ನವದೆಹಲಿ: ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಂಸತ್ತಿಗೆ ನಮೋ ಹ್ಯಾಟ್ರಿಕ್ ಎಂಬ ಅಡಿಬರಹ ಬರೆದಿರುವ ಕೇಸರಿ ವರ್ಣದ ಸ್ವೆಟರ್ ಧರಿಸಿ ಬಂದು ಗಮನ ಸೆಳೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಮೂರನೇ ಬಾರಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದೆ.
ಅಲ್ಲದೆ ಮುಂದಿನ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ಮೂಲಕ ಅಭಿವೃದ್ಧಿ ಹೊಂದಿದ ದೇಶವಾಗಲಿದೆ’ ಎಂದು ತಿಳಿಸಿದರು.
ಈ ಬಟ್ಟೆಯೊಂದಿಗೆ ಸಂಸತ್ ಎದುರಿಗೆ ನಿಂತಿರುವ ದೃಶ್ಯವನ್ನು ಸಚಿವರು ಟ್ವೀಟ್ ಸಹ ಮಾಡಿದ್ದು, ‘ಮೂರನೇ ಬಾರಿ ಮೋದಿ ಸರ್ಕಾರ ರಚಿಸಲಿದ್ದು, 400ಕ್ಕೂ ಹೆಚ್ಚು ಸ್ಥಾನ ಮೈತ್ರಿಕೂಟಕ್ಕೆ ಲಭಿಸಲಿದೆ’ ಎಂಬ ಬಿಜೆಪಿ ಘೋಷವಾಕ್ಯವನ್ನು ಟ್ಯಾಗ್ ಮಾಡಿದ್ದಾರೆ.