ಚಿಪ್ಸ್, ಬಿಸ್ಕೆಟ್, ತಂಪುಪಾನೀಯದಂಥ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಮುದ್ರಿಸುವ ಪೌಷ್ಟಿಕಾಂಶದ ಲೇಬಲ್ಗಳಲ್ಲಿ, ‘ಸೇರಿಸಲಾದ ಸಕ್ಕರೆ’ ಮತ್ತು ‘ಸೇರಿಸಲಾದ ಕೊಬ್ಬು’ ಬದಲಿಗೆ ‘ಒಟ್ಟು ಸಕ್ಕರೆ’ ಮತ್ತು ‘ಸ್ಯಾಚುರೇಟೆಡ್ ಕೊಬ್ಬು’ ಅನ್ನು ಸ್ಪಷ್ಟವಾಗಿ ಮುಂಭಾಗದ ಲೇಬಲ್ನಲ್ಲಿ ಮುದ್ರಿಸಬೇಕು
ನವದೆಹಲಿ: ಚಿಪ್ಸ್, ಬಿಸ್ಕೆಟ್, ತಂಪುಪಾನೀಯದಂಥ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಮುದ್ರಿಸುವ ಪೌಷ್ಟಿಕಾಂಶದ ಲೇಬಲ್ಗಳಲ್ಲಿ, ‘ಸೇರಿಸಲಾದ ಸಕ್ಕರೆ’ ಮತ್ತು ‘ಸೇರಿಸಲಾದ ಕೊಬ್ಬು’ ಬದಲಿಗೆ ‘ಒಟ್ಟು ಸಕ್ಕರೆ’ ಮತ್ತು ‘ಸ್ಯಾಚುರೇಟೆಡ್ ಕೊಬ್ಬು’ ಅನ್ನು ಸ್ಪಷ್ಟವಾಗಿ ಮುಂಭಾಗದ ಲೇಬಲ್ನಲ್ಲಿ ಮುದ್ರಿಸಬೇಕು. ಜೊತೆಗೆ ಮೂರೂ ಅಂಶಗಳನ್ನು ಪ್ರತ್ಯೇಕ ಷಡ್ಬುಜಾಕೃತಿ ಲೇಬಲ್ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಎಲ್ಲಾ ಅಂಶಗಳನ್ನು ಮುದ್ರಿಸುವ ಪ್ರಸ್ತಾಪ ಇದೆ
ಸದ್ಯ ಕರಡು ನಿಯಮಗಳಲ್ಲಿ ಕೇವಲ ಒಂದು ಷಡ್ಬುಜಾಕೃತಿ ಲೇಬಲ್ನಲ್ಲಿ ಎಲ್ಲಾ ಅಂಶಗಳನ್ನು ಮುದ್ರಿಸುವ ಪ್ರಸ್ತಾಪ ಇದೆ. ಆದರೆ ಅದರ ಬದಲಾಗಿ ಮೂರು ಪ್ರತ್ಯೇಕ ಲೇಬಲ್ನಲ್ಲಿ ಚಿತ್ರಸಹಿತವಾಗಿ ಈ ಉತ್ಪನ್ನವು ಹೆಚ್ಚಿನ ಕೊಬ್ಬು, ಹೆಚ್ಚಿನ ಸಕ್ಕರೆ ಮತ್ತು ಹೆಚ್ಚಿನ ಕೊಬ್ಬಿನ ಅಂಶಗಳನ್ನು ಒಳಗೊಂಡಿದೆ ಎಂದು ನಮೂದಿಸಬೇಕು. ಇಂಥ ಸ್ಪಷ್ಟ ಮಾಹಿತಿಯು ಗ್ರಾಕರಿಗೆ ಉತ್ಪನ್ನಗಳ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಮತ್ತು ಅವುಗಳ ಖರೀದಿಯ ಬಗ್ಗೆ ನಿರ್ಧರಿಸಲು ನೆರವು ನೀಡುತ್ತದೆ. ಇಂಥ ನಿಯಮಗಳು ಸೂಕ್ತವಾಗಿ ಪಾಲನೆಯಾಗುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಪೋಷಕಾಂಶದ ಮಿತಿಗಳನ್ನು ಮರುಪರಿಶೀಲಿಸಬೇಕು
ಅಲ್ಲದೆ, ಪ್ರತಿಯೊಂದು ಪೋಷಕಾಂಶದ ಮಿತಿಗಳನ್ನು ಮರುಪರಿಶೀಲಿಸಬೇಕು. ನಿಗದಿತ ಮಿತಿಯನ್ನು ಮೀರದ ಸಿಹಿ ಪಾನೀಯಗಳ ಪ್ಯಾಕೇಜ್ಗಳ ಮೇಲೆ, ಗೊಂದಲ ಮೂಡಿಸುವ ಯಾವುದೇ ಚಿಹ್ನೆಗಳನ್ನು ಬಳಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದೆ.
ಪರಿಷ್ಕೃತ ಅಂಶಗಳನ್ನು ಒಳಗೊಂಡ ಕಾನೂನು ಜಾರಿ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರವು ಆದೇಶ ಹೊರಡಿಸಿದ 4 ತಿಂಗಳಲ್ಲಿ ಹೊಸ ನಿಯಮ ಜಾರಿಗೆ ಬರಬೇಕು. ಬಳಿಕ ಕಂಪನಿಗಳಿಗೆ ಹೊಸ ಅಂಶಗಳನ್ನು ಪಾಲಿಸಲು 1 ವರ್ಷ ಅವಧಿ ಸಿಗಲಿದೆ ಎಂದು ನ್ಯಾಯಾಲಯ ಹೇಳಿದೆ.
