ಇಸ್ರೋ ‘ಸ್ಪೇಡೆಕ್ಸ್’ ಮಹಾಸಾಹಸಕ್ಕೆ ಶ್ರೀಕಾರ : 2 ಉಪಗ್ರಹಗಳ ಯಶಸ್ವಿಯಾಗಿ ಉಡಾವಣೆ

KannadaprabhaNewsNetwork |  
Published : Dec 31, 2024, 01:00 AM ISTUpdated : Dec 31, 2024, 04:29 AM IST
ಇಸ್ರೋ | Kannada Prabha

ಸಾರಾಂಶ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಯೋಜನೆ ಭಾಗವಾಗಿ 2 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಸೋಮವಾರ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್‌ ಡಾಕಿಂಗ್‌ ಎಕ್ಸ್‌ಪ​ರಿ​ಮೆಂಟ್‌’ (ಸ್ಪೇಡೆಕ್ಸ್‌) ಯೋಜನೆ ಭಾಗವಾಗಿ 2 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಈ ಮುನ್ನ ಸೋಮವಾರ ರಾತ್ರಿ 9.58ಕ್ಕೆ ಶ್ರೀಹರಿಕೋಟದಿಂದ ರಾಕೆಟ್‌ ಉಡಾವಣೆ ಸಮಯ ನಿಗದಿ ಆಗಿತ್ತು. ಆದರೆ ಕೆಲ ಬದಲಾ​ವಣೆಯಿಂದ 2 ನಿಮಿಷ ಮುಂದೂಡಿಕೆಯಾಗಿ ರಾತ್ರಿ 10ಕ್ಕೆ ಉಡಾವಣೆಗೊಂಡಿತು. ಇದಾದ 16 ನಿಮಿ​ಷಕ್ಕೆ- ಎಂದರೆ 10.15ಕ್ಕೆ ಮಿಶನ್‌ ಯಶ​ಸ್ವಿ​ಯಾ​ಗಿದೆ ಎಂಬ ಘೋಷಣೆ ಆಯಿತು.

‘ಎರಡೂ ಉಪಗ್ರಹಗಳು 476 ಕಿ.ಮೀ. ವೃತ್ತಾಕಾರ ಪರಿ​ಧಿಗೆ ಈಗ ಸೇರಿವೆ. ಇನ್ನು ಜ.7ರ ಸುಮಾ​ರಿ​ಗೆ ಇವುಗಳ ಡಾಕಿಂಗ್‌ (ಜೋಡಣೆ) ಕಸರತ್ತು ನಡೆಯಲಿದೆ’ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮ​ನಾಥ್‌ ಹೇಳಿ​ದ್ದಾ​ರೆ. ಇವುಗಳ ಡಾಕಿಂಗ್‌ನಲ್ಲಿ ಇಸ್ರೋ ಯಶ ಕಂಡರೆ, ಭಾರತ ಸ್ಪೇಡೆಕ್ಸ್‌ ನಲ್ಲಿ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎನ್ನಿಸಿ ಕೊಳ್ಳಲಿದೆ. ಸದ್ಯಕ್ಕೆ ಡಾಕಿಂಗ್‌ ತಂತ್ರಜ್ಞಾನವನ್ನು ಅಮೆರಿಕ, ರಷ್ಯಾ, ಚೀನಾ ಹೊಂದಿವೆ.

ಏನಿದು ಇಸ್ರೋ ಪ್ರಯೋಗ?: ಪಿಎಸ್‌ಎಲ್‌ವಿ ರಾಕೆಟ್‌ ಸಹಾಯದಿಂದ ಬಾಹ್ಯಾಕಾಶಕ್ಕೆ ಟಾರ್ಗೆಟ್‌ ಮತ್ತು ಚೇಸರ್‌ಎಂಬ 2 ಉಪಗ್ರಹಗ​ಳನ್ನು ಉಡಾವಣೆ ಮಾಡಲಾಗಿದೆ.

ಅವುಗಳಲ್ಲಿರುವ ವ್ಯವಸ್ಥೆಯ ಸಹಾಯದಿಂದ ವ್ಯೋಮನೌಕೆಗಳನ್ನು ಪರಸ್ಪರ ಸಂಧಿಸುವಂತೆ ಮಾಡುವುದು, ಸೆನ್ಸರ್‌ಗಳನ್ನು ಬಳಸಿ ಎರಡೂ ಉಪಗ್ರಹಗಳು ಒಂದಕ್ಕೊಂದು ಜೋಡಣೆ (ಡಾಕಿಂಗ್‌) ಆಗುವಂತೆ ಮಾಡುವುದು. ಬಳಿಕ ಪರ​ಸ್ಪರ ಬೇರೆ (ಅನ್‌ಡಾಕಿಂಗ್‌) ಆಗುವಂತೆ ಮಾಡು​ವುದು ಇಸ್ರೋ ನಡೆಸುತ್ತಿರುವ ಪ್ರಯೋಗ. ಹೀಗಾಗಿ ‘ಸ್ಪೇಸ್‌ ಡಾಕಿಂಗ್‌ ಎಕ್ಸ್‌ ಪರಿ​ಮೆಂಟ್‌’ (ಸ್ಪೇಡೆಕ್ಸ್‌) ಎಂಬ ಹೆಸರನ್ನು ಇದಕ್ಕೆ ಇಟ್ಟಿದೆ. ಈ ಉಪಗ್ರಹಗಳು ಹಲವು ಮುಖ್ಯ ಕಾರ್ಯ​ಗಳನ್ನು ನೆರವೇರಿಸಲಿವೆ. ಅವೆರಡು ಉಪ​ಗ್ರಹಗಳು ಪರಸ್ಪರ ಒಂದೇ ಕಕ್ಷೆ ಯಲ್ಲಿ ಅಳ​ವ​ಡಿ​ಕೆಯಾಗಿ, ಕ್ರಮೇಣ ಪರಸ್ಪರ ಸನಿಹಕ್ಕೆ ಚಲಿ​ಸ​ಲಿವೆ. ಅವೆರಡೂ ಸಾಕಷ್ಟುಹತ್ತಿರಕ್ಕೆ ಸಾಗಿದ ಬಳಿಕ, ಅವು ಒಂದಕ್ಕೊಂದು ಜೋಡಣೆಯಾಗಿ, ವಿದ್ಯುತ್‌ ಶಕ್ತಿಯನ್ನು ಹಂಚಿ ಕೊಂಡು, ಬಳಿಕ ಬೇರ್ಪಡಲಿವೆ. ಬೇರ್ಪಟ್ಟಬಳಿಕ, 2 ವರ್ಷ ಕಾಲ ಎರಡೂ ಉಪಗ್ರಹಗಳು ತಮ್ಮ ಪೇಲೋಡ್‌ ಕಾರ್ಯಾಚರಿಸಲಿವೆ.

ಏಕೆ ಈ ಪ್ರಯೋಗ?

ಈ ತಂತ್ರಜ್ಞಾನ, ಇಸ್ರೋದ ಭವಿಷ್ಯದ ಯೋಜನೆಗಳಾದ ಚಂದ್ರಯಾನ-4 ಹಾಗೂ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ‘ಭಾರತೀಯ ಅಂತರಿಕ್ಷ ಕೇಂದ್ರ’ ನಿರ್ಮಾಣಕ್ಕೆ ಅತ್ಯವಶ್ಯಕವಾ​ಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೀತಿಯಲ್ಲೇ ಇಸ್ರೋ ಕೂಡ ತನ್ನದೇ ಆದ ಸ್ವದೇಶಿ ಭಾರತೀಯ ಅಂತ​ರಿಕ್ಷ ನಿಲ್ದಾಣವನ್ನು ಸ್ಥಾಪಿಸಲು ಪ್ರಾರಂಭಿ​ಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕ​ರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ಪರಿಣತಿ ಬೇಕು. ಜೊತೆಗೆ ಮಾನವಸಹಿತ ಅಂತರಿಕ್ಷ​ಯಾನ, ಚಂದ್ರನ ಅಂಗಗಳಿಗೆ ಮನುಷ್ಯ​ರನ್ನು ಕಳುಹಿಸಿ, ವಾಪಸ್‌ ಕರೆತರಲು ಈ ತಂತ್ರಜ್ಞಾನ ಬೇಕು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾಗವತ್‌ ವಿರುದ್ಧ ನ್ಯೂಯಾರ್ಕಲ್ಲಿ ಖಲಿಸ್ತಾನಿ ಉಗ್ರರಿಂದ ಪ್ರತಿಭಟನೆ
ಇಡ್ಲಿ ಮಾರುವ ಬೆಂಗಳೂರಿನ ನಿಂಗಮ್ಮಗೆ ಮೋದಿ ಶಹಬ್ಬಾಸ್!