ಭುವನೇಶ್ವರ: ದೇಶದ ಪ್ರಜೆಗಳು ಉದ್ಯೋಗಿಗಳಾಗುವ ಬದಲು ಉದ್ಯೋಗದಾತರಾಗಿ ಬದಲಾಗಬೇಕಿದೆ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಭಿಪ್ರಾಯಪಟ್ಟಿದ್ದಾರೆ. ಒಡಿಶಾದಲ್ಲಿ ಕಳಿಂಗ ಟೀವಿಯು ‘ವಿಕಸಿತ ಭಾರತ, ವಿಕಸಿತ ಒಡಿಶಾ’ ಎನ್ನುವ ಶೃಂಗಸಭೆ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಹಿರಿಯ ಪತ್ರಕರ್ತರು, ಜನಪ್ರತಿನಿಧಿಗಳು ಭಾಗಿಯಾಗಿ ಭಾರತದ ಅಭಿವೃದ್ಧಿ ದೃಷ್ಟಿಕೋನ, ಅದರಲ್ಲಿ ಒಡಿಶಾದ ಪಾತ್ರದ ಬಗ್ಗೆ ಮಾತನಾಡಿದರು. ಇದೇ ವೇಳೆ ಅರ್ಲೇಕರ್ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದಂತೆ ಮಾತನಾಡಿದ ಅವರು , ‘ ಪ್ರಧಾನಮಂತ್ರಿ ವಿಕಸಿತ ಭಾರತದ ಕನಸು ಕಂಡಿದ್ದಾರೆ. ಆದರೆ ಅದರ ಅರ್ಥ ತಿಳಿಯದೆ ಅದಕ್ಕೆ ಪಾಲು ನೀಡುವುದಕ್ಕೆ ಹೇಗೆ ಸಾಧ್ಯ? ಉತ್ತರವನ್ನು ನೀಡುವ ತನಕ ನಾವು ಮೂಕ ಪ್ರೇಕ್ಷಕರಾಗಿಯೇ ಉಳಿಯುತ್ತೇವೆ, ನಾವು ಉದ್ಯೋಗ ಕೇಳುವ ಬದಲು ಉದ್ಯೋಗದಾತರಾಗಿ ಬದಲಾಗಬೇಕಿದೆ’ ಎಂದರು,
ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ,‘ವಿಕಸಿತ ಭಾರತ ಎನ್ನುವುದು ರಾಜ್ಯಗಳು ಆರ್ಥಿಕವಾಗಿ ಸದೃಢವಾಗುವುದು ಮತ್ತು ಜಾಗತಿಕವಾಗಿ ಗುರುತಿಸಿಕೊಳ್ಳುವುದು ಎಂದರ್ಥ. ನಿಜದ ಅಭಿವೃದ್ಧಿ ದೇಶದ ಪ್ರತಿ ಹಳ್ಳಿಗೂ ತಲುಪಬೇಕು’ ಎಂದು ಅಭಿಪ್ರಾಯಪಟ್ಟರು. ಜತೆಗೆ ‘ನಾವು ಒಡಿಶಾವನ್ನು ಅದರ ದೇವಾಲಯ, ಸಂಸ್ಕೃತಿಗಾಗಿ ನೆನಪಿಸಿಕೊಳ್ಳುತ್ತಿವೆ. ಅದರೆ ಈಗ ರಾಜ್ಯದ ರಸ್ತೆಗಳ ಅಭಿವೃದ್ಧಿ ನೋಡಿದರೆ ಆಶ್ವರ್ಯವಾಗುತ್ತಿದೆ. ರಸ್ತೆಗಳನ್ನು ನೋಡಿದರೆ ಬೆಂಗಳೂರು ಅಥವಾ ಭುವನೇಶ್ವ ಯಾವುದು ಹಿಂದುಳಿದಿದೆ ಎಂದು ಆಶ್ವರ್ಯ ಮೂಡಿಸುತ್ತದೆ’ ಎಂದು ಒಡಿಶಾದ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಕಳಿಂಗ ಸಮೂಹದ ಸಂಸ್ಥಾಪಕ ಅಚ್ಯುತ ಸಮಂತ ಅವರು ವಿಕಸಿತ ಭಾರತದ ಸಂಕೇತ ಎಂದು ಶ್ಲಾಘಿಸಿದರು.
ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಶ್ಚಂದ್ರನ್, ಹಿರಿಯ ಪ್ರತಕರ್ತ ಪ್ರಭಾ ಚಾವ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು,