ಬಾಂಗ್ಲಾಗೆ ಗಡೀಪಾರಾಗಿದ್ದ ಗರ್ಭಿಣಿ ಮಾನವೀಯ ನೆಲೆ ಮೇಲೆ ಭಾರತಕ್ಕೆ : ಸುಪ್ರೀಂ

KannadaprabhaNewsNetwork |  
Published : Dec 04, 2025, 01:45 AM ISTUpdated : Dec 04, 2025, 04:36 AM IST
  Bangladesh

ಸಾರಾಂಶ

ಅಕ್ರಮ ವಲಸಿಗರ ಗಡೀಪಾರು ವೇಳೆ ಬಾಂಗ್ಲಾಗೆ ಕಳಿಸಲ್ಪಟ್ಟಿದ್ದ ತುಂಬುಗರ್ಭಿಣಿ ಹಾಗೂ ಆಕೆಯ ಮಗುವನ್ನು ಮಾನವೀಯತೆಯ ಆಧಾರದಲ್ಲಿ ಭಾರತಕ್ಕೆ ಮರಳಿ ಕರೆಸಿಕೊಳ್ಳಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಇಬ್ಬರಿಗೆ ಅಗತ್ಯ ನೆರವು ನೀಡುವಂತೆಯೂ ಕೋರ್ಟ್‌ ಹೇಳಿದೆ. ಪ್ರಕರಣದ ವಿಚಾರಣೆ ಡಿ.10ರಂದು ನಡೆಯಲಿದೆ.

ನವದೆಹಲಿ: ಅಕ್ರಮ ವಲಸಿಗರ ಗಡೀಪಾರು ವೇಳೆ ಬಾಂಗ್ಲಾಗೆ ಕಳಿಸಲ್ಪಟ್ಟಿದ್ದ ತುಂಬುಗರ್ಭಿಣಿ ಹಾಗೂ ಆಕೆಯ ಮಗುವನ್ನು ಮಾನವೀಯತೆಯ ಆಧಾರದಲ್ಲಿ ಭಾರತಕ್ಕೆ ಮರಳಿ ಕರೆಸಿಕೊಳ್ಳಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಇಬ್ಬರಿಗೆ ಅಗತ್ಯ ನೆರವು ನೀಡುವಂತೆಯೂ ಕೋರ್ಟ್‌ ಹೇಳಿದೆ.

 ಪ್ರಕರಣದ ವಿಚಾರಣೆ ಡಿ.10ರಂದು ನಡೆಯಲಿದೆ. ದೆಹಲಿಯ ರೋಹಿಣಿಯ ಸೆಕ್ಟರ್ 26ರಲ್ಲಿ 2 ದಶಕಗಳಿಂದ ವಾಸವಾಗಿದ್ದ ಕೆಲವರನ್ನು ಬಾಂಗ್ಲಾದೇಶಿಗರೆಂದು ಅನುಮಾನಿಸಿ ಪೊಲೀಸರು ಜೂ.18ರಂದು ಕರೆದೊಯ್ದು ಜೂ.27ರಂದು ಬಾಂಗ್ಲಾ ಗಡಿ ದಾಟಿಸಿದ್ದರು ಎಂದು ಗರ್ಭಿಣಿಯ ತಂದೆ ಭೋದು ಶೇಕ್‌ ಆರೋಪಿಸಿದ್ದರು. ಕಲ್ಕತ್ತಾ ಹೈಕೋರ್ಟ್‌ ಕೂಡ, ಆ ಗಡೀಪಾರನ್ನು ಅಕ್ರಮವೆಂದು ಕರೆದು, ಅವರನ್ನೆಲ್ಲಾ ಭಾರತಕ್ಕೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಈ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ‘ಗರ್ಭಿಣಿ ಮತ್ತು ಆಕೆಯ 8 ವರ್ಷದ ಮಗುವನ್ನು ಭಾರತಕ್ಕೆ ಕರೆತಂದು ಅಗತ್ಯ ವೈದ್ಯಕೀಯ ನೆರವು ನೀಡಬೇಕು. ಉಚಿತ ಹೆರಿಗೆಯನ್ನೂ ಮಾಡಿಸಬೇಕು’ ಎಂದಿದೆ.

ಮಹಿಳೆ ಭಾರತಕ್ಕೆ ಬಂದಬಳಿಕ ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಿದೆ.

ಛತ್ತೀಸ್‌ಗಢದಲ್ಲಿ ಗುಂಡಿನ ಕಾಳಗ: 12 ನಕ್ಸಲರ ಹತ್ಯೆ 

ಬಿಜಾಪುರ: ಛತ್ತೀಸ್‌ಗಢದಲ್ಲಿ ನಕ್ಸಲ್‌ ಬೇಟೆ ಮುಂದುವರಿದಿದ್ದು, ಬುಧವಾರ ಎನ್‌ಕೌಂಟರ್‌ನಲ್ಲಿ 5 ನಕ್ಸಲರ ಹತ್ಯೆ ಮಾಡಲಾಗಿದೆ. ಈ ವೇಳೆ ಮೂವರು ಪೊಲೀಸ್‌ ಸಾವನ್ನಪ್ಪಿದ್ದು, ಮತ್ತೊರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.ಈ ಮೂಲಕ ರಾಜ್ಯದಲ್ಲಿ 2025ರಲ್ಲಿ ಬಲಿಯಾದ ನಕ್ಸಲರ ಸಂಖ್ಯೆ 275ಕ್ಕೇರಿಕೆಯಾಗಿದೆ.

ಬಿಜಾಪುರ ಜಿಲ್ಲೆಯ ಗಂಗಲೂರು ಪ್ರದೇಶದ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಪಡೆ ಮತ್ತು ಭದ್ರತಾ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಕಾಳಗ ನಡೆದಿದೆ. ಈ ವೇಳೆ 12 ನಕ್ಸಲರು ಎನ್‌ಕೌಂಟರ್‌ಗೆ ಬಲಿಯಾಗಿದ್ದು ಶವಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.ಇದೇ ವೇಳೆ ಸಿಂಗಲ್‌ ಲೋಡಿಂಗ್‌ ರೈಫಲ್ಸ್‌, ಇನ್ಸಾಸ್‌ ರೈಫಲ್ಸ್‌, 303 ರೈಫಲ್ಸ್‌, ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇನ್ನು ಕಾರ್ಯಾಚರಣೆಯ ಸಂದರ್ಭದಲ್ಲಿ ಮೂವರು ಡಿಆರ್‌ಜಿ ಸಿಬ್ಬಂದಿ ಹುತಾತ್ಮರಾಗಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

32,000 ಬಂಗಾಳ ಶಿಕ್ಷಕರ ನೇಮಕ ರದ್ದತಿ ಆದೇಶವೇ ರದ್ದು 

ಪಿಟಿಐ ಕೋಲ್ಕತಾಪ.ಬಂಗಾಳದಲ್ಲಿ 2014ರಲ್ಲಿ ನೇಮಕವಾಗಿದ್ದ 32,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಳನ್ನು ರದ್ದುಗೊಳಿಸಿದ ಏಕ ಪೀಠದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠ ಬುಧವಾರ ರದ್ದುಗೊಳಿಸಿದೆ.

‘ಈ ಶಿಕ್ಷಕರನ್ನು 2014 ರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲಾ ನೇಮಕಾತಿಗಳಲ್ಲಿ ಅಕ್ರಮಗಳು ಸಾಬೀತಾಗಿಲ್ಲ. ಕೇವಲ 360 ಶಿಕ್ಷಕರ ನೇಮಕ ಮಾತ್ರ ಅಕ್ರಮ ಎಂದು ಸಿಬಿಐ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದಿಲ್ಲ’ ಎಂದು ಹೇಳಿದ ನ್ಯಾ। ತಪಬ್ರತ ಚಕ್ರವರ್ತಿ ಅವರ ವಿಭಾಗೀಯ ಪೀಠ ಏಕ ಪೀಠದ ಆದೇಶ ರದ್ದು ಮಾಡಿತು.

9 ವರ್ಷಗಳ ನಂತರ ಶಿಕ್ಷಕರನ್ನು ವಜಾ ಮಾಡಿದರೆ ಅವರು ಹಾಗೂ ಅವರ ಕುಟುಂಬಗಳ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ಕೋರ್ಟ್‌ ಹೇಳಿತು.ಹೈಕೋರ್ಟ್‌ನಿಂದ ಈ ಪ್ರಕರಣದ ತನಿಖೆ ನಡೆಸಲು ನಿರ್ದೇಶಿಸಲ್ಪಟ್ಟ ಸಿಬಿಐ, ಆರಂಭದಲ್ಲಿ 264 ಅಕ್ರಮ ನೇಮಕಾತಿಗಳನ್ನು ಗುರುತಿಸಿತ್ತು, ಅದರ ನಂತರ ಇನ್ನೂ 96 ಶಿಕ್ಷಕರನ್ನು ತನಿಖೆಗೆ ಒಳಪಡಿಸಿತ್ತು.ಈ ಹಿಂದೆ ಮೇ 12, 2023 ರಂದು ಆಗಿನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕ ಪೀಠವು ಈ 32,000 ಪ್ರಾಥಮಿಕ ಶಿಕ್ಷಕರ ನೇಮಕಾತಿಗಳನ್ನು ರದ್ದುಗೊಳಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಬಾಬ್ರಿ ಮಸೀದಿ ಕಟ್ಟುವೆಎಂದಿದ್ದ ಶಾಸಕ ಟಿಎಂಸಿಯಿಂದ ವಜಾ
2ನೇ ದಿನವೂ ಇಂಡಿಗೋ ಟ್ರಬಲ್: 550 ವಿಮಾನಗಳ ಸಂಚಾರ ರದ್ದು