದ ಹಡಗನ್ನು ಬಿಡಿಸಿ, ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಅಲ್ಲದೆ ಹೈಜಾಕ್‌ ಮಾಡಿದ್ದ 9 ಕಡಲ್ಗಳ್ಳರನ್ನು ಭಾರತಕ್ಕೆ ಬಂಧಿಸಿ ಕರೆತರುತ್ತಿದ್ದಾರೆ. ಈ ನಡುವೆ ಕಡಲ್ಗಳ್ಳರ ವಶದಿಂದ ತಮ್ಮನ್ನು ಭಾರತೀಯ ಸಿಬ್ಬಂದಿ ರಕ್ಷಿಸಿದ ಬೆನ್ನಲ್ಲೇ ಪಾಕಿಸ್ತಾನಿಯರು ಇಂಡಿಯಾ ಜಿಂದಾಬಾದ್‌ ಎಂದು ಘೋಷಣೆ ಕೂಗಿ ಕೃತಜ್ಞತೆ ವ್ಯಕ್ತಪಡಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಣಾಗೆ ಏಮ್ಸ್‌ನಲ್ಲಿ ದಯಾಮರಣ ಪ್ರಕ್ರಿಯೆ ಆರಂಭ
‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಗೆ ‘ಅತ್ಯುತ್ತಮ ಚಿತ್ರ’ ಆಸ್ಕರ್‌ ಗೌರವ