ಹೋರ್ಮುಜ್‌ ಸಂಪೂರ್ಣ ಮುಕ್ತ : ಇರಾನ್‌ ಘೋಷಣೆ

KannadaprabhaNewsNetwork |  
Published : Apr 18, 2026, 03:45 AM IST
Donald Trump

ಸಾರಾಂಶ

ಫೆ.28ರಂದು ಅಮೆರಿಕ-ಇರಾನ್‌ ಯುದ್ಧ ಆರಂಭವಾದಾಗಿನಿಂದಲೂ ಬಂದ್‌ ಆಗಿದ್ದ ಹೋರ್ಮುಜ್‌ ಜಲಸಂಧಿಯನ್ನು ಎಲ್ಲಾ ವಾಣಿಜ್ಯ ನೌಕೆಗಳಿಗೆ ಸಂಪೂರ್ಣವಾಗಿ ಮುಕ್ತಗೊಳಿಸುತ್ತಿರುವುದಾಗಿ ಇರಾನ್‌ ಶುಕ್ರವಾರ ಘೋಷಿಸಿದೆ. ಇದು ಇಸ್ರೇಲ್‌-ಲೆಬನಾನ್‌ ನಡುವಿನ 10 ದಿನಗಳ ಕದನ ವಿರಾಮ ಅಂತ್ಯವಾಗುವವರೆಗೆ ಅನ್ವಯವಾಗಲಿದೆ.

 ಟೆಹ್ರಾನ್: ಫೆ.28ರಂದು ಅಮೆರಿಕ-ಇರಾನ್‌ ಯುದ್ಧ ಆರಂಭವಾದಾಗಿನಿಂದಲೂ ಬಂದ್‌ ಆಗಿದ್ದ ಹೋರ್ಮುಜ್‌ ಜಲಸಂಧಿಯನ್ನು ಎಲ್ಲಾ ವಾಣಿಜ್ಯ ನೌಕೆಗಳಿಗೆ ಸಂಪೂರ್ಣವಾಗಿ ಮುಕ್ತಗೊಳಿಸುತ್ತಿರುವುದಾಗಿ ಇರಾನ್‌ ಶುಕ್ರವಾರ ಘೋಷಿಸಿದೆ. ಇದು ಇಸ್ರೇಲ್‌-ಲೆಬನಾನ್‌ ನಡುವಿನ 10 ದಿನಗಳ ಕದನ ವಿರಾಮ ಅಂತ್ಯವಾಗುವವರೆಗೆ ಅನ್ವಯವಾಗಲಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಇರಾನ್‌

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ‘ಹೋರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳ ಮಾರ್ಗವನ್ನು ಲೆಬನಾನ್‌ ಕದನ ವಿರಾಮದ ಉಳಿದ ಅವಧಿಯವರೆಗೆ ಸಂಪೂರ್ಣವಾಗಿ ಮುಕ್ತವೆಂದು ಘೋಷಿಸಲಾಗಿದೆ’ ಎಂದಿದ್ದಾರೆ.

ಇರಾನ್‌ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ ಸ್ವಾಗತಿಸಿದ್ದು, ‘ಥ್ಯಾಂಕ್‌ ಯೂ’ ಎಂದಿದ್ದಾರೆ.

ಹೋರ್ಮುಜ್‌ ತೆರವು ಮಾಡಲು ಇರಾನ್‌ ಒಪ್ಪಿದೆ

ಇತ್ತೀಚೆಗೆ ಅಮೆರಿಕ ತಾತ್ಕಾಲಿಕ ಕದನವಿರಾಮ ಸಾರಿದರೂ, ಲೆಬನಾನ್‌ ಮೇಲೆ ಇಸ್ರೇಲ್‌ ಯುದ್ಧ ಮುಂದುವರಿಸಿದೆ. ಆ ಯುದ್ಧ ನಿಲ್ಲುವವರೆಗೆ ಹೋರ್ಮುಜ್‌ ಮುಕ್ತ ಮಾಡಲ್ಲ ಎಂದು ಇರಾನ್ ಹೇಳಿತ್ತು. ಈಗ ಲೆಬನಾನ್ ಮೇಲೆ ಇಸ್ರೇಲ್‌ 10 ದಿನ ಯುದ್ಧ ನಿಲ್ಲಿಸುವುದಾಗಿ ಹೇಳಿರುವ ಕಾರಣ ಹೋರ್ಮುಜ್‌ ತೆರವು ಮಾಡಲು ಇರಾನ್‌ ಒಪ್ಪಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್ಸಿಂದ ಭ್ರೂಣಹತ್ಯೆಯಂಥ ಪಾಪ ಕೃತ್ಯ : ಮೋದಿ
ಮೋದಿ ಸರ್ಕಾರದ ಮೊದಲ ಮಸೂದೆ ಮಹಿಳಾ ಮೀಸಲಿಗೆ ಸೋಲು