ನೊಯ್ಡಾ: ಸದ್ಗುರು ನೇತೃತ್ವದ ಈಶ ಫೌಂಡೇಶನ್ ಇದೀಗ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ವಿಮಾನ ನಿಲ್ದಾಣದ ಬಳಿ ಬರೋಬ್ಬರಿ 242 ಅಡಿ ಎತ್ತರದ ಬೃಹತ್ ಆದಿಯೋಗಿ ಶಿವನ ಪ್ರತಿಮೆ ಸ್ಥಾಪಿಸಲು ಯೋಜಿಸಿದೆ.
ಈ ಯೋಜನೆಗೆ ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯವು ಯೋಜನೆಗೆ ತಾತ್ವಿಕ ಅನುಮೋದನೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಮೆ ಸ್ಥಾಪನೆ ಅದಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳಿಗಾಗಿ ನೋಯ್ಡಾ ಸೆಕ್ಟರ್- 23ಡಿ ಯಲ್ಲಿನ ಅಮರಪುರ್ ಪಾಲಕಾ ಗ್ರಾಮದ ಬಳಿ ಒಟ್ಟು 200 ಎಕರೆ ಭೂಮಿಗಾಗಿ ಇಶಾ ಫೌಂಡೇಶನ್, ಸ್ಥಳೀಯ ಯಮುನಾ ಪ್ರಾಧಿಕಾರದ ಬಳಿ ವಿನಂತಿಸಿದೆ.
ಸದ್ಯ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಕೇರಳದ ಕೊಯಮತ್ತೂರುಗಳಲ್ಲಿ ತಲಾ 1 ಸೇರಿ ಇಶಾ ಫೌಂಡೇಶನ್ ಎರಡು ಆದಿಯೋಗಿ ಪ್ರತಿಮೆ ಸ್ಥಾಪಿಸಿದೆ.
ಇವು ಸ್ಥಳೀಯವಾಗಿ ಉತ್ತರ ಪ್ರವಾಸಿ ತಾಣಗಳಾಗಿ ಹೊರಹೊಮ್ಮಿವೆ. ಇವುಗಳ ಬಳಿ ಇಶಾ ನಿರ್ಮಾಣ ಮಾಡಲಿರುವ ಮೂರನೇ ಆದಿಯೋಗಿ ಪ್ರತಿಮೆ ಇದಾಗಿರಲಿದೆ.