ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾಗಿ ಒಂದು ವರ್ಷ ತುಂಬಿದ ಹಿನ್ನೆಲೆ : ಇಸ್ರೇಲ್‌ನಲ್ಲಿ ಹೈ ಅಲರ್ಟ್‌

KannadaprabhaNewsNetwork |  
Published : Oct 07, 2024, 01:33 AM ISTUpdated : Oct 07, 2024, 05:26 AM IST
ಹಮಾಸ್‌ | Kannada Prabha

ಸಾರಾಂಶ

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಆರಂಭವಾಗಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಯುದ್ಧದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದೀಗ ಹಿಜ್ಬುಲ್ಲಾ ಉಗ್ರರು ಮತ್ತು ಇಸ್ರೇಲ್ ನಡುವೆ ಸಂಘರ್ಷ ಜೋರಾಗಿದೆ.

ಟೆಲ್‌ ಅವೀವ್: ಮಧ್ಯ ಪ್ರಾಚ್ಯದಲ್ಲಿ ಭಾರೀ ಬಿಕ್ಕಟ್ಟಿಗೆ ಕಾರಣವಾಗಿದ್ದ ಇಸ್ರೇಲ್ ಮತ್ತು ಹಮಾಸ್‌ ನಡುವೆ ಯುದ್ಧ ಆರಂಭವಾಗಿ ಅ.7ಕ್ಕೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.ಇಸ್ರೇಲ್ ಸೇನೆ ತನ್ನ ಸೈನಿಕರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ. ಅಲ್ಲದೇ, ‘ಇತ್ತೀಚೆಗೆ ಇರಾನ್ ತಮ್ಮ ದೇಶದ ಮೇಲೆ ಮಾಡಿದ ಕ್ಷಿಪಣಿ ದಾಳಿಗೆ ಸೇಡು ತೀರಿಸಿಕೊಳ್ಳಲು ಇಸ್ರೇಲ್‌ನ ಮಿಲಿಟರಿ ಪಡೆಗಳು ಸಜ್ಜಾಗಿವೆ. ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ’ ಎಂದು ಇಸ್ರೇಲ್‌ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿದ್ದಾರೆ.

1 ವರ್ಷದಲ್ಲಿ 50 ಸಾವಿರ ಜನರು ಸಾವು:ಕಳೆದ ವರ್ಷ ಅ.7ರಂದು ಇಸ್ರೇಲ್ ಮತ್ತು ಹಮಾಸ್‌ ನಡುವೆ ಯುದ್ಧ ಆರಂಭವಾಗಿತ್ತು. ಇಸ್ರೇಲ್‌ನೊಳಗೆ ನುಗ್ಗಿ ಹಮಾಸ್‌ ಉಗ್ರರು 1300ಕ್ಕೂ ಹೆಚ್ಚು ಇಸ್ರೇಲಿ ಅಮಾಯಕ ನಾಗರಿಕರ ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್, ಹಮಾಸ್‌ ವಶದಲ್ಲಿದ್ದ ಗಾಜಾ ಪಟ್ಟಿ ವಶಕ್ಕೆ ತೆಗೆದುಕೊಳ್ಳು ನಿರಂತರ ವಾಯುದಾಳಿ ಹಾಗೂ ಭೂದಾಳಿ ಆರಂಭಿಸಿತ್ತು. ಈ ಯುದ್ಧದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಲಕ್ಷಾಂತರ ಜನರು ಗಾಯಗೊಂಡಿದ್ದಾರೆ.

ಈಗ ಹಿಜ್ಬುಲ್ಲಾದತ್ತ ಗಮನ:ಹಮಾಸ್‌ ನಡುವಿನ ಯುದ್ಧದ ಬಳಿಕ ಇಸ್ರೇಲ್, ಹಮಾಸ್‌ ಬೆಂಬಲಿಗರಾದ ಲೆಬನಾನ್‌ನ ಹಿಜ್ಬುಲ್ಲಾ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ್ದಾರೆ. ಹೀಗಾಗಿ ಇದೀಗ ಹಿಜ್ಬುಲ್ಲಾ ಉಗ್ರರು-ಇಸ್ರೇಲ್‌ ನಡುವೆ ಸಂಘರ್ಷ ಜೋರಾಗಿದೆ. ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ನಡೆಸಿದ ನೆಲ ಕಾರ್ಯಾಚರಣೆಯಲ್ಲಿ 1000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ