ಅಮೆರಿಕದ ಕಂಪನಿಗಳು ಭಾರತದಲ್ಲೇ ಅಣು ರಿಯಾಕ್ಟರ್ ನಿರ್ಮಾಣ ಘಟಕಗಳ ವಿನ್ಯಾಸಕ್ಕೆ ಸಮ್ಮತಿ

KannadaprabhaNewsNetwork |  
Published : Apr 01, 2025, 12:48 AM ISTUpdated : Apr 01, 2025, 04:35 AM IST
ಅಮೆರಿಕ | Kannada Prabha

ಸಾರಾಂಶ

ಅಮೆರಿಕದ ಕಂಪನಿಗಳು, ಭಾರತದಲ್ಲೇ ಪರಮಾಣು ಘಟಕಗಳ ವಿನ್ಯಾಸ ಮಾಡಿ, ಭಾರತದಲ್ಲೇ ಅದನ್ನು ನಿರ್ಮಿಸಲು ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ 20 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ಮಾಡಿಕೊಳ್ಳಲಾದ ಪರಮಾಣು ಒಪ್ಪಂದದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.

ನವದೆಹಲಿ: ಅಮೆರಿಕದ ಕಂಪನಿಗಳು, ಭಾರತದಲ್ಲೇ ಪರಮಾಣು ಘಟಕಗಳ ವಿನ್ಯಾಸ ಮಾಡಿ, ಭಾರತದಲ್ಲೇ ಅದನ್ನು ನಿರ್ಮಿಸಲು ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ 20 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ಮಾಡಿಕೊಳ್ಳಲಾದ ಪರಮಾಣು ಒಪ್ಪಂದದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.

ಅಮೆರಿಕದ ಹೊಲ್ಟೆಕ್ ಇಂಟರ್‌ನ್ಯಾಷನಲ್ಸ್‌ ಕಂಪನಿಗೆ ಭಾರತದಲ್ಲಿ ಅಣು ರಿಯಾಕ್ಟರ್‌ ವಿನ್ಯಾಸ ಮತ್ತು ನಿರ್ಮಾನರ್ಖಖೇ ಅಮೆರಿಕದ ಇಂಧನ ಇಲಾಕೇ ಅನುಮೋದನೆ ನೀಡಿದೆ. ಇದು ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧದಲ್ಲಿ ಅತ್ಯಂತ ದೊಡ್ಡ ಬೆಳವಣಿಗೆ ಎಂದೇ ಬಣ್ಣಿಸಲಾಗಿದೆ.

ಈಗಾಗಲೇ ಗುಜರಾತ್‌ನಲ್ಲಿ ಉತ್ಪಾದನಾ ಘಟಕ ಹೊಂದಿರುವ ಹೊಲ್ಟಕ್‌ ಇನ್ನು ಮುಂದೆ ಹೋಲ್ಟೆಕ್‌ ಏಷ್ಯಾ, ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌, ಎಲ್‌&ಟಿ ಕಂಪನಿಗಳಿಗೆ ಸಣ್ಣ ಮಾಡ್ಯುಲಾರ್‌ ರಿಯಾಕ್ಟರ್‌ ತಂತ್ರಜ್ಞಾನವನ್ನು ಕೊಡಬಹುದಾಗಿದೆ. ಆದರೆ ಇದನ್ನು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸುರಕ್ಷತಾ ನಿಯಮಗಳಡಿಯಲ್ಲಿ ಶಾಂತಿಯುತ ಪರಮಾಣು ಚಟುವಟಿಕೆಗಳಿಗೆ ಮಾತ್ರ ಬಳಸಲು ಅನುಮತಿಸಲಾಗಿದೆ. ಜೊತೆಗೆ, ಪರಮಾಣು ಶಸ್ತ್ರಾಸ್ತ್ರ, ಸ್ಫೋಟಕ ಅಥವಾ ಮಿಲಿಟರಿ ಉದ್ದೇಶಕ್ಕಾಗಿ ಬಳಸುವುದನ್ನು ನಿರ್ಬಂಧಿಸಲಾಗಿದೆ.

ಪ್ರಯೋಜನಗಳೇನು?:

ಹೊಸ ಒಪ್ಪಂದದಿಂದ ಭಾರತದ ಪರಮಾಣು ವಲಯವು ತನ್ನ ರಿಯಾಕ್ಟರ್‌ ಅನ್ನು ವಿಶ್ವಾದ್ಯಂತ ಬಳಕೆಯಲ್ಲಿರುವ ರಿಯಾಕ್ಟರ್‌ಗಳಂತೆ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತದೆ ಹಾಗೂ ಈ ಯೋಜನೆಗೆ ವೇಗ ತುಂಬುತ್ತದೆ. ಜೊತೆಗೆ, ಇದರಲ್ಲಿ ಖಾಸಗಿ ವಲಯದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಭಾರತ ಮತ್ತು ಅಮೆರಿಕ ಜಂಟಿಯಾಗಿ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ