ಮೋದಿಗೆ ಅಜ್ಜನ ಸ್ಥಾನ ನೀಡಿದ್ದ ಅಮೆರಿಕದ ಉಪಾಧ್ಯಕ್ಷರ ಮಕ್ಕಳು!

KannadaprabhaNewsNetwork |  
Published : Jun 04, 2025, 02:42 AM IST
ಮೋದಿ | Kannada Prabha

ಸಾರಾಂಶ

ಏಪ್ರಿಲ್‌ನಲ್ಲಿ ಪರಿವಾರ ಸಮೇತ ಭಾರತಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರ ಪತ್ನಿ ಉಷಾ, ‘ಅದು ಜೀವಮಾನದ ಪ್ರವಾಸವಾಗಿತ್ತು. ನನ್ನ 3 ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜ್ಜನ ಸ್ಥಾನ ನೀಡಿದರು’ ಎಂದು ಹೇಳಿದ್ದಾರೆ.

ವಾಷಿಂಗ್ಟನ್‌: ಏಪ್ರಿಲ್‌ನಲ್ಲಿ ಪರಿವಾರ ಸಮೇತ ಭಾರತಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರ ಪತ್ನಿ ಉಷಾ, ‘ಅದು ಜೀವಮಾನದ ಪ್ರವಾಸವಾಗಿತ್ತು. ನನ್ನ 3 ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜ್ಜನ ಸ್ಥಾನ ನೀಡಿದರು’ ಎಂದು ಹೇಳಿದ್ದಾರೆ.

‘ನಾವು ಮೋದಿಯವರನ್ನು 2ನೇ ಬಾರಿ ಭೇಟಿಯಾದೆವು. ಬಿಳಿ ಕೂದಲಿನ ಮತ್ತು ಗಡ್ಡದ ಅವರನ್ನು ನೋಡುತ್ತಿದ್ದಂತೆ ನಮ್ಮ ಮಕ್ಕಳು ತಾತನ ಸ್ಥಾನ ನೀಡಿದರು ಹಾಗೂ ಕಂಡೊಡನೆ ಓಡಿಹೋಗಿ ಅಪ್ಪಿಕೊಂಡರು. ಅದಕ್ಕೆ ಸರಿಯಾಗಿ ಮೋದಿ ಕೂಡ ನನ್ನ 4 ವರ್ಷದ ಮಗನಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದರು’ ಎಂದು ಉಷಾ ಹೇಳಿದ್ದಾರೆ.

ಏ21ರಿಂದ 24ರ ವರೆಗೆ ಭಾರತ ಪ್ರವಾಸದಲ್ಲಿದ್ದ ವ್ಯಾನ್ಸ್‌ ಪರಿವಾರ, ಪ್ರಧಾನಿ ಮೋದಿಯವರ ಜತೆಗಿನ ಮಾತುಕತೆಯ ಬಳಿಕ ಜೈಪುರ ಮತ್ತು ಆಗ್ರಾಗೂ ಭೇಟಿ ನೀಡಿತ್ತು.

==

‘ಏಕತೆ, ವಿವಿಧತೆಯೇ ನಮ್ಮ ರಾಷ್ಟ್ರ ಭಾಷೆ: ಸ್ಪೇನ್‌ನಲ್ಲಿ ಕನಿಮೋಳಿ ಉತ್ತರ

ನವದೆಹಲಿ: ಪಾಕಿಸ್ತಾನದ ಉಗ್ರಮುಖವಾಡ ಬಯಲಿಗೆ ವಿದೇಶಿಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗವೊಂದರ ನೇತೃತ್ವ ಹೊತ್ತಿರುವ ಡಿಎಂಕೆ ಸಂಸದೆ ಕನಿಮೋಳಿಗೆ ಸ್ಪೇನ್‌ನಲ್ಲಿ ಭಾರತದ ರಾಷ್ಟ್ರಭಾಷೆ ಯಾವುದು ಎಂಬ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಅವರು ‘ಏಕತೆ ಮತ್ತು ವಿವಿಧತೆ’ ಎಂದು ಉತ್ತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ವಲಸಿಗರು, ಸರ್ವಪಕ್ಷ ನಿಯೋಗಕ್ಕೆ ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ಸಂಸದೆ, ‘ಭಾರತದ ರಾಷ್ಟ್ರೀಯ ಭಾಷೆ ಏಕತೆ ಮತ್ತು ವೈವಿಧ್ಯತೆ. ಈ ನಿಯೋಗವು ಜಗತ್ತಿಗೆ ನೀಡುವ ಸಂದೇಶ ಅದು. ಮತ್ತು ಅದು ಇಂದಿನ ಅತ್ಯಂತ ಮುಖ್ಯವಾದ ವಿಷಯ’ ಎಂದಿದ್ದಾರೆ.

==

ಕದನ ವಿರಾಮಕ್ಕೆ ಟ್ರಂಪ್‌ ಗದರಿದ್ರು, ಅದಕ್ಕೆ ಹೆದರಿ ಮೋದಿ ಒಪ್ಪಿದ್ರು: ರಾಗಾ

ಭೋಪಾಲ್‌: ಆಪರೇಷನ್‌ ಸಿಂದೂರದ ಕದನವಿ ರಾಮದ ಬಗ್ಗೆ ಮತ್ತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮತ್ತೆ ಅಮೆರಿಕ ಅಧ್ಯಕ್ಷರ ಹೆಸರು ತೆಗೆದುಕೊಂಡಿದ್ದಾರೆ. ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕದನ ನಿಲ್ಲಿಸು ಎಂದು ಮೋದಿಗೆ ಗದರಿದರು. ಅದಕ್ಕೆ ಮೋದಿ ಆಪರೇಷನ್‌ ನಿಲ್ಲಿಸಿದರು’ ಎಂದು ರಾಹುಲ್‌ ಕಿಡಿಕಾರಿದ್ದಾರೆ.ಮಧ್ಯ ಪ್ರದೇಶದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಟ್ರಂಪ್‌ ಭಯದಿಂದಾಗಿ ಕದನವಿರಾಮ ಮಾಡಿದ್ದಾರೆ. ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ಯಾವುದೇ ಬೆದರಿಕೆಗಳಿಗೆ ಓಗೊಡದೆ 1971ರಲ್ಲಿ ಪಾಕ್‌ನನ್ನು ಇಬ್ಭಾಗ ಮಾಡಿದ್ದರು. ಆದರೆ ಮೋದಿಗೆ ಈ ಧೈರ್ಯವಿಲ್ಲ. ನೆಹರು, ಸರ್ದಾರ್‌ ಪಟೇಲ್‌, ಗಾಂಧೀಜಿ ಹೆದರುತ್ತಿರಲಿಲ್ಲ. ಅವರ ಸರ್ವಶಕ್ತರ ವಿರುದ್ಧ ಹೋರಾಡುತ್ತಿದ್ದರು ಎಂದು ಹೇಳಿದ್ದಾರೆ.

==

ಸಿಂದೂರ ಚರ್ಚೆಗೆ ವಿಶೇಷ ಅಧಿವೇಶನ: ಮೋದಿಗೆ 16 ಪಕ್ಷಗಳಿಂದ ಪತ್ರ

ನವದೆಹಲಿ: ಕಾಂಗ್ರೆಸ್‌ ಸೇರಿ ಇಂಡಿಯಾ ಕೂಟದ 16 ವಿಪಕ್ಷಗಳು ಆಪರೇಷನ್‌ ಸಿಂದೂರ ಕುರಿತ ಚರ್ಚೆಗೆ ಸಂಸತ್‌ ವಿಶೇಷ ಅಧಿವೇಶನ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮಂಗಳವಾರ ಪತ್ರ ಬರೆದಿವೆ. ಕಾಂಗ್ರೆಸ್, ಟಿಎಂಸಿ, ಆರ್‌ಜೆಡಿ, ಎಸ್ಪಿ, ಶಿವಸೇನೆ (ಯುಬಿಟಿ) ಒಳಗೊಂಡ ಕೂಟದ ನಾಯಕರು ದೆಹಲಿಯಲ್ಲಿ ಈ ಕುರಿತು ಸಭೆ ನಡೆಸಿ ಪತ್ರ ಬರೆಯುವ ತೀರ್ಮಾನ ಕೈಗೊಂಡಿದ್ದರು. ಈ ಬಗ್ಗೆ ಕೂಟದ ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ. ಡಿಎಂಕೆ ಸಭೆಯಲ್ಲಿ ಭಾಗವಹಿಸದಿದ್ದರೂ ಪತ್ರಕ್ಕೆ ಸಹಿ ಹಾಕಿದೆ. ಸಭೆಯಲ್ಲಿ ಭಾಗಿಯಾಗದ ಆಪ್‌ ಅಧಿವೇಶನ ಬಗ್ಗೆ ಪ್ರಧಾನಿಗೆ ಪ್ರತ್ಯೇಕ ಪತ್ರ ಬರೆದಿದೆ.

==

4000 ಗಡಿ ದಾಟಿದ ಕೋವಿಡ್‌ ಸಕ್ರಿಯ ಕೇಸು: 37 ಸಾವು

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ನಿಧಾನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ಸಕ್ರಿಯ ಸೋಂಕಿನ ಸಂಖ್ಯೆ 4026ಕ್ಕೆ ತಲುಪಿದೆ. ಮೇ 22ರಂದು ದೇಶದಲ್ಲಿ 257 ಸಕ್ರಿಯ ಪ್ರಕರಣಗಳಿತ್ತು. ಆದರೆ ಅದು ಮೇ.31ರ ವೇಳೆಗೆ 3395ಕ್ಕೆ ಏರಿಕೆಯಾಗಿತ್ತು. ಅದಾಗಿ ಪ್ರಕರಣಗಳ ಸೋಂಕು 3 ದಿನ ಕಳೆಯುವುದರಲ್ಲಿ 4026ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ 5 ಬಲಿಯಾಗಿದ್ದು, 2025ರಲ್ಲಿ ಮಹಾಮಾರಿಗೆ ಸಾವನ್ನಪ್ಪಿದ್ದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ ಕೇರಳವೇ ಹೆಚ್ಚು ಬಾಧಿತವಾಗಿದ್ದು, ಇಲ್ಲಿ 1446 ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ. ಉಳಿದಂತೆ ಮಹಾರಾಷ್ಟ್ರ 494, ಗುಜರಾತ್‌ನಲ್ಲಿ 397, ದೆಹಲಿಯಲ್ಲಿ 393 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

PREV

Recommended Stories

ಇನ್ನೂ 20 ವರ್ಷ ನೀವು ವಿಪಕ್ಷದಲ್ಲಿ: ಕಾಂಗ್ರೆಸ್‌ಗೆ ಶಾ ಟಾಂಗ್
ಭಾರತಕ್ಕೆ ಸೇನೆಯೇ ಬೇಡ ಎಂದು ನೆಹರು ಹೇಳಿದ್ದರು : ಸಂಸದ ತೇಜಸ್ವಿ ಸೂರ್ಯ