ತಮಿಳುನಾಡಲ್ಲಿ ಡಿಎಂಕೆ ಜತೆ ಕಮಲ್‌ ಹಾಸನ್‌ ಎಂಎನ್‌ಎಂ ಪಕ್ಷ ಮೈತ್ರಿ

KannadaprabhaNewsNetwork | Updated : Mar 10 2024, 10:13 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವ ನಡುವೆಯೇ ಖ್ಯಾತ ತಮಿಳು ನಟ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷ ಆಡಳಿತಾರೂಢ ಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಚೆನ್ನೈ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವ ನಡುವೆಯೇ ಖ್ಯಾತ ತಮಿಳು ನಟ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷ ಆಡಳಿತಾರೂಢ ಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಗಮನಾರ್ಹವೆಂದರೆ ಲೋಕಸಭೆ ಚುನಾವಣೆಯಲ್ಲಿ ಕಮಲ್‌ ಪಕ್ಷ ಸ್ಪರ್ಧಿಸಲ್ಲ. ಬದಲಾಗಿ ಅವರಿಗೆ ಮುಂಬರುವ 2025ರ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸ್ಥಾನ ಬಿಟ್ಟುಕೊಡಲು ಡಿಎಂಕೆ ಒಪ್ಪಿಕೊಂಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ ಕಮಲ್ ಹಾಸನ್‌ ಶನಿವಾರ ಮೈತ್ರಿ ಮಾತುಕತೆ ನಡೆಸಿದರು. ಈ ವೇಳೆ ನಟ ಕಮಲ್‌ ಹಾಸನ್‌ ದೇಶೋದ್ಧಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.

Share this article