ಚುನಾವಣಾ ಬಾಂಡ್‌ ಪ್ರಧಾನ ಮಂತ್ರಿ ಸುಲಿಗೆ ಯೋಜನೆ: ಜೈರಾಮ್ ಆರೋಪ

KannadaprabhaNewsNetwork |  
Published : Mar 19, 2024, 12:49 AM ISTUpdated : Mar 19, 2024, 12:05 PM IST
ಜೈರಾಂ ರಮೇಶ್‌ | Kannada Prabha

ಸಾರಾಂಶ

ಸಿಬಿಐ, ಇ.ಡಿ. ದಾಳಿಗೊಳಗಾದ 21 ಸಂಸ್ಥೆಗಳಿಂದ ಚುನಾವಣಾ ಬಾಂಡ್‌ ಖರೀದಿಯಾಗಿರುವುದಾಗಿ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

ನವದೆಹಲಿ: ಚುನಾವಣಾ ಬಾಂಡ್‌ ಖರೀದಿಯಲ್ಲಿ ಮೋದಿ ಸರ್ಕಾರ ಸುಲಿಗೆ ಮಾಡಿದೆ. ಸಿಬಿಐ, ಇ.ಡಿ.ಯಿಂದ ತನಿಖೆಗೆ ಒಳಪಟ್ಟ ಒಟ್ಟು 21 ಸಂಸ್ಥೆಗಳು ದೇಣಿಗೆ ನೀಡಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಅರಬಿಂದೋ ಫಾರ್ಮಾ, ನವಯುಗ ಎಂಜಿನಿಯರಿಂಗ್ ಕಂಪನಿ ಲಿಮಿಟೆಡ್, ರುಂಗ್ಟಾ ಸನ್ಸ್ ಪ್ರೈವೆಟ್‌ ಲಿಮಿಟೆಡ್, ಹೈದರಾಬಾದ್‌ನ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಸೇರಿದಂತೆ ಒಟ್ಟು 21 ಸಂಸ್ಥೆಗಳ ಮೇಲೆ ಸಿಬಿಐ, ಇ.ಡಿ. ದಾಳಿಯಾಗಿತ್ತು. 

ಆ ಎಲ್ಲಾ ಸಂಸ್ಥೆಗಳು ಚುನಾವಣಾ ಬಾಂಡ್‌ ಖರೀದಿ ಮೂಲಕ ದೇಣಿಗೆ ನೀಡಿವೆ. ಚುನಾವಣಾ ಬಾಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳು ಸಿಗುತ್ತವೆ ಎಂದು ಆರೋಪಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌