ಪಿಟಿಐ ನವದೆಹಲಿ
2023-24ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಶನಿವಾರ ತನ್ನ ನಿರ್ಧಾರ ಪ್ರಕಟಿಸಿದೆ.
ಶೇ.8.25ರ ಬಡ್ಡಿ ದರವು 3 ವರ್ಷದ ಗರಿಷ್ಠವಾಗಿದೆ.2021-22ನೇ ಸಾಲಿನಲ್ಲಿ ಶೇ.8.10 ಇದ್ದ ಬಡ್ಡಿ ದರವನ್ನು ಇಪಿಎಫ್‌ಒ, 2022-23ರಲ್ಲಿ ಶೇ.8.15ಕ್ಕೆ ಹೆಚ್ಚಿಸಿತ್ತು.
ಈಗ ಮತ್ತೆ ಶೇ.0.10ರಷ್ಟು ಹೆಚ್ಚಿಸಿ ಭವಿಷ್ಯ ನಿಧಿ ಚಂದಾದಾರರಿಗೆ ಖುಷಿಯ ಸಮಾಚಾರ ನೀಡಿದೆ.ಪರಿಷ್ಕೃತ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳಿಸಲಾಗುತ್ತದೆ.
ಸರ್ಕಾರದ ಅನುಮೋದನೆಯ ನಂತರ, 2023-24ರ ಬಡ್ಡಿ ದರ 6 ಕೋಟಿ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ. ಇದಕ್ಕೂ ಮುನ್ನ 2022ರ ಮಾರ್ಚ್‌ನಲ್ಲಿ, ಶೇ.8.5 ಇದ್ದ ಬಡ್ಡಿ ದರವನ್ನು ಶೇ.8.1ಕ್ಕೆ ಇಪಿಎಫ್‌ಒ ಇಳಿಸಿತ್ತು.
ಇದು 1977-78ರ ನಂತರದ ಅತಿ ಕನಿಷ್ಠ ಬಡ್ಡಿ ದರವಾಗಿತ್ತು. ಇದು ನೌಕರರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು.