;Resize=(412,232))
ಮುರ್ಷಿದಾಬಾದ್: ಅನಿರೀಕ್ಷಿತ ನಡೆಯಂತೆ ಗಾಯನಕ್ಕೆ ಹಠಾತ್ ನಿವೃತ್ತಿ ಘೋಷಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದವರಾದ ಅರಿಜಿತ್ ಸಿಂಗ್ ಅವರು ಪಕ್ಷ ಸ್ಥಾಪಿಸುವ ಮೊದಲು ವೈಯಕ್ತಿಕವಾಗಿ ಚುನಾವಣೆ ಎದುರಿಸಲಿದ್ದಾರೆ ರಾಜಕೀಯ ಜೀವನ ಶುರು ಮಾಡಲಿದ್ದಾರೆ. ಆದರೆ 2026ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ತಿರುವನಂತಪುರ: ಈ ವರ್ಷ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕೇರಳದಲ್ಲಿ ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಜನರಿಗೆ ಭರಪೂರ ಕೊಡಗೆಗಳನ್ನು ನೀಡಿದೆ.ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ಪರ ಬಜೆಟ್ ಮಂಡಿಸಿದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಅವರು, ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 1000 ರು., ಅಂಗನವಾಡಿ ಸಹಾಯಕರ ಗೌರವಧನ ಮೊತ್ತವನ್ನು 500 ರು., ಅದೇ ರೀತಿ ಪ್ರಾಥಮಿಕ ಪೂರ್ವ ಶಾಲೆಯ ಶಿಕ್ಷಕರ ವೇತನ ತಿಂಗಳಿಗೆ 1,000 ರು. ಮತ್ತು ಶಾಲೆಯ ಅಡುಗೆ ಸಿಬ್ಬಂದಿ ವೇತನವನ್ನು ದಿನಕ್ಕೆ 25 ರು. ಹೆಚ್ಚಿಸುವುದಾಗಿ ಭರವಸೆ ಕೊಟ್ಟಿದ್ದಾರೆ.
ಬೀಜಿಂಗ್: ಜಗತ್ತಿನ ಇತರ ದೇಶಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರದ ನಡುವೆ ಚೀನಾ ಮತ್ತು ಬ್ರಿಟನ್ ಒಗ್ಗಟ್ಟು ಪ್ರದರ್ಶನ ಮಾಡಿವೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗಿ ಪಾಲುದಾರಿಕೆ ಸಭೆ ನಡೆಸಿದ್ದಾರೆ.ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಉಭಯ ನಾಯಕರು ಗುರುವಾರ ಭೇಟಿಯಾಗಿ ಸಭೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಎರಡು ದೇಶಗಳ ನಡುವಿನ ಸಂಬಂಧ ಹದೆಗೆಟ್ಟಿತ್ತು. 8 ವರ್ಷಗಳಲ್ಲಿ ಬ್ರಿಟನ್ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿದ್ದಾರೆ. ಎರಡು ರಾಷ್ಟ್ರಗಳ ಸಂಬಂಧ ವೃದ್ಧಿಗಾಗಿ ಪರಸ್ಪರ ಮಾತುಕತೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಟ್ರಂಪ್ ಹೆಸರು ಉಲ್ಲೇಖಿಸದಿದ್ದರೂ ಅಮೆರಿಕ ತೆರಿಗೆ ಕಿರಿಕಿರಿ ನಡುವೆ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಕೊಲಂಬಿಯಾದಲ್ಲೂ ವಿಮಾನ ಪತನ: ಸಂಸದ ಸೇರಿ 15 ಮಂದಿ ದುರ್ಮರಣ
ಬೊಗೋಟಾ: ಮಹಾರಾಷ್ಟ್ರ ವಿಮಾನ ಪತನದಲ್ಲಿ ದುರ್ಮರಣ ಹೊಂದಿದ ಡಿಸಿಎಂ ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ಮತ್ತೊಂದು ಅವಘಡ ಕೊಲಂಬಿಯಾದಲ್ಲಿ ಸಂಭವಿಸಿದೆ. ಅಲ್ಲಿ ಲಘು ವಿಮಾನ ಪತನವಾಗಿದ್ದು ಸಂಸದ ಸೇರಿ 15 ಮಂದಿ ಅಸುನೀಗಿದ್ದಾರೆ.ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ಓಕಾನಾಗೆ ತೆರಳುತ್ತಿದ್ದ ವೇಳೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಮತ್ತು 13 ಪ್ರಯಾಣಿಕರು ತೆರಳುತ್ತಿದ್ದರು. ಇದರಲ್ಲಿ ಸಂಸದ ಡಯೋಜೆನೆಸ್ ಕ್ವಿಂಟೆರೊ ಕೂಡ ಇದ್ದರು. ದುರಾದೃಷ್ಟವಶಾತ್ 15 ಮಂದಿಯೂ ಸಾವನ್ನಪ್ಪಿದ್ದು ಯಾರೊಬ್ಬರು ಬದುಕುಳಿದಿಲ್ಲ.