ದಿನಕ್ಕೆ ಕೇವಲ 3.5 ಗಂಟೆ ನಿದ್ದೆ ಮಾಡ್ತಾರಂತೆ ಪ್ರಧಾನಿ ನರೇಂದ್ರ ಮೋದಿ!

KannadaprabhaNewsNetwork | Updated : Feb 11 2024, 11:42 AM IST

ಸಾರಾಂಶ

ಮುರುಗನ್‌ ಅವರು ಪ್ರಧಾನಿ ಕೇವಲ 3.5 ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ ಮತ್ತು ರಾತ್ರಿ 6ರ ನಂತರ ಆಹಾರ ಸೇವಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೈನದಿಂದ ದಿನಚರಿ ಕುರಿತು ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಹೊರಬಂದಿದ್ದು, ಮೋದಿ ದಿನಕ್ಕೆ ಕೇವಲ 3.5 ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ.

ಅಲ್ಲದೇ ಸಂಜೆ 6 ಗಂಟೆಯ ಬಳಿಕ ಅವರು ಊಟ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಎಲ್ ಮುರುಗನ್ ತಿಳಿಸಿದ್ದಾರೆ. 

ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಶುಕ್ರವಾರದಂದು ಮೋದಿ, ಬಿಜೆಡಿ, ಆರ್‌ಎಸ್‌ಪಿ, ಟಿಡಿಪಿ, ಬಿಎಸ್‌ಪಿ ಮತ್ತು ಬಿಜೆಪಿ ನಾಯಕರನ್ನು ಸಂಸತ್ತಿನ ಕ್ಯಾಂಟೀನ್‌ಗೆ ಊಟಕ್ಕೆ ಕರೆದೊಯ್ದು, ಅವರೊಂದಿಗೆ 45 ನಿಮಿಷಗಳ ಕಾಲ ಸಮಯ ಕಳೆದಿದ್ದಾರೆ.

ಅಲ್ಲದೇ ಸ್ವತ ಮೋದಿಯೇ ಎಲ್ಲರ ಊಟದ ಬಿಲ್‌ ಪಾವತಿ ಮಾಡಿದ್ದಾರೆ. ಈ ವೇಳೆ ಮೋದಿ ಅವರೊಂದಿಗೆ ಭಾಗಿಯಾಗಿದ್ದ ಮುರುಗನ್‌ ‘ಪ್ರಧಾನಿ ಮೋದಿ ಅವರು ತಮ್ಮ ದಿನಚರಿ, ವ್ಯಾಯಾಮ ಮತ್ತು ಅವರ ವಿದೇಶಿ ಪ್ರವಾಸಗಳ ಬಗ್ಗೆ ಮಾತನಾಡಿದರು. 

ನಾವು ಅವರೊಂದಿಗೆ 45 ನಿಮಿಷಗಳನ್ನು ಕಳೆದೆವು. ನಾವು ಅವರಿಂದ ಅನೇಕ ಸ್ಪೂರ್ತಿದಾಯಕ ವಿಷಯಗಳನ್ನು ಕಲಿತಿದ್ದೇವೆ. ಅವರು ದಿನಕ್ಕೆ ಕೇವಲ 3.5 ಗಂಟೆಗಳ ಕಾಲ ಮಲಗುತ್ತಾರೆ ಮತ್ತು ಸಂಜೆ 6 ಗಂಟೆಯ ನಂತರ ಊಟ ಮಾಡುವುದಿಲ್ಲ’ ಎಂದರು.

Share this article