ಇಂದು 75ನೇ ಗಣರಾಜ್ಯ ಸಂಭ್ರಮ

KannadaprabhaNewsNetwork |  
Published : Jan 26, 2024, 01:48 AM ISTUpdated : Jan 26, 2024, 07:12 AM IST
ಗಣರಾಜ್ಯೋತ್ಸವ | Kannada Prabha

ಸಾರಾಂಶ

75ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಜ್ಜಾಗಿದ್ದು, ಪ್ರಧಾನ ಕಾರ್ಯಕ್ರಮ ನವದೆಹಲಿಯಲ್ಲಿ ಶುಕ್ರವಾರ ನಡೆಯಲಿದೆ. ದೇಶದ ಸೇನಾ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿಯು ದೆಹಲಿಯ ಕರ್ತವ್ಯಪಥದಲ್ಲಿ ಒಂದೂವರೆ ತಾಸು ಅನಾವರಣಗೊಳ್ಳಲಿದೆ.

ನವದೆಹಲಿ: 75ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಜ್ಜಾಗಿದ್ದು, ಪ್ರಧಾನ ಕಾರ್ಯಕ್ರಮ ನವದೆಹಲಿಯಲ್ಲಿ ಶುಕ್ರವಾರ ನಡೆಯಲಿದೆ. ದೇಶದ ಸೇನಾ ಸಾಮರ್ಥ್ಯ, ಶ್ರೀಮಂತ ಸಂಸ್ಕೃತಿಯು ದೆಹಲಿಯ ಕರ್ತವ್ಯಪಥದಲ್ಲಿ ಒಂದೂವರೆ ತಾಸು ಅನಾವರಣಗೊಳ್ಳಲಿದೆ. 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ನೇತೃತ್ವ ವಹಿಸಲಿದ್ದು, ಸಮಾರಂಭದ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರೋನ್‌ ಪಾಲ್ಗೊಳ್ಳಲಿದ್ದಾರೆ. 

ಹಲವು ಪ್ರಥಮ:ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಮೂರೂ ಸೇನಾ ಪಡೆಗಳ ಸಂಪೂರ್ಣ ಮಹಿಳಾ ಬ್ಯಾಚ್‌ ಪಥಸಂಚಲನದಲ್ಲಿ ಭಾಗವಹಿಸಲಿದೆ. 

ಸೇನಾ ವಾದ್ಯವೃಂದದ ಬದಲಿಗೆ 100 ಮಹಿಳಾ ಕಲಾವಿದರು ಪ್ರಥಮ ಬಾರಿಗೆ ಭಾರತೀಯ ಸಂಗೀತ ಸಾಧನಗಳಾದ ಶಂಖ, ನಾದಸ್ವರ ಹಾಗೂ ಡೊಳ್ಳು ಬಾರಿಸಲಿದ್ದಾರೆ. 

ಬೆಳಗ್ಗೆ 10.30ಕ್ಕೆ ಶುರು:ಬೆಳಗ್ಗೆ 10.30ಕ್ಕೆ ಸಮಾರಂಭ ಆರಂಭವಾಗಲಿದ್ದು, ಒಂದೂವರೆ ತಾಸು ನಡೆಯಲಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸೇನಾ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. 

ಇದಾದ ಬಳಿಕ ರಾಷ್ಟ್ರಪತಿ ಮುರ್ಮು ಹಾಗೂ ಮ್ಯಾಕ್ರೋನ್‌ ಅವರು ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಬರಲಿದ್ದಾರೆ. 40 ವರ್ಷಗಳ ಬಳಿಕ ಈ ಸಂಪ್ರದಾಯವನ್ನು ಪುನಾರಂಭಿಸಲಾಗುತ್ತಿದೆ.

ರಾಷ್ಟ್ರ ಧ್ವಜ ಹಾರಿಸಿದ ಬಳಿಕ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಇದೇ ವೇಳೆ ಸ್ವದೇಶಿ ಗನ್‌ ಬಳಸಿ 21 ಕುಶಾಲತೋಪು ಹಾರಿಸಲಾಗುತ್ತದೆ. ಕಾರ್ಯಕ್ರಮದ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಸಮಾರಂಭದಲ್ಲಿ ನೆರೆದವರ ಮೇಲೆ ಪುಷ್ಪವೃಷ್ಟಿಗರೆಯಲಾಗುತ್ತದೆ. 

ಇದೇ ವೇಳೆ 46 ವಿಮಾನಗಳ ಹಾರಾಟ (ಫ್ಲೈಪಾಸ್ಟ್‌) ಕೂಡ ಇರುತ್ತದೆ. ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ 4 ತೇಜಸ್‌ ಯುದ್ಧ ವಿಮಾನಗಳ ಕೂಡ ಪ್ರದರ್ಶನ ನೀಡಲಿವೆ. ಕಳೆದ ಬಾರಿ 1 ತೇಜಸ್‌ ಮಾತ್ರ ಹಾರಾಡಿತ್ತು. 

ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರ ಸಚಿವಾಲಯ 16 ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಹಾದು ಹೋಗಲಿವೆ. ಈ ಬಾರಿ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ ಸಿಕ್ಕಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ