ನವದೆಹಲಿ: ಭಾರತದ ವಿರುದ್ಧ ಹೋರಾಡಲು ಮಹಿಳಾ ಉಗ್ರ ಪಡೆ ರಚನೆಯ ಘೋಷಣೆ ಮಾಡಿದ್ದ ಜೈಷ್ ಉಗ್ರ ಸಂಘಟನೆ, ಅದಕ್ಕೆ ಮಹಿಳೆಯರನ್ನು ಆಹ್ವಾನಿಸಲು ಭಾರತದ ಹಿಂದೂ ಮಹಿಳೆಯರನ್ನು ಉದಾಹರಣೆಯಾಗಿ ಬಳಸಿಕೊಂಡಿದೆ.
ಈ ಕುರಿತ ವಿಡಿಯೋ ಬಿಡುಗಡೆ ಮಾಡಿರುವ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್, ‘ಜೈಷ್‌ನ ಶತ್ರುಗಳು (ಭಾರತೀಯರು) ಹಿಂದೂ ಮಹಿಳೆಯರನ್ನು ಸೇನೆಗೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ಹೋರಾಡಲು ಪಾಕಿಸ್ತಾನದ ಪ್ರತಿ ಜಿಲ್ಲೆಯಲ್ಲಿ ಜಮಾತ್-ಉಲ್-ಮೊಮಿನಾತ್ ಸ್ಥಾಪಿಸಲಾಗಿದೆ. ಇದಕ್ಕೆ ಮಹಿಳೆಯರನ್ನು ನೇಮಿಸುವ ಜವಾಬ್ದಾರಿಯನ್ನು ಮುಂತಾಜಿಮಾಗಳಿಗೆ ನೀಡಲಾಗುವುದು’ ಎಂದಿದ್ದಾನೆ.
ಜತೆಗೆ ‘ಓ ಮುಸಲ್ಮಾನ ಸಹೋದರಿ’ ಹೆಸರಿನ ಕರಪತ್ರವನ್ನೂ ಬಿಡುಗಡೆ ಮಾಡಿ, ‘ಈ ಸಂಘಟನೆ ಸೇರಿಕೊಂಡ ಸ್ತ್ರೀಯರಿಗೆ ಮರಣದ ಬಳಿಕ ಸ್ವರ್ಗ ಪ್ರಾಪ್ತಿಯಾಗಲಿದೆ’ ಎಂಬ ಭರವಸೆ ನೀಡಿದ್ದಾನೆ.
ಈ ಸಂಘಟನೆಯ ನೇತೃತ್ವವನ್ನು ಮಸೂದ್ ಉಮ್ಮೆ ಮಸೂದ್ ವಹಿಸಿಕೊಂಡಿದ್ದು, ಈಗಾಗಲೇ ವಾರದಲ್ಲಿ 5 ದಿನ ಆನ್‌ಲೈನ್ ತರಬೇತಿ ಶುರು ಮಾಡಿದ್ದಾಳೆ. ಕಮಾಂಡರ್‌ಗಳ ಪತ್ನಿಯರು, ಮೃತ ಉಗ್ರರ ಸಂಬಂಧಿಗಳು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಇದಕ್ಕೆ ನೇಮಿಸಿಕೊಳ್ಳಲಾಗುತ್ತಿದೆ.