ಏರಿಂಡಿಯಾ ಆಯ್ತು, ಇಂಡಿಗೋ
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಉಂಟಾಗಿರುವ ಇಂಧನ ಬೆಲೆ ಏರಿಕೆಯನ್ನು ಸರಿದೂಗಿಸಲು ಏರ್ ಇಂಡಿಯಾ ಬಳಿಕ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಕೂಡ ತನ್ನ ಟಿಕೆಟ್ ದರವನ್ನು ಹೆಚ್ಚಿಸಿದೆ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ 425 ರು.ನಿಂದ 2,300 ರು.ವರೆಗೆ ಇಂಧನ ಶುಲ್ಕ, ಹೊಸ ದರ ಮಾ.14ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಸ್ಪೈಸ್‌ಜೆಟ್ ಮತ್ತು ಆಕಾಸಾ ಸಂಸ್ಥೆಗಳೂ ಈ ಕ್ರಮವನ್ನು ಅನುಸರಿಸಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.===
ರಷ್ಯಾ ತೈಲ ಖರೀದಿಗೆ ಅವಕಾಶ
ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿಢೀರ್ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಒಂದಾದ ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸುವ ಸಂಬಂಧ ಈ ಹಿಂದೆ ಹೇರಿದ್ದ ನಿರ್ಬಂಧವನ್ನು 30 ದಿನಗಳ ಕಾಲ ರದ್ದು ಮಾಡುವುದಾಗಿ ತಿಳಿಸಿದ್ದು. ಇದರ ಬೆನ್ನಲ್ಲೇ ಇದೀಗ ಇತರೆ ದೇಶಗಳಿಗೂ ಇದೇ ರೀತಿ ರಷ್ಯಾದಿಂದ ತೈಲ ಖರೀದಿಗೆ ವಿನಾಯ್ತಿ ನೀಡುವುದಾಗಿ ತಿಳಿಸಿದೆ.ಇರಾನ್‌ನ ಭಯೋತ್ಪಾದಕ ಆಡಳಿತದಿಂದ ಎದುರಾಗಿರುವ ಬೆದರಿಕೆಯನ್ನು ಪರಿಹರಿಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ತೈಲ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳಲು ಟ್ರಂಪ್ ಆಡಳಿತ ಪ್ರಯತ್ನ ಮಾಡುತ್ತಿದೆ ಎಂದು ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
ಕಚ್ಚಾ ತೈಲ ಬೆಲೆ 100 ಡಾಲರ್ ಆಸುಪಾಸಿನಲ್ಲಿ ಸ್ಥಿರ
==
ಮುಂಬೈ: ಒಂದು ದಿನ ಕುಸಿತಕ್ಕೆ ಬ್ರೇಕ್ ನೀಡಿದ ಬಳಿಕ, ಡಾಲರ್ ಎದುರು ರುಪಾಯಿ ಮೌಲ್ಯ ಶುಕ್ರವಾರ ಪುನಃ ಕುಸಿದಿದೆ. 20 ಪೈಸೆ ಕುಸಿದಿರುವ ಅದು 92.45 ರು.ಗೆ ಅಂತ್ಯಗೊಳ್ಳುವುದರೊಂದಿಗೆ ಸಾರ್ವಕಾಲಿಕ ಕನಿಷ್ಠ ಕಂಡಿದೆ.ತೈಲ ಬೆಲೆಗಳು 100 ಡಾಲರ್ ಗಡಿಯಲ್ಲಿ ಸ್ಥಿರವಾಗಿರುವುದು, ವಿದೇಶಿ ಹೂಡಿಕೆಗಳ ಹೊರಹರಿವು, ಷೇರುಪೇಟೆ ಕುಸಿತ- ಸೇರಿದಂತೆ ನಾನಾ ಕಾರಣಗಳಿಂದ ರುಪಾಯಿ ಮೌಲ್ಯ ಕುಸಿದಿದೆ. ದಿನದ ಮಧ್ಯಂತರದಲ್ಲಿ ಡಾಲರ್ ಎದುರು ದಾಖಲೆಯ 92.47 ರು.ಗೂ ರುಪಾಯಿ ಮೌಲ್ಯ ಕುಸಿದಿತ್ತು.
==ಹೋರ್ಮುಜ್‌ನಿಂದ ಇನ್ನೊಂದು ಭಾರತ ಹಡಗು ಸುರಕ್ಷಿತ ಸಂಚಾರ
ನವದೆಹಲಿ: ಸಮರ ಪ್ರಕ್ಷುಬ್ಧ ಇರಾನ್ ಬಳಿಯ ನಿರ್ಬಂಧಿತ ಹೋರ್ಮುಜ್ ಜಲಸಂಧಿ ಮೂಲಕ ಇನ್ನೊಂದು ಭಾರತದ ಹಡಗು ಯಶಸ್ವಿಯಾಗಿ ಪ್ರಯಾಣಿಸಿದೆ. ಗ್ಯಾಸೋಲಿನ್ ಹೊತ್ತು ಆಫ್ರಿಕಾಗೆ ಸಾಗುತ್ತಿದ್ದ ಜಗತ್‌ಪ್ರಕಾಶ್ ಹೆಸರಿನ ಹಡಗು ಹೋರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ ಎಂದು ಭಾರತ ಸರ್ಕಾರ ಹೇಳಿದೆ.ಬುಧವಾರವಷ್ಟೇ ಭಾರತಕ್ಕೆ 1.35 ಲಕ್ಷ ಟನ್ ಅನಿಲ ಹೊತ್ತ ಹಡಗೊಂದು ಹೋರ್ಮುಜ್ ದಾಟಿ ಮುಂಬೈ ಕರಾವಳಿ ಪ್ರವೇಶಿಸಿತ್ತು. ಅದು ಯುದ್ಧ ಆರಂಭವಾದ ನಂತರ ಹೋರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಹಡಗಾಗಿತ್ತು.