ಇಸ್ರೋ ಸ್ಪೇಡೆಕ್ಸ್‌ ಡಾಕಿಂಗ್‌ ಮಾರ್ಚ್‌ಗೆ ಮುಂದೂಡಿಕೆ?

KannadaprabhaNewsNetwork |  
Published : Jan 15, 2025, 12:45 AM IST
ಸ್ಪೇಡೆಕ್ಸ್ | Kannada Prabha

ಸಾರಾಂಶ

ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿರುವ ಇಸ್ರೋದ ಬಾಹ್ಯಾಕಾಶ ನೌಕೆಗಳ ಡಾಕಿಂಗ್‌ ಮತ್ತು ಅನ್‌ಡಾಕಿಂಗ್‌ ಪ್ರಕ್ರಿಯೆಗೆ ಇದೀಗ ಸಮಯದ ಸವಾಲು ಎದುರಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ಪ್ರಕ್ರಿಯೆ ನಡೆಯದೇ ಹೋದಲ್ಲಿ ಮತ್ತೆ ಅಂಥ ಪ್ರಯೋಗ ನಡೆಸಲು ಮಾರ್ಚ್‌ ತಿಂಗಳವರೆಗೆ ಕಾಯಬೇಕಾಗಬಹುದು ಎನ್ನಲಾಗಿದೆ.

ಬೆಂಗಳೂರು: ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿರುವ ಇಸ್ರೋದ ಬಾಹ್ಯಾಕಾಶ ನೌಕೆಗಳ ಡಾಕಿಂಗ್‌ ಮತ್ತು ಅನ್‌ಡಾಕಿಂಗ್‌ ಪ್ರಕ್ರಿಯೆಗೆ ಇದೀಗ ಸಮಯದ ಸವಾಲು ಎದುರಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ಪ್ರಕ್ರಿಯೆ ನಡೆಯದೇ ಹೋದಲ್ಲಿ ಮತ್ತೆ ಅಂಥ ಪ್ರಯೋಗ ನಡೆಸಲು ಮಾರ್ಚ್‌ ತಿಂಗಳವರೆಗೆ ಕಾಯಬೇಕಾಗಬಹುದು ಎನ್ನಲಾಗಿದೆ.

ಎರಡು ದಿನಗಳ ಹಿಂದಷ್ಟೇ ಎರಡು ನೌಕೆಯನ್ನು ಪರಸ್ಪರ 3 ಮೀಟರ್‌ ಸಮೀಪಕ್ಕೆ ತಂದು ಬಳಿಕ ಸುರಕ್ಷತೆ ದೃಷ್ಟಿಯಿಂದ ದೂರಕ್ಕೆ ಸರಿಸಲಾಗಿತ್ತು. ಈ ಪ್ರಕ್ರಿಯೆ ವೇಳೆ ಲಭ್ಯವಾದ ಮಾಹಿತಿಗಳನ್ನು ಇದೀಗ ಇಸ್ರೋ ವಿಜ್ಞಾನಿಗಳ ತಂಡ ಅಧ್ಯಯನ ಮಾಡುತ್ತಿದ್ದು, ಅದರ ಆಧಾರದಲ್ಲಿ ಡಾಕಿಂಗ್‌ ಪ್ರಕ್ರಿಯೆಗೆ ದಿನಾಂಕ ನಿಗದಿ ಮಾಡಲು ಯೋಜಿಸಿದೆ ಎನ್ನಲಾಗಿದೆ.

ಅಡ್ಡಿ ಏನು?:

ಸದ್ಯ ಸ್ಪೇಡೆಕ್ಸ್‌ ನೌಕೆಗಳನ್ನು ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸಲಾಗಿದೆ. ಭೂಮಿಕೆಯ ತಿರುಗುವಿಕೆಯ ಪರಿಣಾಮ ನೌಕೆಗಳಿರುವ ಸ್ಥಳವೂ ಬದಲಾಗುತ್ತದೆ. ಆಗ ಅವುಗಳ ಮೇಲೆ ಸತತ ನಿಗಾ ಇಡುವುದು ಕಷ್ಟಕರ. ಸೆಕೆಂಡ್‌ಗೆ 7 ಕಿ.ಮೀ. ವೇಗದಲ್ಲಿ ಚಲಿಸುವ ನೌಕೆಗಳು 90 ನಿಮಿಷದಲ್ಲಿ ಒಮ್ಮೆ ಕಕ್ಷೆಗೆ ಸುತ್ತು ಹಾಕುತ್ತಿದ್ದು, ಇದರಿಂದಾಗಿ ಭೂಮಿಯಲ್ಲಿರುವ ಕೇಂದ್ರದಿಂದ ಅವುಗಳೊಂದಿಗೆ ಕೇವಲ 15ರಿಂದ 20 ನಿಮಿಷ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿದೆ.

ಜೊತೆಗೆ ಸದ್ಯ ಇರುವ ಪೂರಕ ವಾತಾವರಣದಲ್ಲಿ ನೌಕೆಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಸೌರಶಕ್ತಿ ಲಭ್ಯವಾಗುತ್ತಿದೆ.

ಈ ಪೂರಕ ವಾತಾವರಣ ಮುಂದಿನ ಕೆಲ ದಿನಗಳ ಕಾಲ ಮಾತ್ರವೇ ಇರಲಿದೆ. ಹೀಗಾಗಿ ಈ ಅವಧಿಯಲ್ಲಿ ನೌಕೆಗಳ ಡಾಕಿಂಗ್‌ ಮತ್ತು ಅನ್‌ಡಾಕಿಂಗ್‌ ಪ್ರಕ್ರಿಯೆ ಸಾಧ್ಯವಾಗದೇ ಹೋದಲ್ಲಿ ಮತ್ತೆ ಅಂಥ ವಾತಾವರಣ ಲಭ್ಯವಾಗಲು ಮಾರ್ಚ್‌ ತಿಂಗಳವರೆಗೆ ಕಾಯಬೇಕಾಗಬಹುದು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಂಸತ್ತಲ್ಲಿ ಇ-ಸಿಗರೇಟು ಸೇದಿದ್ದು ಕೀರ್ತಿ ಆಜಾದ್: ಬಿಜೆಪಿ
ಗಾಂಧೀಜಿ ಹೆಸರು ರದ್ದತಿ ಅವರ 2ನೇ ಹತ್ಯೆಗೆ ಸಮ: ಚಿದಂಬರಂ ಕಿಡಿ