ಕೇರಳದ ದೇಗುಲಗಳಲ್ಲಿಇನ್ನು ಕಣಗಲೆ ಹೂವು ಬಳಕೆಗೆ ನಿಷೇಧ ಜಾರಿ

KannadaprabhaNewsNetwork |  
Published : May 10, 2024, 01:38 AM ISTUpdated : May 10, 2024, 05:07 AM IST
ಕಣಗಿಲೆ  | Kannada Prabha

ಸಾರಾಂಶ

ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧೀನದಲ್ಲಿರುವ ದೇಗುಲಗಳು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶಿಸಲಾಗಿದೆ.

ತಿರುವನಂತಪುರ: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧೀನದಲ್ಲಿರುವ ದೇಗುಲಗಳು ಇನ್ನು ಮುಂದೆ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶಿಸಲಾಗಿದೆ. ಕಣಗಿಲೆ (ಗಣಗಲೆ, ಕರವೀರ) ಹೂವುಗಳಲ್ಲಿ ಕೆಲವೊಂದು ನಂಜಿನ ಅಂಶಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಬಿ ಅಧ್ಯಕ್ಷ ಪ್ರಶಾಂತ್‌, ‘ಅಲಪ್ಪುಳ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡಿದ ಕಣಗಿಲೆ ಹೂ ಸೇವಿಸಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಬೆಳಕಿಗೆ ಬಂದಿದೆ.

ಅದೇ ರೀತಿ ಪಟ್ಟಣಂತಿಟ್ಟದಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ. ಆದ್ದರಿಂದ ಕಣಗಿಲೆ ಹೂವನ್ನು ದೇಗುಲಗಳಲ್ಲಿ ಬಳಸಬಾರದು ಎಂದು ಟಿಡಿಬಿ ತೀರ್ಮಾನಿಸಿದೆ. ಇದರ ಬದಲಾಗಿ ಗುಲಾಬಿ, ತುಳಸಿ, ತೇಚಿ, ದಾಸವಾಳ, ಮಲ್ಲಿಗೆ ಹೂಗಳನ್ನು ಬಳಸಬಹುದು ಎಂದು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌