ಟೆಹ್ರಾನ್: ಅಮೆರಿಕ ದಾಳಿಯ ಕಾರಣ ಕುದಿಯುತ್ತಿರುವ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಪ್ರಕ್ರಿಯೆ ಆರಂಭಿಸಿದೆ ಎಂದು ಮೂಲಗಳು ಹೇಳಿವೆ. ಇದು ತೈಲ ಹಡಗುಗಳು ಸಾಗುವ ಪ್ರಮುಖ ಸಾಗರ ಮಾರ್ಗವಾಗಿದೆ. ಹಾರ್ಮುಜ್ ಜಲಸಂಧಿ ಬಂದ್ ಆದರೆ ತೈಲ ಹಡಗುಗಳ ಸಂಚಾರ ನಿಂತು ತೈಲ ಬೆಲೆ ಏರಿಕೆ ಆಗುವ ಆತಂಕವಿದೆ.
ದುಬೈ: ತಮ್ಮ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಮುಗಿಬಿದ್ದಿರುವ ಹೊತ್ತಿನಲ್ಲಿ, ‘ಪ್ರತಿದಾಳಿ ನಡೆಸಲು ಇರಾನ್ ಹಿಂಜರಿಯುವುದಿಲ್ಲ’ ಎಂದು ಇರಾನ್ ವಿದೇಶಾಂಗ ಸಚಿವಾಲಯ ಅಬ್ಬರಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ‘ಶತ್ರುಗಳ ಮಿಲಿಟರಿ ದಾಳಿಯನ್ನು ಎದುರಿಸಿ ನಮ್ಮ ಮಾತೃಭೂಮಿಯನ್ನು ರಕ್ಷಿಸಿಕೊಳ್ಳುವ ಸಮಯ ಬಂದಿದೆ’ ಎಂದಿದೆ.