ನುಡಿದಂತೆ ನಡೆದಿದ್ದಕ್ಕೆಭಾರತಕ್ಕೆ ತೈಲ ಖರೀದಿ ಅನುಮತಿ : ಅಮೆರಿಕ

KannadaprabhaNewsNetwork |  
Published : Mar 08, 2026, 01:45 AM ISTUpdated : Mar 08, 2026, 05:33 AM IST
Scott Bessent

ಸಾರಾಂಶ

ಭಾರತ ನುಡಿದಂತೆ ನಡೆದಿದೆ. ಹೀಗಾಗಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ನಾವು ಅವರಿಗೆ ಅನುಮತಿ ನೀಡಿದ್ದೇವೆ. ತೈಲ ಈಗಾಗಲೇ ಸಮುದ್ರ ಮಾರ್ಗದಲ್ಲಿದೆ ಎಂದು ಅಮೆರಿಕ ಹೇಳಿದೆ.ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅಮೆರಿಕ ವಿತ್ತ ಸಚಿವ ಸ್ಕಾಟ್‌ ಬೆಸ್ಸೆಂಟ್‌, ‘ಭಾರತೀಯರು ನುಡಿದಂತೆ ನಡೆದಿದ್ದಾರೆ

ವಾಷಿಂಗ್ಟನ್‌: ಭಾರತ ನುಡಿದಂತೆ ನಡೆದಿದೆ. ಹೀಗಾಗಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ನಾವು ಅವರಿಗೆ ಅನುಮತಿ ನೀಡಿದ್ದೇವೆ. ತೈಲ ಈಗಾಗಲೇ ಸಮುದ್ರ ಮಾರ್ಗದಲ್ಲಿದೆ ಎಂದು ಅಮೆರಿಕ ಹೇಳಿದೆ.

ಭಾರತೀಯರು ನುಡಿದಂತೆ ನಡೆದಿದ್ದಾರೆ

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅಮೆರಿಕ ವಿತ್ತ ಸಚಿವ ಸ್ಕಾಟ್‌ ಬೆಸ್ಸೆಂಟ್‌, ‘ಭಾರತೀಯರು ನುಡಿದಂತೆ ನಡೆದಿದ್ದಾರೆ. ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಈ ಹಿಂದೆ ನಾವು ಅವರನ್ನು ಕೇಳಿದ್ದೆವು. ಅವರು ಹಾಗೆಯೇ ಮಾಡಿದರು. ಆದರೆ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ನಾವು ಸೀಮಿತ ಅವಧಿಗೆ ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅನುಮತಿಸಿದ್ದೇವೆ’ ಎಂದರು.

ಹೇಡಿ ಸರ್ಕಾರ: 

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ್ದೇವೆ ಎಂದು ಅಮೆರಿಕ ಹೇಳಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್‌ ಕಿಡಿ ಕಾರಿದೆ. ಟ್ವೀಟ್‌ ಮಾಡಿರುವ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಸ್ವಯಂ ಘೋಷಿತ 56 ಇಂಚಿನ ಎದೆಗಾರಿಕೆ ಎಷ್ಟು ಹೇಡಿತನದಿಂದ ಕೂಡಿದೆ ಮತ್ತು ರಾಜಿಯಾಗಿದೆ ಎಂಬುದಕ್ಕೆ ಇನ್ನೇನಾದರೂ ಸಾಕ್ಷಿ ಬೇಕೆ?’ ಎಂದು ಪ್ರಶ್ನಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇರಳದಲ್ಲೂ ಕಾಂಗ್ರೆಸ್‌ನಿಂದಪಂಚಗ್ಯಾರಂಟಿ ಸ್ಕೀಂ ಭರವಸೆ
9 ದಾಳಿಯಲ್ಲಿ ಬಚಾವ್ ಆಗಿದ್ದ ಖಮೇನಿ ಆಪ್ತ ಖಾನಿ ಇಸ್ರೇಲ್‌ ಗೂಢಚರ?