ಬೆಂಗಳೂರಿನಿಂದ ಸುಂದರ ದ್ವೀಪ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ

KannadaprabhaNewsNetwork | Updated : Mar 19 2024, 09:08 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ತಮ್ಮ ವಿಹಾರದ ದೃಶ್ಯಗಳನ್ನು ಪೋಸ್ಟ್ ಮಾಡಿದ ಬಳಿಕ ಭಾರೀ ಪ್ರಸಿದ್ಧಿ ಗಳಿಸಿರುವ ಲಕ್ಷದ್ವೀಪಕ್ಕೆ ಉದ್ಯಾನ ನಗರಿ ಬೆಂಗಳೂರಿನಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ವಿಮಾನಸಂಸ್ಥೆ ಪ್ರಕಟಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ವಿಹಾರದ ದೃಶ್ಯಗಳನ್ನು ಪೋಸ್ಟ್ ಮಾಡಿದ ಬಳಿಕ ಭಾರೀ ಪ್ರಸಿದ್ಧಿ ಗಳಿಸಿರುವ ಲಕ್ಷದ್ವೀಪಕ್ಕೆ ಉದ್ಯಾನ ನಗರಿ ಬೆಂಗಳೂರಿನಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ವಿಮಾನಸಂಸ್ಥೆ ಪ್ರಕಟಿಸಿದೆ. 

ಬೆಂಗಳೂರಿನಿಂದ ಲಕ್ಷದ್ವೀಪದ ಅಗಟ್ಟಿಗೆ ಮಾ.31ರಿಂದ 78 ಆಸನದ ಎಟಿಆರ್‌ ವಿಮಾನ ಸೇವೆ ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ. ಅಗಟ್ಟಿಯಲ್ಲಿ ಸ್ಕೂಬಾ ಡೈವಿಂಗ್‌, ಸೈಲಿಂಗ್, ಸ್ಕೀಯಿಂಗ್‌ ಮತ್ತು ಕಯಾಕಿಂಗ್‌ ಮಾಡಲು ಪ್ರಶಸ್ತ ತಾಣವಾಗಿದೆ. 

ಮಾಲ್ಡೀವ್ಸ್‌ ಜೊತೆಗೆ ಭಾರತದ ಸಂಘರ್ಷ ಶುರುವಾದ ಬಳಿಕ ಲಕ್ಷದ್ವೀಪ ಭಾರತೀಯರ ವಿಹಾರಧಾಮವಾಗಿ ಖ್ಯಾತಿ ಗಳಿಸಿದೆ. ಇದಕ್ಕೂ ಮೊದಲು ಭಾರತದಲ್ಲಿ ಕೊಚ್ಚಿಯಿಂದ ಮಾತ್ರ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಲಭ್ಯವಿತ್ತು. 

ಬೆಂಗಳೂರಿನಿಂದ ಸಂಚರಿಸಲಿರುವ ನೇರ ವಿಮಾನ ಬೆಳಗ್ಗೆ 10:25ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಅಗಟ್ಟಿ ತಲುಪಲಿದೆ. ಬಳಿಕ 1:20ಕ್ಕೆ ಹೊರಟು ಬೆಂಗಳೂರಿಗೆ 3:20ಕ್ಕೆ ತಲುಪಲಿದೆ. 

ಬೆಂಗಳೂರಿನಿಂದ ಹೊರಡುವ ವಿಮಾನ ಪ್ರಯಾಣಕ್ಕೆ 6,999 ರು. ಮತ್ತು ಲಕ್ಷದ್ವೀಪದಿಂದ ಹೊರಡುವ ವಿಮಾನಕ್ಕೆ 6,699 ರು. ದರ ನಿಗದಿಪಡಿಸಿದೆ.

ಇದಕ್ಕೂ ಮೊದಲು ಭಾರತದಲ್ಲಿ ಕೊಚ್ಚಿಯಿಂದ ಮಾತ್ರ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಲಭ್ಯವಿತ್ತು. ಬೆಂಗಳೂರಿನಿಂದ ಸಂಚರಿಸಲಿರುವ ನೇರ ವಿಮಾನ ಬೆಳಗ್ಗೆ 10:25ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಅಗಟ್ಟಿ ತಲುಪಲಿದೆ. 

ಬಳಿಕ 1:20ಕ್ಕೆ ಹೊರಟು ಬೆಂಗಳೂರಿಗೆ 3:20ಕ್ಕೆ ತಲುಪಲಿದೆ. ಬೆಂಗಳೂರಿನಿಂದ ಹೊರಡುವ ವಿಮಾನ ಪ್ರಯಾಣಕ್ಕೆ 6,999 ರು. ಮತ್ತು ಲಕ್ಷದ್ವೀಪದಿಂದ ಹೊರಡುವ ವಿಮಾನಕ್ಕೆ 6,699 ರು. ದರ ನಿಗದಿಪಡಿಸಿದೆ.

Share this article