ಕೊಲ್ಲಿ ದೇಶಗಳ ನೀರು ಶುದ್ಧೀಕರಣ ಘಟಕ, ರಿಫೈನರಿ, ಅನಿಲ ಘಟಕದ ಮೇಲೆ ದಾಳಿ
ಯದ್ಧ 5ನೇ ವಾರಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಶುಕ್ರವಾರ, ಕುವೈತ್‌ನ ಮಿನಾ ಅಲ್ ಅಹ್ಮದಿ ತೈಲ ಸಂಸ್ಕರಣಾ ಘಟಕ ಮತ್ತು ನೀರು ಶುದ್ಧೀಕರಣ ಘಟಕ ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ದಾಳಿ ಬಳಿಕ ಸಂಸ್ಕರಣಾ ಘಟಕದಲ್ಲಿ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಇನ್ನು ಸೌದಿ ಅರೇಬಿಯಾ, ಬಹ್ರೇನ್ ಮತ್ತು ಯುಎಇ ಮೇಲೂ ಇರಾನ್ ದಾಳಿ ನಡೆಸಿದೆ. ಯುಎಎನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಉತ್ಪಾದನಾ ಘಟಕವಾದ ಹಬ್‌ಶಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಇದನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಯುಎಇ ಹೇಳಿದೆ. ಆದರೆ ಈ ವೇಳೆ ಬಿದ್ದ ಅವಶೇಷಗಳಿಂದ ಘಟಕಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟಕದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.ಇದೇ ವೇಳೆ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಪರಮಾಣು ಕೇಂದ್ರ ಇರುವ ಇಸ್ಪ್‌ಹಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ.
ಈ ನಡುವೆ ಕ್ರೊವೇಷಿಯಾದಲ್ಲಿ ದುರಸ್ತಿಗೆ ಒಳಪಟ್ಟಿದ್ದ ಅಮೆರಿಕದ ಅತಿದೊಡ್ಡ ಯುದ್ಧನೌಕೆಯಾದ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಮರಳಿ ಇದೀಗ ರಾಷ್ಟ್ರೀಯ ಸೇವೆಗೆ ಅಣಿಯಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ. ಉಳಿದಂತೆ ಅಮೆರಿಕದ ಇನ್ನೆರೆಡು ಯುದ್ಧ ನೌಕೆಗಳಾದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಅರೇಬಿಯನ್ ಸಮುದ್ರದಲ್ಲಿ ಬೀಡುಬಿಟ್ಟಿದ್ದರೆ, ಯುಎಸ್‌ಎಸ್ ಜಾರ್ಜ್ ಎಚ್.ಡಬ್ಲ್ಯು ಬುಷ್ ನೌಕೆ ನೋರ್ಫಾಕ್‌ನಿಂದ ಮಧ್ಯಪ್ರಾಚ್ಯದತ್ತ ಪ್ರಯಾಣ ಬೆಳೆಸಿದೆ.
ಇರಾನ್ ಸೇನೆಗೆ 12 ವರ್ಷದ
ಟೆಹ್ರಾನ್: ಅಮೆರಿಕ ಭೂದಾಳಿಗೆ ಸಜ್ಜಾಗುತ್ತಿರುವ ವರದಿಗಳ ನಡುವೆಯೇ, ಇರಾನ್‌ನ ಅರೆಸೇನಾಪಡೆಯಾದ ರೆವಲ್ಯೂನರಿ ಗಾರ್ಡ್ಸ್ ತನ್ನ ಬಸಿಜ್ ಪಡೆಗೆ 12 ವರ್ಷದ ಚಿಕ್ಕಮಕ್ಕಳನ್ನೂ ನೇಮಕ ಮಾಡಿಕೊಳ್ಳುತ್ತಿದೆ ಎಂದು ಆಮ್ನೆಸ್ಟಿ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಚಿಕ್ಕಮಕ್ಕಳ ಕೈಗೆ ಕಲಾಶ್ನಿಕೋವ್‌ನಂಥ ಅತ್ಯಾಧುನಿಕ ಗನ್‌ಗಳನ್ನು ಕೊಟ್ಟು ಅವರನ್ನು ತಪಾಸಣಾ ಕೇಂದ್ರಗಳ ಬಳಿಕ, ಪಹರೆಗೆ ನಿಯೋಜಿಸಲಾಗುತ್ತಿದೆ ಎಂದು ಸಂಸ್ಥೆ ಹೇಳೀದೆ.
5 ಭಾರತೀಯರಿಗೆ ಗಾಯ
=
ಟೆಹ್ರಾನ್: ‘ಹೋರ್ಮುಜ್ ನಿಯಂತ್ರಣ ನಮ್ಮ ಮತ್ತು ಒಮಾನ್ ಕೈಲಿದೆ’ ಎಂದಿದ್ದ ಇರಾನ್, ಆ ಜಲಸಂಧಿಯ ನಿರ್ವಹಣೆಯನ್ನು ಒಮಾನ್ ಜತೆ ಸೇರಿ ನಡೆಸಲು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯ ಉದ್ದೇಶ, ಆ ಮಾರ್ಗದಲ್ಲಿ ಸುರಕ್ಷಿತ ಸಾಗಣೆ ಸುಗಮಗೊಳಿಸಲು ಹಡಗುಗಳಿಗೆ ಉತ್ತಮ ಸೇವೆ ಒದಗಿಸುವುದು ಎನ್ನಲಾಗಿದೆ. ಆದರೆ ಈ ಬಗ್ಗೆ ಒಮಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.