ಟ್ರಂಪ್‌ ಪುತ್ರಿಯ ಹತ್ಯೆಗೂ ಸಂಚು ರೂಪಿಸಿದ್ದ ಉಗ್ರ

KannadaprabhaNewsNetwork |  
Published : May 24, 2026, 03:00 AM IST
Ivanka

ಸಾರಾಂಶ

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿ ಹಲವು ಗಣ್ಯರ ಹತ್ಯೆ ಸಂಚಿನಲ್ಲಿ ಬಂಧನಕ್ಕೆ ಒಳಗಾಗಿದ್ದ ಇರಾನ್‌ ಬೆಂಬಲಿತ ಇರಾಕಿ ಉಗ್ರ ಮೊಹಮ್ಮದ್ ಬಕರ್ ಸಾದ್ ದಾವೂದ್ ಅಲ್-ಸಾದಿ, ಟ್ರಂಪ್‌ ಅವರ ಪುತ್ರಿ ಇವಾಂಕಾ ಟ್ರಂಪ್‌ ಅವರನ್ನೂ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಬಯಲಾಗಿದೆ 

 ವಾಷಿಂಗ್ಟನ್‌: ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿ ಹಲವು ಗಣ್ಯರ ಹತ್ಯೆ ಸಂಚಿನಲ್ಲಿ ಬಂಧನಕ್ಕೆ ಒಳಗಾಗಿದ್ದ ಇರಾನ್‌ ಬೆಂಬಲಿತ ಇರಾಕಿ ಉಗ್ರ ಮೊಹಮ್ಮದ್ ಬಕರ್ ಸಾದ್ ದಾವೂದ್ ಅಲ್-ಸಾದಿ, ಟ್ರಂಪ್‌ ಅವರ ಪುತ್ರಿ ಇವಾಂಕಾ ಟ್ರಂಪ್‌ ಅವರನ್ನೂ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಬಯಲಾಗಿದೆ ಎಂದು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 

ಮೇ 15 ರಂದು ಟರ್ಕಿಯಲ್ಲಿ ಬಂಧನ

ಮೇ 15 ರಂದು ಟರ್ಕಿಯಲ್ಲಿ ಬಂಧನಕ್ಕೊಳಗಾದ ನಂತರ ಇತ್ತೀಚೆಗೆ ಅಮೆರಿಕಕ್ಕೆ ಹಸ್ತಾಂತರಿಸಲ್ಪಟ್ಟಿದ್ದ. ಈ ವೇಳೆ ಇವಾಂಕಾ ಹತ್ಯೆಯ ಸಂಚು ರೂಪಿಸಿದ್ದಾಗಿ ಹೇಳಿದ್ದಾನೆ.

'ಖಾಸಿಮ್ ಸೊಲೈಮಾನಿ ಅವರನ್ನು ಡ್ರೋನ್ ದಾಳಿಯಲ್ಲಿ ಹತ್ಯೆ

2020 ರಲ್ಲಿ ಟ್ರಂಪ್ ಅವರು ಅಮೆರಿಕದ ಮೊದಲ ಅವಧಿಯಲ್ಲಿ ಇರಾನಿನ ಮಿಲಿಟರಿ ಮುಖ್ಯಸ್ಥ ಖಾಸಿಮ್ ಸೊಲೈಮಾನಿ ಅವರನ್ನು ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿಸಿದ್ದರು. ಇದಕ್ಕೆ ಪ್ರತಿಯಾಗಿ ಇವಾಂಕಾ ಅವರನ್ನು ಕೊಲ್ಲುವುದಾಗಿ ಸಾದಿ, ಪ್ರತಿಜ್ಞೆ ಮಾಡಿದ್ದ. ಸೊಲೈಮಾನಿಯನ್ನು ತನ್ನ ಮಾರ್ಗದರ್ಶಕ ಎಂದು ಆತ ನಂಬಿದ್ದ ಎಂದು ಗೊತ್ತಾಗಿದೆ.

ಅಲ್-ಸಾದಿ ನೀಡಿದ ಪ್ರತಿಜ್ಞೆ ಸುಳ್ಳಲ್ಲ. ಬಂಧನದ ವೇಳೆ, ಅತನ ಬಳಿ ಇವಾಂಕಾ ಅವರ ಫ್ಲೋರಿಡಾ ಮನೆಯ ನೀಲನಕ್ಷೆ ಪತ್ತೆಯಾಗಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್‌ಗೆ ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

40% ವಕೀಲರು ನಕಲಿ : ಬಾರ್‌ ಕೌನ್ಸಿಲ್‌ ಅಧ್ಯಕ್ಷ
ಕೇಂದ್ರ ಸಚಿವಾಲಯಪೈಕಿ ಸಚಿವ ಜೋಶಿ ಇಲಾಖೆ ನಂಬರ್‌ 1!