ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಲಿಡುತ್ತಿದ್ದಂತೆ ಮಾರಿಷಸ್‌ನಲ್ಲಿ ಮಳೆ:ಆರೋಗ್ಯ ಸಚಿವ ಸಂತಸ

KannadaprabhaNewsNetwork |  
Published : Mar 14, 2025, 12:35 AM ISTUpdated : Mar 14, 2025, 05:32 AM IST
Prime Minister Narendra Modi in Mauritius (Photo/ANI)

ಸಾರಾಂಶ

10 ವರ್ಷಗಳ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ಗೆ ನೀಡಿದ ಭೇಟಿಯ ಬಗ್ಗೆ ಮಾತನಾಡಿದ ಅಲ್ಲಿ ಆರೋಗ್ಯ ಸಚಿವ ಅನಿಲ್‌ ಕುಮಾರ್‌ ಬಚ್ಚೂ, ‘ಮೋದಿ ಅವರು ಮಾರಿಷಸ್‌ ನೆಲಕ್ಕೆ ಕಾಲಿಡುತ್ತಿದ್ದಂತೆ ಮಳೆ ಶುರುವಾಯಿತು. ಬಹಳ ದಿನಗಳಿಂದ ಬರದ ಮಳೆ ಏಕಾಏಕಿ ಸುರಿಯತೊಡಗಿತು’ ಎಂದಿದ್ದಾರೆ.

ಪೋರ್ಟ್‌ ಲೂಯಿಸ್‌: 10 ವರ್ಷಗಳ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ಗೆ ನೀಡಿದ ಭೇಟಿಯ ಬಗ್ಗೆ ಮಾತನಾಡಿದ ಅಲ್ಲಿ ಆರೋಗ್ಯ ಸಚಿವ ಅನಿಲ್‌ ಕುಮಾರ್‌ ಬಚ್ಚೂ, ‘ಮೋದಿ ಅವರು ಮಾರಿಷಸ್‌ ನೆಲಕ್ಕೆ ಕಾಲಿಡುತ್ತಿದ್ದಂತೆ ಮಳೆ ಶುರುವಾಯಿತು. ಬಹಳ ದಿನಗಳಿಂದ ಬರದ ಮಳೆ ಏಕಾಏಕಿ ಸುರಿಯತೊಡಗಿತು’ ಎಂದಿದ್ದಾರೆ.

ಉಭಯ ದೇಶಗಳ ಸಂಬಂಧದ ಬಗ್ಗೆ ಮಾತನಾಡಿದ ಅವರು, ‘ಹಲವು ದೇಶಗಳ ಪ್ರಧಾನಿಗಳು ಇಲ್ಲಿಗೆ ಬರುತ್ತಾರಾದರೂ ಮೋದಿಯವರ ಭೇಟಿ ಐತಿಹಾಸಿಕವಾದುದು. ಭಾರತ ಸೀನಿದಾಗ ಮಾರಿಷಸ್‌ಗೆ ಶೀತವಾಗುತ್ತದೆ. ಇಂತಿರುವ ನಮ್ಮ ನಡುವಿನ ಬಾಂಧವ್ಯ ಬೆಳೆಯುತ್ತಾ ಹೋಗಲಿ’ ಎಂದು ಹಾರೈಸಿದರು.

ಹೋಳಿಯಿಂದ 2ನೇ ಪಿಯು ಪರೀಕ್ಷೆಗೆ ಬರಲಾಗದಿದ್ದರೆ ಮತ್ತೆ ಅವಕಾಶ: ಸಿಬಿಎಸ್ಸಿನವದೆಹಲಿ: ಮಾ.15ರ ಹೋಳಿ ಹಬ್ಬದಂದು ನಿಗದಿಯಾಗಿರುವ 12ನೇ ತರಗತಿಯ ಹಿಂದಿ ಪರೀಕ್ಷೆಗೆ ವಿದ್ಯಾರ್ಥಿಗಳು ಹೋಗಲು ಆಗದಿದ್ದರೆ ಅವರಿಗಾಗಿ ಸಿಬಿಎಸ್‌ಸಿ ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.‘ಮಾ.15ರಂದು ನಿಗದಿಯಂತೆ ಪರೀಕ್ಷೆ ನಡೆಯಲಿದೆ. ಅಂದು ಹೋಳಿ ಹಬ್ಬವಿರುವ ಕಾರಣ ಯಾವ ವಿದ್ಯಾರ್ಥಿಗಳಿಗೆ ಹಾಜರಾಗಲು ಆಗುವುದಿಲ್ಲವೋ, ಅಂಥಹವರಿಗಾಗಿ ಮತ್ತೊಂದು ಅವಕಾಶವನ್ನು ಕಲ್ಪಿಸಲಾಗುವುದು. ಆ ದಿನಾಂಕವನ್ನು ಎಲ್ಲಾ ಪರೀಕ್ಷೆ ಮುಗಿದ ಬಳಿಕ ಇರಿಸಲಾಗುವುದು. ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬದಲಿ ದಿನ ಅವಕಾಶ ಕಲ್ಪಿಸುವ ರೀತಿಯಲ್ಲಿಯೇ ಈ ಮಕ್ಕಳಿಗೂ ಅವಕಾಶ ಕಲ್ಪಿಸಲಾಗುವುದು’ ಎಂದು ಸಿಬಿಎಸ್‌ಸಿ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್‌ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ