12 ವರ್ಷದಿಂದ ಪಾಕ್‌ ಪರ ಬೇಹುಗಾರಿಕೆ : ಖಾನ್‌ ಸೆರೆ

KannadaprabhaNewsNetwork |  
Published : May 03, 2025, 12:16 AM ISTUpdated : May 03, 2025, 05:00 AM IST
ದೇಶದ್ರೋಹಿ | Kannada Prabha

ಸಾರಾಂಶ

ಹಣದ ಆಸೆಗಾಗಿ ಕಳೆದ 12 ವರ್ಷದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಪಠಾಣ್‌ ಖಾನ್‌ ಎಂಬ ವ್ಯಕ್ತಿ ಬಂಧನ

 ಜೈಸಲ್ಮೇರ್‌: ಹಣದ ಆಸೆಗಾಗಿ ಕಳೆದ 12 ವರ್ಷದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಪಠಾಣ್‌ ಖಾನ್‌ ಎಂಬ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಗುರುವಾರ ಬಂಧಿಸಿದ್ದಾರೆ. 

ತನಿಖೆ ವೇಳೆ ಈತ ಬಿಎಸ್‌ಎಫ್‌ನ ಚಲನವಲನ, ಕಾರ್ಯಚಟುವಟಿಕೆ, ಗಡಿ ನಿಯೋಜನೆ ಮೊದಲಾದ ವಿಷಯಗಳ ಬಗ್ಗೆ ಪಾಕಿಸ್ತಾನದ ಜೊತೆ ಮಾಹಿತಿ ಹಂಚಿಕೊಂಡಿರುವುದು ಪತ್ತೆಯಾಗಿದೆ.

ಖಚಿತ ಮಾಹಿತಿ ಮೇರೆಗೆ ಕಳೆದ ತಿಂಗಳು ಜೈಸಲ್ಮೇರ್‌ನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತನ್ನ ಹೆಸರು ರವಿ ಕಿಶನ್‌, ತಾವು ರೈತ ಎಂದು ಆತ ಹೇಳಿದ್ದ. ಆದರೆ ತೀವ್ರ ವಿಚಾರಣೆ ವೇಳೆ ಈತನ ಹೆಸರು ಪಠಾಣ್‌ ಖಾನ್‌ ಎಂದು ದೃಢಪಟ್ಟಿದೆ.

2013ರಲ್ಲಿ ಖಾನ್‌ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಐಎಸ್‌ಐ, ಈತನಿಗೆ ಹಣದ ಆಮಿಷ ಒಡ್ಡಿ ತನ್ನ ಪರ ಗೂಢಚರ್ಯೆಗೆ ಒಪ್ಪಿಸಿತ್ತು. ಅದರಂತೆ ಆತ 12 ವರ್ಷಗಳಿಂದ ನಿರಂತರವಾಗಿ ಐಎಸ್‌ಐಗೆ ಸೇನೆಯ ಮಾಹಿತಿಯನ್ನು ನಾನಾ ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಿದ್ದ. ಇದಕ್ಕೆ ಆತನಿಗೆ ನಿರಂತರವಾಗಿ ಹಣ ಕೂಡಾ ಪಾವತಿಯಾಗುತ್ತಿತ್ತು ಎಂಬುದು ತನಿಖೆ ವೇಳೆ ಕಂಡುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿಂದೂರದ ವೇಳೆ ಅಡಗಲು ಸೂಚನೆ ಇತ್ತು: ಜರ್ದಾರಿ
2025 ಸಾರ್ಥಕ ವರ್ಷ: ಮನ್‌ ಕಿ ಬಾತ್‌ನಲ್ಲಿ ಮೋದಿ