ಪೈಲಟ್‌ ಕೊರತೆ: 200 ಇಂಡಿಗೋ ವಿಮಾನಗಳ ಸಂಚಾರ ರದ್ದು

KannadaprabhaNewsNetwork |  
Published : Dec 04, 2025, 01:45 AM IST
Indigo

ಸಾರಾಂಶ

ಪೈಲಟ್‌ಗಳ ಕೊರತೆಯಿಂದಾಗಿ, ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಿಲ್ದಾಣಗಳಿಂದ ಹೊರಡಬೇಕಿದ್ದ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಇಂಡಿಗೋ ಬುಧವಾರ ರದ್ದುಗೊಳಿಸಿದೆ. ‘ಕೆಲ ದಿನಗಳಿಂದ ಹಲವಾರು ವಿಮಾನಗಳ ಸಂಚಾರ ರದ್ದು ಮತ್ತು ವಿಳಂಬವಾಗುತ್ತಿದೆ.

ಮುಂಬೈ: ಪೈಲಟ್‌ಗಳ ಕೊರತೆಯಿಂದಾಗಿ, ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಿಲ್ದಾಣಗಳಿಂದ ಹೊರಡಬೇಕಿದ್ದ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಇಂಡಿಗೋ ಬುಧವಾರ ರದ್ದುಗೊಳಿಸಿದೆ.

‘ಕೆಲ ದಿನಗಳಿಂದ ಹಲವಾರು ವಿಮಾನಗಳ ಸಂಚಾರ ರದ್ದು ಮತ್ತು ವಿಳಂಬವಾಗುತ್ತಿದೆ. ಸಿಬ್ಬಂದಿ ಕೊರತೆ, ತಾಂತ್ರಿಕ ಸಮಸ್ಯೆ, ವಿಮಾನ ನಿಲ್ದಾಣಗಳ ದಟ್ಟಣೆ ಹಾಗೂ ಕಾರ್ಯಾಚರಣಾ ಅಗತ್ಯಗಳು ಇದಕ್ಕೆ ಕಾರಣ’ ಎಂದು ಇಂಡಿಗೋ ವಕ್ತಾರ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 42 ವಿಮಾನ ರದ್ದಾಗಿದೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 42 ವಿಮಾನಗಳು, ದೆಹಲಿ ವಿಮಾನ ನಿಲ್ದಾಣದಲ್ಲಿ 38 ವಿಮಾನಗಳು, ಮುಂಬೈ ವಿಮಾನ ನಿಲ್ದಾಣದಲ್ಲಿ 33 ಮತ್ತು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 19 ವಿಮಾನಗಳ ಹಾರಾಟ ರದ್ದಾಗಿದೆ.

ಸಿಬ್ಬಂದಿ ಕೊರತೆ ಏಕೆ?: 

ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಕೊಟ್ಟು, ಸಂಭವಿಸಬಹುದಾದ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ‘ವಿಮಾನ ಕೆಲಸದ ಸಮಯದ ಮಿತಿಗಳು’ ಎಂಬ (ಎಫ್‌ಡಿಟಿಎಲ್‌) ಹೊಸ ನಿಯಮವನ್ನು ನ.1ರಿಂದ ಜಾರಿಗೊಳಿಸಿದೆ.

ಅದರ ಪ್ರಕಾರ, ಸಿಬ್ಬಂದಿ ಕರ್ತವ್ಯದಲ್ಲಿ ಇರಬಹುದಾದ ಗಂಟೆಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ದಿನಕ್ಕೆ 8 ಗಂಟೆಗಳು, ವಾರಕ್ಕೆ 35 ಗಂಟೆ, ತಿಂಗಳಿಗೆ 125 ಗಂಟೆ ಮತ್ತು ವರ್ಷಕ್ಕೆ 1,000 ಗಂಟೆಗಳ ಹಾರಾಟ ಮಾತ್ರ ನಡೆಸಬೇಕು ಎಂದು ಸೂಚಿಸಲಾಗಿದೆ.

ಇದಲ್ಲದೆ, ಹಿಂದೆ ಒಬ್ಬ ಪೈಲಟ್‌ ರಾತ್ರಿ ವೇಳೆ 6 ವಿಮಾನಗಳನ್ನು ಲ್ಯಾಂಡ್‌ ಮಾಡಬಹುದಿತ್ತು. ಈಗ ಅದನ್ನು 2 ಬಾರಿಗೆ ಇಳಿಸಲಾಗಿದೆ. ಹೀಗಾಗಿ ರಾತ್ರಿ ವೇಳೆ ಹೆಚ್ಚು ವಿಮಾನಗಳನ್ನು ನಡೆಸಲು ಸಾಕಷ್ಟು ಪೈಲಟ್‌ಗಳಿಲ್ಲ. ಇದು ವಿಮಾನಗಳ ರದ್ದು ಅಥವಾ ವಿಳಂಬಕ್ಕೆ ಕಾರಣವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ
ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌