ಭಾರತಕ್ಕೆ ಜಪಾನ್‌ನಿಂದ 2 ಬುಲೆಟ್‌ ರೈಲು ಗಿಫ್ಟ್‌! ಮುಂಬೈ-ಅಹಮದಾಬಾದ್‌ ಮಾರ್ಗದ ಪರೀಕ್ಷೆಗೆ ಬಳಕೆ

KannadaprabhaNewsNetwork |  
Published : Apr 18, 2025, 12:38 AM ISTUpdated : Apr 18, 2025, 06:07 AM IST
ಬುಲೆಟ್‌ ರೈಲು | Kannada Prabha

ಸಾರಾಂಶ

ಭಾರತದ ಮೊದಲ ಹೈಸ್ಪೀಡ್‌ ರೈಲು ಕಾರಿಡಾರ್‌ ಆಗಿರುವ ಮುಂಬೈ-ಅಹಮದಾಬಾದ್‌ ರೈಲು ಮಾರ್ಗದಲ್ಲಿ ಪರೀಕ್ಷೆ ನಡೆಸಲು ಜಪಾನ್‌ ದೇಶವು ಭಾರತಕ್ಕೆ 2 ಬುಲೆಟ್‌ ರೈಲುಗಳನ್ನು ಉಡುಗೊರೆಯಾಗಿ ನೀಡಲಿದೆ. 2026ರ ಅಂತ್ಯಕ್ಕೆ ಈ ರೈಲುಗಳು ಭಾರತಕ್ಕೆ ಬರಲಿವೆ.

ನವದೆಹಲಿ: ಭಾರತದ ಮೊದಲ ಹೈಸ್ಪೀಡ್‌ ರೈಲು ಕಾರಿಡಾರ್‌ ಆಗಿರುವ ಮುಂಬೈ-ಅಹಮದಾಬಾದ್‌ ರೈಲು ಮಾರ್ಗದಲ್ಲಿ ಪರೀಕ್ಷೆ ನಡೆಸಲು ಜಪಾನ್‌ ದೇಶವು ಭಾರತಕ್ಕೆ 2 ಬುಲೆಟ್‌ ರೈಲುಗಳನ್ನು ಉಡುಗೊರೆಯಾಗಿ ನೀಡಲಿದೆ. 2026ರ ಅಂತ್ಯಕ್ಕೆ ಈ ರೈಲುಗಳು ಭಾರತಕ್ಕೆ ಬರಲಿವೆ.

ಶೆಂಕಸೆನ್‌ ರೈಲುಗಳು (ಬುಲೆಟ್‌ ರೈಲು) ಇ5 ಮತ್ತು ಇ3 ಮಾದರಿಗಳು ಇವಾಗಿವೆ. ಮುಂದಿನ ವರ್ಷದ ವೇಳೆ ಕಾರಿಡಾರ್‌ನ ಮೊದಲ ಹಂತ (ಸೂರತ್‌-ಬಿಲ್ಮೋರಾ ಮಾರ್ಗ) 48 ಕಿ.ಮೀ. ಮುಕ್ತಾಯಗೊಳ್ಳಲಿದ್ದು, ಅಲ್ಲಿ ಇವುಗಳನ್ನು ಓಡಿಸಿ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ ಬುಲೆಟ್‌ ರೈಲು ತಂತ್ರಜ್ಞಾನದ ಬಗ್ಗೆ ಭಾರತದ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗುತ್ತದೆ.

ಬುಲೆಟ್‌ ರೈಲು ಯೋಜನೆ ಜಪಾನ್‌ ಸಹಯೋಗದ್ದಾಗಿದೆ. ಇದು ಭಾರತ ಜಪಾನ್‌ ಸ್ನೇಹದ ಪ್ರತೀಕವಾಗಿದೆ ಎಂದು ಜಪಾನ್‌ ಟೈಮ್ಸ್‌ ವರದಿ ಮಾಡಿದೆ.

ಮುಂಬೈ- ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗದ ಬಹುತೇಕ ಕಾಮಗಾರಿಗಳು ಶೇ.75ರಷ್ಟು ಮುಕ್ತಾಯಗೊಂಡಿದ್ದು, ಮುಂಬೈ ಪ್ರದೇಶದಲ್ಲಿ ಸುರಂಗ ಕಾಮಗಾರಿ ತಡವಾಗಿದೆ. ಇದು ಇನ್ನು 5 ವರ್ಷ ತೆಗೆದುಕೊಳ್ಳಲಿದೆ. 2030ರವೇಳೆಗೆ ಕಾರ್ಯಾಚರಣೆ ಆರಂಭ ಆಗಬಹುದು ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜೂನ್ ಅಂತ್ಯದೊಳಗೆ ‘ಬೆಂಗ್ಳೂರು, ಮುಂಬೈ’ ಸೂಪರ್ ಫಾಸ್ಟ್ ರೈಲು ಆರಂಭ
ಮಮತಾ ಕಿರಿಕ್‌ ನಡುವೆ ಬಿಜೆಪಿ ಪ್ರಮಾಣ ಸಸ್ಪೆನ್ಸ್‌ - ಮೇ 9ರ ಪ್ರಮಾಣಕ್ಕೆ ಬಿಜೆಪಿ ಸಜ್ಜು