)
ಹೆಚ್ಚುವರಿ ಗುಪ್ತಚರರ ಕೋರಿದ ಅಮೆರಿಕ ಸೇನೆ
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ 4-5 ವಾರಗಳಲ್ಲಿ ಮುಗಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಇದು ಕನಿಷ್ಠ 100 ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಹಾಗಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ರಕ್ಷಣಾ ಸಚಿವಾಲಯಕ್ಕೆ ಹೆಚ್ಚುವರಿ ಸೇನಾ ಗುಪ್ತಚರ ಅಧಿಕಾರಿಗಳನ್ನು ಒದಗಿಸುವಂತೆ ಕೋರಿದೆ ಎನ್ನಲಾಗಿದೆ.
ಈ ಬಗ್ಗೆ ವರದಿ ಮಾಡಿರುವ ಪೊಲಿಟಿಕೊ ಸುದ್ದಿಸಂಸ್ಥೆ, ‘ಸಮರ ಕನಿಷ್ಠ 100 ದಿನ ಅಂದರೆ ಸೆಪ್ಟೆಂಬರ್‌ವರೆಗೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ತನ್ನ ಟಂಪಾ, ಫ್ಲೋರಿಡಾ ಮುಖ್ಯಕಚೇರಿಗಳಿಗೆ ಹೆಚ್ಚುವರಿ ಸೇನಾ ಗುಪ್ತಚರ ಅಧಿಕಾರಿಗಳನ್ನು ನೇಮಿಸುವಂತೆ ರಕ್ಷಣಾ ಸಚಿವಾಲಯದ ಮುಖ್ಯಕಚೇರಿ ಪೆಂಟಗನ್‌ಗೆ ಮನವಿ ಮಾಡಿದೆ’ ಎಂದು ತಿಳಿಸಿದೆ. ಇದರಿಂದಾಗಿ, ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ಯುದ್ಧಗಳಂತೆ ಈ ಯುದ್ಧವೂ ದೀರ್ಘಾವಧಿಗೆ ವಿಸ್ತರಿಸಬಹುದೇ ಎಂಬ ಆತಂಕ ವ್ಯಕ್ತವಾಗಿದೆ.==
==
4 ದಿನದ ಯುದ್ಧದಲ್ಲಿ ಅಮೆರಿಕದ ₹18000 ಕೋಟಿ ಶಸ್ತ್ರಾಸ್ತ್ರ ನಷ್ಟವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧದ ಮೊದಲ 4 ದಿನಗಳಲ್ಲಿ ಅಮೆರಿಕ ಸುಮಾರು 18000 ಕೋಟಿ ರು. (2 ಬಿಲಿಯನ್ ಡಾಲರ್) ಮೌಲ್ಯದ ಶಸ್ತ್ರಾಸ್ತ್ರಗಳ ನಷ್ಟ ಅನುಭವಿಸಿದೆ ಎಂದು ಅನಡೋಲು ಸುದ್ದಿಸಂಸ್ಥೆ ವರದಿ ಮಾಡಿದೆ. ಇವುಗಳಲ್ಲಿ ಇರಾನ್ ಕ್ಷಿಪಣಿ ದಾಳಿಗೆ ನಾಶವಾದ 10000 ಕೋಟಿ ರು ಮೌಲ್ಯದ ಎಫ್‌ಪಿಎಸ್-132 ರಾಡಾರ್ ವ್ಯವಸ್ಥೆ, ಕುವೈತ್ ಆಕಸ್ಮಿಕವಾಗಿ ಹೊಡೆದುರುಳಿಸಿದ 3 ಯುದ್ಧ ವಿಮಾನದಿಂದ 3000 ಕೋಟಿ ರು. ಇನ್ನು ಮನಾಮಾ ಮತ್ತು ಬಹ್ರೈನ್‌ನ ನೌಕಾದಳದಲ್ಲಿ 170 ಕೋಟಿ ರು. ನಷ್ಟವಾಗಿದೆ ಎಂದು ತಿಳಿದುಬಂದಿದೆ.==
ಯುದ್ಧ: ಇಸ್ರೇಲ್‌ಗೆ ವಾರಕ್ಕೆ ₹2.74 ಲಕ್ಷ ಕೋಟಿ ನಷ್ಟಸರ್ಕಾರಕ್ಕೆ ವಿತ್ತ ಸಚಿವಾಲಯ ಎಚ್ಚರಿಕೆಜೆರುಸಲೇಂ: ಇರಾನ್ ಜೊತೆಗಿನ ಸಂಘರ್ಷದ ಕಾರಣ, ಇಸ್ರೇಲ್‌ನಾದ್ಯಂತ ವ್ಯಾಪಾರ ವಹಿವಾಟುಗಳಿಗೆ ಬಹುತೇಕ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ದೇಶಕ್ಕೆ ಪ್ರತಿ ವಾರ ಅಂದಾಜು 2.74 ಲಕ್ಷ ಕೋಟಿ ರು. ನಷ್ಟವಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ. ಕಳೆದ ಶನಿವಾರ ಯುದ್ಧ ಆರಂಭವಾದಾಗಿನಿಂದ ಅಗತ್ಯ ವ್ಯಾಪಾರ ಹೊರತುಪಡಿಸಿ ಉಳಿದೆಲ್ಲವುಗಳಿಗೆ ಇಸ್ರೇಲ್‌ನಲ್ಲಿ ನಿರ್ಬಂಧ ಹೇರಲಾಗಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಹೊಡೆತ ಉಂಟಾಗಿದೆ.