ನವದೆಹಲಿ: ಭಾರತದ ಮನವಿ ಮೇರೆಗೆ 2023ರಲ್ಲಿ ಇಂಟರ್‌ಪೋಲ್ 100 ರೆಡ್ ನೋಟಿಸ್‌ಗಳನ್ನು ಹೊರಡಿಸಿದೆ. ಇದು ಒಂದು ವರ್ಷದಲ್ಲೇ ಅತ್ಯಧಿಕ ಎಂದು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕ ಪ್ರವೀಣ್ ಸೂದ್ ಗುರುವಾರ ತಿಳಿಸಿದ್ದಾರೆ.
2023ರಲ್ಲಿ ಸಿಬಿಐನ ಗ್ಲೋಬಲ್ ಆಪರೇಷನ್ ಸೆಂಟರ್ 17,368 ಅಂತರಾಷ್ಟ್ರೀಯ ನೆರವು ಮನವಿಗಳನ್ನು ಸ್ವೀಕರಿಸಿತ್ತು ಎಂದು ಹೇಳಿದರು.
==ಸೆಬಿ ಮುಖ್ಯಸ್ಥೆ ರಾಜೀನಾಮೆಗೆ ಆಗ್ರಹಿಸಿ ಸೆಬಿ ಸಿಬ್ಬಂದಿಯಿಂದಲೇ ಪ್ರತಿಭಟನೆ
==
ಶಿಮ್ಲಾ: ಸಂಜೌಲಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮಸೀದಿಯನ್ನು 15 ದಿನಗಳೊಳಗಾಗಿ ಕೆಡವುವಂತೆ ಕೋರಿ ಹಿಂದೂ ಹಕ್ಕುಗಳ ಸಂಸ್ಥೆಗಳು ವಿಧಾನಸಭೆಯ ಸಮೀಪದ ಚೌರಾ ಮೈದಾನದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.ದೇವ ಭೂಮಿ ಶಾತ್ರಿಯ ಸಂಘಟನೆ ಮತ್ತು ಹಿಂದೂ ಜಾಗರಣ ಮಂಚ್ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಕೇಸರಿ ಧ್ವಜ, ಶ್ರೀರಾಮನ ಚಿತ್ರಗಳನ್ನು ಹಿಡಿದ ಜನ ಬೀದಿಗಿಳಿದಿದ್ದಾರೆ.
==
ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಗುರುವಾರ ಮಾವೋವಾದಿ ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಿಷೇಧಿತ ಸಿಪಿಐನ 6 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಚಕಮಕಿ ವೇಳೆ ಇಬ್ಬರು ಕಮಾಂಡೋಗಳಿಗೆ ಗಾಯಗಳಾಗಿವೆ.
==
ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ತಮ್ಮನ್ನು ಸಿಬಿಐ ಬಂಧಿಸಿದ್ದನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ಮಂಗಳವಾರ ತೀರ್ಪು ಪ್ರಕಟ ಸಾಧ್ಯತೆ ಇದೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ‘ಕೇಜ್ರಿವಾಲ್ ಅವರನ್ನು ಯಾವುದೇ ಮಾನದಂಡ ಇಲ್ಲದೇ ಸಿಬಿಐ ಬಂಧಿಸಿದೆ. ಅವರ ಮೇಲೆ ಎಫ್‌ಐಆರ್ ಕೂಡ ದಾಖಲಿಸಿಲ್ಲ. ಕೇಜ್ರಿವಾಲ್ ಸಿಎಂ ಆಗಿರುವ ಕಾರಣ ಅವರು ಹೊರಬಂದರೆ ಸಮಾಜಕ್ಕೆ ತೊಂದರೆ ಇಲ್ಲ ಎಂದು ಖುದ್ದು ಸುಪ್ರೀಂ ಕೋರ್ಟ್ ಹಿಂದೊಮ್ಮೆ ಹೇಳಿತ್ತು’ ಎಂದರು.ಆದರೆ ಸಿಬಿಐ ವಕೀಲರು ಇದನ್ನು ವಿರೋಧಿಸಿ, ‘ಹಗರಣದ ಫಲಾನುಭವಿ ಕೇಜ್ರಿವಾಲ್ ಅಧ್ಯಕ್ಷತೆಯ ಆಪ್ ಪಕ್ಷ. ಅವರಿಗೆ ಜಾಮೀನು ನೀಡಿದರೆ ಜಾಮೀನು ನಿರಾಕರಿಸಿದ್ದ ಹೈಕೋರ್ಟಿನ ನೈತಿಕ ಸ್ಥೈರ್ಯ ಕುಂದುತ್ತದೆ’ ಎಂದರು. ಕೊನೆಗೆ ಕೋರ್ಟು ತೀರ್ಪು ಕಾಯ್ದಿರಿಸಿದರು.ಇ.ಡಿ. ಬಂಧನದಿಂದ ಕೇಜ್ರಿವಾಲ್‌ಗೆ ಜಾಮೀನು ಸಿಕ್ಕಿತ್ತು. ಆದರೆ ಬಳಿಕ ಜು.26 ರಂದು ಅವರನ್ನು ಸಿಬಿಐ ಬಂಧಿಸಿತ್ತು. ಆ.5 ರಂದು ಇವರ ಬಂಧನ ಕಾನೂನುಬದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಕದ ಬಡಿದಿದ್ದರು.