ಟ್ರಂಪ್‌ ಡೆಡ್‌ಲೈನ್‌ ಅಂತ್ಯ : ಕದನ ವಿರಾಮ ವಿಸ್ತರಣೆ? ಮಾತುಕತೆ

KannadaprabhaNewsNetwork |  
Published : May 24, 2026, 03:00 AM ISTUpdated : May 24, 2026, 01:15 PM IST
Donald Trump

ಸಾರಾಂಶ

‘ಇರಾನ್‌ ಭಾನುವಾರದ ಒಳಗೆ ಡೀಲ್‌ ಮಾಡಿಕೊಳ್ಳಬೇಕು ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದ ಗಡುವು ಈ ದಿನ ಅಂತ್ಯವಾಗುತ್ತಿದೆ. ಇದರ ನಡುವೆ ಕದನವಿರಾಮ 60 ದಿನ ವಿಸ್ತರಣೆ ಆಗುವ ಸಾಧ್ಯತೆ ಇದೆ’ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

 ವಾಷಿಂಗ್ಟನ್‌ :  ‘ಇರಾನ್‌ ಭಾನುವಾರದ ಒಳಗೆ ಡೀಲ್‌ ಮಾಡಿಕೊಳ್ಳಬೇಕು ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದ ಗಡುವು ಈ ದಿನ ಅಂತ್ಯವಾಗುತ್ತಿದೆ. ಇದರ ನಡುವೆ ಕದನವಿರಾಮ 60 ದಿನ ವಿಸ್ತರಣೆ ಆಗುವ ಸಾಧ್ಯತೆ ಇದೆ’ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಇರಾನ್‌ಗೆ ತೆರಳಿರುವ ಪಾಕಿಸ್ತಾನ ಹಾಗೂ ಈಜಿಪ್ಟ್‌ ಸಂಧಾನಕಾರರು

ಇರಾನ್‌ಗೆ ತೆರಳಿರುವ ಪಾಕಿಸ್ತಾನ ಹಾಗೂ ಈಜಿಪ್ಟ್‌ ಸಂಧಾನಕಾರರು ಸಂಧಾನಸೂತ್ರದ ಕರಡು ಸಿದ್ಧಪಡಿಸುತ್ತಿದ್ದಾರೆ. ಇದರಲ್ಲಿ ಹಂತಹಂತವಾಗಿ ಹೋರ್ಮುಜ್‌ ಜಲಸಂಧಿಯನ್ನು ತೆರಯುವುದು, ಇರಾನ್‌ ಯುರೇನಿಯಂ ಸಂಸ್ಕರಣೆ ನಿಲ್ಲಿಸುವುದು ಹಾಗೂ ಜಪ್ತಾದ ವಿದೇಶದಲ್ಲಿನ ಇರಾನ್‌ ಆಸ್ತಿಗಳ ಮುಟ್ಟುಗೋಲು ತೆರವು ಮಾಡುವದು- ಈ 3 ಅಂಶಗಳು ಸಂಧಾನ ಸೂತ್ರದಲ್ಲಿವೆ.

‘ಮುಂದಿನ 30ರಿಂದ 60 ದಿನಗಳ ಅವಧಿಯಲ್ಲಿ ಈ ವಿಷಯಗಳ ಕುರಿತ ಬಿಕ್ಕಟ್ಟನ್ನು ಬಗೆರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸಂಧಾನ ಸೂತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಸಂಧಾನ ಸರಿಯಾದ ದಿಕ್ಕಿನಲ್ಲಿ ಸಾಗಿದೆ’ ಎಂದು ಇರಾನ್‌ ವಿದೇಶಾಂಗ ಅಧಿಕಾರಿಗಳು ಹೇಳಿದ್ದಾರೆ.

ಟ್ರಂಪ್‌ ಕೂಡ ಈ ಬಗ್ಗೆ ಸಕಾರಾತ್ಮಕ ಭಾವನೆ

‘ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಈ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಅವರು ಈ ಬಗ್ಗೆ ಅರಬ್‌ ದೇಶಗಳ ಜತೆ ಸಭೆ ನಡೆಸಬಹುದು ಹಾಗೂ ಭಾನುವಾರ ಅಂತಿಮ ನಿರ್ಧಾರ ಪ್ರಕಟಿಸಬಹುದು’ ಎಂದು ಅಮೆರಿಕ ಮಾಧ್ಯಮಗಳು ಹೇಳಿವೆ.

ಈ ಮುನ್ನ ಸಂಧಾನ ಮಾತುಕತೆ ಮುರಿದು ಬಿದ್ದರೆ ಇರಾನ್‌ ಮೇಲೆ ಮತ್ತೆ ಸೇನಾ ಕಾರ್ಯಾಚರಣೆ ನಡೆಸಲು ಟ್ರಂಪ್‌ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

ಇದಕ್ಕೆ ಪೂರಕವಾಗಿ ವಾರಾಂತ್ಯದಲ್ಲಿ ಬಹಾಮಾದಲ್ಲಿ ನಡೆಯಬೇಕಿದ್ದ ಮಗ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಮದುವೆಗೂ ಅವರು ಗೈರಾಗಿ ವಾಷಿಂಗ್ಟನ್‌ನಲ್ಲೇ ಸಭೆ ನಡೆಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ: ಹೈಕೋರ್ಟ್‌ಗೆ ಅರ್ಜಿ