ವೈದ್ಯಕೀಯ ಶಿಕ್ಷಣದ ವೇಳೆ ಅಧ್ಯಯನಕ್ಕೆ ಬಳಸುವ ಪುರುಷ ಶವಗಳ ಕುರಿತು ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಅಸಭ್ಯಕರವಾಗಿ ಮಾತನಾಡಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್‌ ಪವಾರ್‌ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ.

ಮುಂಬೈ: ವೈದ್ಯಕೀಯ ಶಿಕ್ಷಣದ ವೇಳೆ ಅಧ್ಯಯನಕ್ಕೆ ಬಳಸುವ ಪುರುಷ ಶವಗಳ ಕುರಿತು ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಅಸಭ್ಯಕರವಾಗಿ ಮಾತನಾಡಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್‌ ಪವಾರ್‌ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ.

ನಿರೂಪಕ ಕೇಳಿದ ಪ್ರಶ್ನೆಗೆ ಸೇಜಲ್‌ ವಿವಾದಿತ ಉತ್ತರ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ ನಿರೂಪಕ ಕೇಳಿದ ಪ್ರಶ್ನೆಗೆ ಸೇಜಲ್‌ ವಿವಾದಿತ ಉತ್ತರ ನೀಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಆಕೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಅದರ ನಡುವೆಯೇ ಮುಂಬೈನ ಕೆಇಎಂ ಆಸ್ಪತ್ರೆಯು 15 ದಿನಗಳ ಕಾಲ ಬರದಂತೆ ಸೂಚಿಸಿದೆ.

ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಘಟನೆ

ಇದೇ ಕಾರ್ಯಕ್ರಮದಲ್ಲಿ, ಇನ್ನಿಬ್ಬರು ಯುವಕರು ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಘಟನೆಯೂ ನಡೆದಿದೆ. ಈ ಹೇಳಿಕೆಗಳು ಭಾರಿ ವೈರಲ್‌ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿವೆ.

ಪ್ರಣೀತ್ ಮೋರೆ ನಡೆಸುವ ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಭಾಗವಹಿಸಿದ್ದ ಸೇಜಲ್‌ ಪುರುಷ ಶವಗಳ ಜನನಾಂಗದ ಬಗ್ಗೆ ಮತ್ತು ಹಿಮಾಂಶು ಜಂಗ್ರಾ, ಡೇಟ್‌ಗೆ ತೆರಳುವ ಹೆಣ್ಣುಮಕ್ಕಳ ಜತೆ ಶಾರೀರಿಕ ಸಂಬಂಧ ಬೆಳೆಸುವ ವಿಚಾರವಾಗಿ ಅಶ್ಲೀಲವಾಗಿ ಮಾತಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.