ಗಲ್ಲು ಶಿಕ್ಷೆಗೆ ಗುರಿಯಾದ 561 ಜನ ಕೈದಿಗಳು ಜೈಲಿನಲ್ಲಿರುವುದು ಅಥವಾ ಇನ್ನೂ ಶಿಕ್ಷೆಯನ್ನು ಅನುಭವಿಸದೇ ಜೈಲುವಾಸದಲ್ಲಿ ಇಷ್ಟು ಜನ ಕೈದಿಗಳು ಇರುವುದು ಕಳೆದ ಎರಡು ದಶಕಗಳಲ್ಲಿ ಇದೇ ಮೊದಲು ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
ನವದೆಹಲಿ: ದೇಶದಲ್ಲಿ ವಿವಿಧ ಜೈಲುಗಳಲ್ಲಿರುವ ಒಟ್ಟು ಕೈದಿಗಳ ಪೈಕಿ ಸುಮಾರು 561 ಕೈದಿಗಳು ಗಲ್ಲುಶಿಕ್ಷೆಗೆ ಗುರಿಯಾಗಿದ್ದವರಾಗಿದ್ದಾರೆ.
ಗಲ್ಲು ಶಿಕ್ಷೆಗೆ ಗುರಿಯಾದ ಇಷ್ಟು ಜನ ಕೈದಿಗಳು ಜೈಲಿನಲ್ಲಿರುವುದು ಅಥವಾ ಇನ್ನೂ ಶಿಕ್ಷೆಯನ್ನು ಅನುಭವಿಸದೇ ಜೈಲುವಾಸದಲ್ಲಿ ಇಷ್ಟು ಜನ ಕೈದಿಗಳು ಇರುವುದು ಕಳೆದ ಎರಡು ದಶಕಗಳಲ್ಲಿ ಇದೇ ಮೊದಲು ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.
ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಪ್ರಾಜೆಕ್ಟ್ 39ಎ ಪ್ರಕಟಿಸಿದ ‘ಭಾರತದಲ್ಲಿ ಮರಣದಂಡನೆ: ವಾರ್ಷಿಕ ಅಂಕಿಅಂಶಗಳ ವರದಿ’ಯ ಎಂಟನೇ ಆವೃತ್ತಿಯಲ್ಲಿ ಈ ಅಂಶಗಳಿವೆ.
ಈ ವರದಿ ಪೈಕಿ 2023ರಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಮರಣದಂಡನೆಯನ್ನು ವಿಧಿಸಿಲ್ಲ. ಇನ್ನು ಹೈಕೋರ್ಟ್‌ಗಳ ಪೈಕಿ ಕರ್ನಾಟಕ ಹೈಕೋರ್ಟ್ ಮಾತ್ರವೇ ಕೇವಲ 1 ಮರಣದಂಡನೆ ವಿಧಿಸಿದೆ.
ಅಲ್ಲದೇ 2015ರಿಂದ ಮರಣದಂಡನೆಗೊಳಗಾದ ಪ್ರಸ್ತುತ ಕೈದಿಗಳ ಸಂಖ್ಯೆಯಲ್ಲಿ ಈ ಬಾರಿ ಶೇ.45.71ರಷ್ಟು ಹೆಚ್ಚಾಗಿದೆ. ವಿಚಾರಣಾ ನ್ಯಾಯಾಲಯಗಳು 2023ರಲ್ಲಿ 120 ಮರಣದಂಡನೆಗಳನ್ನು ವಿಧಿಸಿವೆ.
ಅದಾಗ್ಯೂ ಮರಣದಂಡನೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯಗಳಿಂದ ಮತ್ತೆ ಮರಣದಂಡನೆ ದೃಢೀಕರಣದ ಪ್ರಮಾಣ ಈ ಬಾರಿ ಅತಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.