ಸಂಸ್ಕೃತ ಮೃತ ಭಾಷೆ ಎಂದ ಸ್ಟಾಲಿನ್‌ ಪುತ್ರ ಮೂರ್ಖ : ಶೃಂಗೇರಿ ಶ್ರೀ

KannadaprabhaNewsNetwork |  
Published : Nov 24, 2025, 03:45 AM IST
Sringeri

ಸಾರಾಂಶ

‘ಸಂಸ್ಕೃತ ಒಂದು ಮೃತ ಭಾಷೆ’ ಎಂಬ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ, ಡಿಸಿಎಂ ಉಧಯನಿಧಿ ವಿರುದ್ಧ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಕಿಡಿಕಾರಿದ್ದಾರೆ.

ನವದೆಹಲಿ: ‘ಸಂಸ್ಕೃತ ಒಂದು ಮೃತ ಭಾಷೆ’ ಎಂಬ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ, ಡಿಸಿಎಂ ಉಧಯನಿಧಿ ವಿರುದ್ಧ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಕಿಡಿಕಾರಿದ್ದಾರೆ. ‘ಕೆಲವು ಮೂರ್ಖರು ಸಂಸ್ಕೃತವನ್ನು ಸತ್ತ ಭಾಷೆ ಎನ್ನುತ್ತಾರೆ. ಲೆಕ್ಕವಿಲ್ಲದಷ್ಟು ಭಾಷೆಗಳಿಗೆ ಸಂಸ್ಕೃತವೇ ಮೂಲ. ಲಕ್ಷಾಂತರ ವಚನಗಳು, ವಿಜ್ಞಾನಗಳು, ಅಳಿಸದ ಜೀವಂತ ಪರಂಪರೆ ಹೊಂದಿರುವ ಭಾಷೆ ಎಂದಿಗೂ ಸಾಯುವುದಿಲ್ಲ. ಅದು ಇಡೀ ಜಗತ್ತಿಗೆ ಬುದ್ಧಿವಂತಿಕೆಯ ಖಜಾನೆ. ಮೃತ ಆಗಲು ಸಾಧ್ಯವಿಲ್ಲ. ಅದರ ಚೈತನ್ಯ ಅರಿಯಲು ಸಾಧ್ಯವಾಗದವರು ವಾಸ್ತವವಾಗಿ ನಿರ್ಜೀವ’ ಎಂದಿದ್ದಾರೆ.

ನಮೋ ಭಾರತ್‌ ರೈಲಲ್ಲಿನ್ನು ಹುಟ್ಟುಹಬ್ಬ, ಫೋಟೊಶೂಟ್‌

ನವದೆಹಲಿ: ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಸಂಚರಿಸುವ ಅತ್ಯಾಧುನಿಕ ನಮೋ ಭಾರತ್‌ ರೈಲುಗಳನ್ನು ಹುಟ್ಟುಹಬ್ಬದ ಆಚರಣೆ, ವಿವಾಹಪೂರ್ವ ಚಿತ್ರೀಕರಣ ಹಾಗೂ ಇತರ ಖಾಸಗಿ ಸಮಾರಂಭಗಳಿಗೆ ಬಾಡಿಗೆ ನೀಡುವ ವಿಶಿಷ್ಟ ಯೋಜನೆಯ ಜಾರಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (ಎನ್‌ಸಿಆರ್‌ಟಿಸಿ) ಮುಂದಾಗಿದೆ. ಇದರನ್ವಯ ಕಾರ್ಯಕ್ರಮಗಳ ಆಯೋಜಕರು, ಚಿತ್ರೀಕರಣ ಮತ್ತು ಮಾಧ್ಯಮ ಸಂಸ್ಥೆಗಳು ರೈಲಿನ ಬೋಗಿಗಳನ್ನು ಬುಕ್‌ ಮಾಡಲು ಅವಕಾಶ ಸಿಗಲಿದೆ.ನಮೋ ಭಾರತ್‌ ರೈಲುಗಳು ಆಕರ್ಷಕವಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ಇಲ್ಲಿ ಸಮಾರಂಭ ಅಥವಾ ಚಿತ್ರೀಕರಣ ಮಾಡಲು ಗಂಟೆಗೆ 5,000 ರು. ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಅಲಂಕಾರ ಮಾಡಲು ಮತ್ತು ತೆಗೆಯಲು ಹೆಚ್ಚುವರಿ ಅರ್ಧ ಗಂಟೆ ಸಿಗಲಿದೆ. ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆವರೆಗೆ ಕಾರ್ಯಕ್ರಮಗಳಿಗೆ ಅವಕಾಶವಿದೆ. ಎನ್‌ಸಿಆರ್‌ಟಿಸಿ ಅಧಿಕಾರಿಗಳ ನಿರ್ದೇಶನದಂತೆ ಕೆಲವು ನಿಯಮಗಳನ್ನು ವಿಧಿಸಲಾಗುತ್ತದೆ. ಜಾಹೀರಾತು, ಡಾಕ್ಯುಮೆಂಟರಿ ಮತ್ತಿತರ ಯೋಜನೆಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳಿವೆ ಎಂದು ಎನ್‌ಸಿಆರ್‌ಟಿಸಿ ತಿಳಿಸಿದೆ.

ಬಾಬರ್ ಹೆಸಲ್ರಿ ಮಸೀದಿ ನಿರ್ಮಿಸಿದ್ರೆ ಅಯೋಧ್ಯೆ ಗತಿ: ಉಮಾ ಭಾರತಿ

ಭೋಪಾಲ್‌: ಮುಘಲ್‌ ದೊರೆ ಬಾಬರ್ ಹೆಸರಿನಲ್ಲಿ ದೇಶದಲ್ಲಿ ಮಸೀದಿಯನ್ನು ನಿರ್ಮಿಸುವುದಕ್ಕೆ ಮುಂದಾದರೆ ಅಯೋಧ್ಯೆಯಂತೆ ಹೋರಾಟದ ರೀತಿಯಲ್ಲೇ ಗತಿ ಕಾಣಿಸುತ್ತೇವೆ’ ಎಂದು ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಎಚ್ಚರಿಕೆ ನೀಡಿದ್ದಾರೆ. ಟಿಎಂಸಿ ಶಾಸಕ ಹುಮಾಯೂನ್‌ ಕಬೀರ್‌, ಶನಿವಾರವಷ್ಟೇ ಬಂಗಾಳದಲ್ಲಿ ಬಾಬ್ರಿ ರೀತಿಯಲ್ಲಿಯೇ ಮಸೀದಿ ನಿರ್ಮಿಸಲಾಗುತ್ತದೆ ಎಂದಿದ್ದರು. ಈ ಬೆನ್ನಲ್ಲೇ ಬಿಜೆಪಿ ನಾಯಕಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ದೇವರು, ಪೂಜೆ ಮತ್ತು ಇಸ್ಲಾಂ ಹೆಸರಿನಲ್ಲಿ ನಿರ್ಮಿಸಲಾದ ಮಸೀದಿಯನ್ನು ನಾವು ಗೌರವಿ ಸುತ್ತೇವೆ. ಆದರೆ ಬಾಬರ್‌ ಹೆಸರಿನಲ್ಲಿ ನಿರ್ಮಿಸಿದರೆ 1992ರ ಡಿ.6ರಂದು ನಡೆದ ಅಯೋಧ್ಯೆಯಲ್ಲಿ ಆದ ರೀತಿಯ ಗತಿ ಕಾಣಿಸುತ್ತೇವೆ’ ಎಂದಿದ್ದಾರೆ.

ರಫೇಲ್‌ ಪತನ ಒಪ್ಪಿಲ್ಲ: ಪಾಕ್‌ ಪತ್ರಕರ್ತ ವಾದ ತಿರಸ್ಕರಿಸಿದ ಫ್ರಾನ್ಸ್‌

ನವದೆಹಲಿ: ಆಪರೇಷನ್‌ ಸಿಂದೂರದ ವೇಳೆ ಭಾರತದ ರಫೇಲ್‌ ಯುದ್ಧ ವಿಮಾನ ಪತನಗೊಂಡಿತ್ತು. ಯುದ್ಧ ವೇಳೆ ಪಾಕ್‌ ವಾಯುಪಡೆ ಮೇಲುಗೈ ಸಾಧಿಸಿತ್ತು. ಪಾಕ್‌ ಸಾಮರ್ಥವನ್ನು ಫ್ರಾನ್ಸ್‌ನ ನೌಕಾಪಡೆಯ ಹಿರಿಯ ಅಧಿಕಾರಿ ಕ್ಯಾ. ಲೌನೆ ಮೆಚ್ಚಿದ್ದರು ಎಂಬ ಪಾಕ್‌ ಪತ್ರಕರ್ತ ಹಮೀದ್‌ ಮೀರ್‌ ವಾದವನ್ನು ಫ್ರಾನ್ಸ್‌ ನೌಕಾಪಡೆ ಸ್ಪಷ್ಟವಾಗಿ ಅಲ್ಲಗಳೆದಿದೆ.ಪತ್ರಿಕೆಯೊಂದಲ್ಲಿ ಮೀರ್‌ ಬರೆದ ಲೇಖನವನ್ನು ಅಲ್ಲಗಳೆದಿರುವ ಫ್ರಾನ್ಸ್‌ನ ನೌಕಾಪಡೆ, ‘ಇದು ಸಂಪೂರ್ಣ ತಪ್ಪು ಮಾಹಿತಿ. ಕ್ಯಾ. ಲೌನೆ ಅವರು ಎಂದಿಗೂ ಈ ರೀತಿ ಪ್ರಕಟಣೆಗೆ ಒಪ್ಪಿಗೆ ನೀಡಿರಲಿಲ್ಲ’ ಎಂದಿದೆ. ಇದು ಜಾಗತಿಕವಾಗಿ ಪಾಕಿಸ್ತಾನವನ್ನು ಮತ್ತೊಮ್ಮೆ ಮುಜುಗರಕ್ಕೀಡುಮಾಡಿದೆ. ಇಂತಹದ್ದೇ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಭಾರತ ಈ ಹಿಂದೆ ಅವರ ಎಕ್ಸ್‌ ಖಾತೆಯನ್ನು ನಿಷೇಧಿಸಿತ್ತು.

PREV
Read more Articles on

Recommended Stories

ತನಿಖೆಗೆ ಬಂದ ಇ.ಡಿ ಅಧಿಕಾರಿಗೆ ಮನೆ ತೋರಿಸಿ ಉದ್ಯಮಿ ಪರಾರಿ
ಪಾಕ್‌ನ ಸಿಂಧ್‌ ನಮ್ಮ ವಶ ಆಗಬಹುದು : ರಾಜನಾಥ್‌