ಇಸ್ರೋದಿಂದ ಗಗನಯಾನದ 3 ಸಿದ್ಧತಾ ಪರೀಕ್ಷೆ ಯಶಸ್ವಿ

KannadaprabhaNewsNetwork |  
Published : Jul 13, 2026, 12:45 AM IST
ISRO

ಸಾರಾಂಶ

ಭಾರತದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಯತ್ತ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಕ್ರೂ (ಸಿಬ್ಬಂದಿ) ಮಾಡ್ಯೂಲ್‌ ವ್ಯವಸ್ಥೆಗೆ ಸಂಬಂಧಿಸಿದ 3 ಪರೀಕ್ಷೆಗಳನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ.

 ನವದೆಹಲಿ : ಭಾರತದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಯತ್ತ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಕ್ರೂ (ಸಿಬ್ಬಂದಿ) ಮಾಡ್ಯೂಲ್‌ ವ್ಯವಸ್ಥೆಗೆ ಸಂಬಂಧಿಸಿದ 3 ಪರೀಕ್ಷೆಗಳನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ.

ಸಮುದ್ರಕ್ಕೆ ಜಿಗಿದ ಮಾಡ್ಯೂಲ್‌ ನೀರಿನ ಮೇಲೆ ತೇಲಬೇಕು

ಬಾಹ್ಯಾಕಾಶದಿಂದ ವಾಪಸ್‌ ಬಂದ ನಂತರ ಸಮುದ್ರಕ್ಕೆ ಜಿಗಿದ ಮಾಡ್ಯೂಲ್‌ ನೀರಿನ ಮೇಲೆ ತೇಲಬೇಕು. ಇದಕ್ಕಾಗಿ ಗ್ಯಾಸ್ ಬಳಸುವ ಹೊಸ ವ್ಯವಸ್ಥೆಯನ್ನು ಮಾಡಿ ಪರೀಕ್ಷಿಸಲಾಯಿತು. ಇದು ಗಗನಯಾತ್ರಿಗಳ ಸುರಕ್ಷತೆಗೆ ತುಂಬಾ ಮುಖ್ಯ. ಈ ಮೊದಲ ಪರೀಕ್ಷೆ ಯಶಸ್ವಿಯಾಯಿತು.  

ಸಿಎಸ್‌ಯು-1 ಮತ್ತು ಸಿಎಸ್‌ಯು-2 ಎಂಬ 2 ಭಾಗಗಳನ್ನು ಟೆಸ್ಟ್

2ನೆಯದಾಗಿ, ಕ್ಯಾಪ್ಸೂಲ್ ಭೂಮಿಗೆ ಮರಳುವಾಗ ಕ್ರೂ ಮಾಡ್ಯೂಲ್‌ ಮತ್ತು ವಿದ್ಯುತ್‌, ಪ್ರೊಪಲ್ಷನ್‌ ಒದಗಿಸುವ ಭಾಗವನ್ನು ಜೋಡಿಸುವ ಕೇಬಲ್‌ಗಳು ಬೇರ್ಪಡಬೇಕು. ಹೀಗಾಗಿ ಅದರ ಸಿಎಸ್‌ಯು-1 ಮತ್ತು ಸಿಎಸ್‌ಯು-2 ಎಂಬ 2 ಭಾಗಗಳನ್ನು ಟೆಸ್ಟ್ ಮಾಡಲಾಯಿತು. ಎರಡೂ ಸರಿಯಾಗಿ ಬೇರ್ಪಟ್ಟವು. ಕ್ಯಾಪ್ಸೂಲ್‌ನ ಮೇಲಿರುವ ಕವರ್ ಪ್ಯಾರಾಚೂಟ್‌ಗಳನ್ನು ರಕ್ಷಿಸುತ್ತದೆ.  

ಪ್ಯಾರಾಚೂಟ್ ಬಿಡುವ ಮೊದಲು ಈ ಕವರ್ ಬೇರೆಯಾಗಬೇಕು. ಈ ಸಮಯದಲ್ಲಿ ಕ್ಯಾಪ್ಸೂಲ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು 3ನೇ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯು ಮೂವರು ಭಾರತೀಯ ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಗೆ ಕಳಿಸಿ, 3 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಪ್ರಯೋಗಗಳನ್ನು ನಡೆಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವ ಗುರಿ ಹೊಂದಿದೆ. ಇದನ್ನು 2027ರ ವೇಳೆಗೆ ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು
ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ