ಇಸ್ರೇಲ್‌-ಹಮಾಸ್‌ ಕದನ ವಿರಾಮ ಜಾರಿ

KannadaprabhaNewsNetwork |  
Published : Oct 11, 2025, 12:02 AM IST
ಯುದ್ಧ  | Kannada Prabha

ಸಾರಾಂಶ

ಹಮಾಸ್‌ ಜೊತೆಗಿನ ಕದನ ವಿರಾಮ ಒಪ್ಪಂದವು ಶುಕ್ರವಾರ ಮಧ್ಯಾಹ್ನದಿಂದ ಜಾರಿಗೆ ಬಂದಿದೆ ಮತ್ತು ಸೇನಾಪಡೆಗಳು ಮುಂಚೂಣಿ ನೆಲೆಯಿಂದ ನಿಯೋಜಿತ ಸ್ಥಳಗಳಿಗೆ ಹಿಂದೆ ಸರಿಯಲು ಆರಂಭಿಸಿವೆ ಎಂದು ಇಸ್ರೇಲ್‌ ಹೇಳಿದೆ. ಈ ಮೂಲಕ 2 ವರ್ಷಗಳಿಂದ ನಡೆಯುತ್ತಿದ್ದ ಕದನದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ.

 ಟೆಲ್ ಅವಿವ್‌/ಗಾಜಾ: ಹಮಾಸ್‌ ಜೊತೆಗಿನ ಕದನ ವಿರಾಮ ಒಪ್ಪಂದವು ಶುಕ್ರವಾರ ಮಧ್ಯಾಹ್ನದಿಂದ ಜಾರಿಗೆ ಬಂದಿದೆ ಮತ್ತು ಸೇನಾಪಡೆಗಳು ಮುಂಚೂಣಿ ನೆಲೆಯಿಂದ ನಿಯೋಜಿತ ಸ್ಥಳಗಳಿಗೆ ಹಿಂದೆ ಸರಿಯಲು ಆರಂಭಿಸಿವೆ ಎಂದು ಇಸ್ರೇಲ್‌ ಹೇಳಿದೆ. ಈ ಮೂಲಕ 2 ವರ್ಷಗಳಿಂದ ನಡೆಯುತ್ತಿದ್ದ ಕದನದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಈಗಾಗಲೇ ಇಸ್ರೇಲ್‌ನ ಬಾಕಿ 48 ಒತ್ತೆಯಾಳುಗಳನ್ನು ಸೋಮವಾರದಿಂದ ಬಿಡುಗಡೆ ಮಾಡುವುದಾಗಿ ಹಮಾಸ್‌ ಗುರುವಾರ ಘೋಷಿಸಿತ್ತು. ಈ ನಡುವೆ ಶುಕ್ರವಾರ ಬೆಳಿಗ್ಗೆ ಉತ್ತರ ಗಾಜಾದಲ್ಲಿ ಭಾರೀ ಶೆಲ್ ದಾಳಿ ನಡೆದಿದೆ ಎಂದು ಪ್ಯಾಲೆಸ್ತೀನ್ ಆರೋಪಿಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್‌ ಸಂಪುಟ ಸಭೆ ಸೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಿದ್ಧಪಡಿಸಿದ್ದ ಶಾಂತಿ ಸೂತ್ರಕ್ಕೆ ಸಮ್ಮತಿಸಿ ಸೇನಾ ಹಿಂಪಡೆತ ಪ್ರಕಟಿಸಿದೆ.

ಇದರ ಬೆನ್ನಲ್ಲೇ ಗಾಜಾ ಸಿಟಿಯಲ್ಲಿ ಜನಜೀವನ ಸಹಜವಾಗುತ್ತಿದೆ ಎಂಬ ವರದಿಗಳಿವೆ.

2023ರ ಆ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ಗೆ ನುಗ್ಗಿ 1200 ಜನರನ್ನು ಸಾಯಿಸಿದ್ದರು. ಬಳಿಕ 251 ಇಸ್ರೇಲಿಗಳನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದರು. ಸುಮಾರು 2 ವರ್ಷಗಳಿಂದ ನಡೆಯುತ್ತಿರುವ ಈ ಜದನ ಈವರೆಗೆ ಸುಮಾರು 67 ಸಾವಿರ ಜನರನ್ನು ಬಲಿಪಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ