ಪ್ರವಾದಿ ಮೊಹಮ್ಮದ್‌ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ : ಪಾಪ್‌ ಗಾಯಕಗೆ ಇರಾನ್‌ನಲ್ಲಿ ಗಲ್ಲು

KannadaprabhaNewsNetwork |  
Published : Jan 21, 2025, 12:31 AM ISTUpdated : Jan 21, 2025, 04:58 AM IST
jail

ಸಾರಾಂಶ

ಟೆಹ್ರಾನ್‌: ಪ್ರವಾದಿ ಮೊಹಮ್ಮದ್‌ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪಾಪ್‌, ರ್‍ಯಾಪ್‌ ಗಾಯಕ ಅಮೀರ್‌ ಹೊಸ್ಸೇನ್‌ ಮಗಸೋಡ್ಲು ಅವರಿಗೆ ಇರಾನ್‌ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

ಟೆಹ್ರಾನ್‌: ಪ್ರವಾದಿ ಮೊಹಮ್ಮದ್‌ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪಾಪ್‌, ರ್‍ಯಾಪ್‌ ಗಾಯಕ ಅಮೀರ್‌ ಹೊಸ್ಸೇನ್‌ ಮಗಸೋಡ್ಲು ಅವರಿಗೆ ಇರಾನ್‌ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

ಈಗಾಗಲೇ ಹಲವು ಪ್ರಕರಣದಲ್ಲಿ ಇರಾನ್‌ ವಶದಲ್ಲಿರುವ ಅಮೀರ್‌, ವೇಶ್ಯಾವಾಟಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಶಿಕ್ಷೆ ಇನ್ನು ಅಂತಿಮವಾಗಿಲ್ಲ, ಮೇಲ್ಮನವಿ ಸಲ್ಲಿಸಬಹುದು ಎಂದು ವರದಿಯೊಂದು ಹೇಳಿದೆ.

2018ರಿಂದ ಟರ್ಕಿಯಲ್ಲಿದ್ದ ಅಮೀರ್‌ನನ್ನು ಇರಾನ್‌ ಕೋರಿಕೆ ಮೇರೆಗೆ ಟರ್ಕಿ ಪೊಲೀಸರು ಹಸ್ತಾಂತರಿಸಿದ್ದರು.

ಅಮೀರ್‌ ತಮ್ಮ ಮೈತುಂಬಾ ಟ್ಯಾಟೂಗಳನ್ನು ಹಾಕಿಕೊಂಡು ಖ್ಯಾತರಾಗಿದ್ದು, ಇವರನ್ನು ಟ್ಯಾಟಲೂ ಎಂದು ಕರೆಯಲಾಗುತ್ತದೆ.

ಚೀನಾ: ಕಾರು ಹರಿಸಿ 35 ಜನರ ಕೊಂದವ ನೇಣುಗಂಬಕ್ಕೆ

ಬೀಜಿಂಗ್‌: ಚೀನಾ ರಾಜಧಾನಿಯ ಸ್ಟೇಡಿಯಂನ ಹೊರಭಾಗದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ ಕಾರು ಚಲಾಯಿಸಿ 35 ಜನರ ಸಾವಿಗೆ ಕಾರಣನಾದ ಫಾನ್ ವಿಕ್ಯು (62) ಎಂಬ ವ್ಯಕ್ತಿಯನ್ನು ಗಲ್ಲಿಗೇರಿಸಲಾಗಿದೆ.ವಿವಾಹ ವಿಚ್ಛೇದನದ ಬಳಿಕ ಆಸ್ತಿ ಪಾಲಾದ ಸಿಟ್ಟಿನಲ್ಲಿ, ಕಳೆದ ವರ್ಷ ಝುಹಾಯ್ ಸಿಟಿಯಲ್ಲಿ ನಡೆಯಬೇಕಿದ್ದ ಚೀನಾ ಮಿಲಿಟರಿಯ ಪ್ರತಿಷ್ಠಿತ ಏರ್ ಶೋನ ಹಿಂದಿನ ದಿನ ಆತ ಭೀಕರ ಕಾರು ಅಪಘಾತ ನಡೆಸಿದ್ದ. ಪ್ರಕರಣದಲ್ಲಿ 35 ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಇದರ ವಿಚಾರಣೆ ನಡೆಸಿದ್ದ ಕೋರ್ಟ್‌, ‘ಆತನ ಉದ್ದೇಶ ಅತ್ಯಂತ ಕೆಟ್ಟದಾಗಿದ್ದು, ಅಪರಾಧ ನಡೆಸಿದ ವಿಧಾನವೂ ಅತಿ ಕ್ರೂರವಾಗಿದೆ’ ಎಂದು ತಿಳಿಸಿ, ಗಲ್ಲು ಶಿಕ್ಷೆಗೆ ಆದೇಶಿಸಿತ್ತು. ಇದಾದ ತಿಂಗಳೊಳಗೇ ಗಲ್ಲಿಗೇರಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ