- ಜೋಡಿ ಕೊಲೆ ಮಾಡಿ ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಎಸೆದಿರುವ ದುಷ್ಕರ್ಮಿಗಳು
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಜೋಡಿ ಕೊಲೆ ಮಾಡಿ ಚೀಲದಲ್ಲಿ ತುಂಬಿ ಕಾವೇರಿ ನದಿಗೆ ಎಸೆದು ಹೋಗಿದ್ದು, ಈ ಎರಡು ಶವಗಲು ಮೈಸೂರು ಜಿಲ್ಲೆ ಪಟ್ಟಣದ ಪೊಲೀಸ್ ಠಾಣಾ ಸರಹದ್ದಿನ ಮೂಲೆಪೆಟ್ಲು ಗ್ರಾಮದ ಸಮೀಪದ ಕೆಆರ್.ಎಸ್ ಹಿನ್ನೀರಿನಲ್ಲಿ ಪತ್ತೆಯಾಗಿದೆತಾಲೂಕಿನ ಮೂಲೆಪೆಟ್ಲು ಸಮೀಪದ ಸಾಗರಕಟ್ಟೆ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಪರಿಸ್ಥಿತಿಯಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರನ್ನ ಮತ್ತೊಂದು ಸ್ಥಳದಲ್ಲಿ ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸಾಗರಕಟ್ಟೆ ಹಿನ್ನೀರಿನಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಶವ ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದ್ದು, ಮತ್ತೊರ್ವನ ಕೈಯಲ್ಲಿ ಸೂಪರ್ ಮ್ಯಾನ್ , ಅಮ್ಮ ಎಸ್, ಉಪೇಂದ್ರ, VR46 the doctor Legend ಎಂದು ಹಚ್ಚೆ ಹಾಗೂ ಬಲಕೈಯಲ್ಲಿ ಸಿಂಹದ ಚಿತ್ರ ಹಾಗೂ ಶಿಲುಬೆ ಚಿತ್ರ ಮತ್ತು ಹೃದಯದ ಒಳಗೆ AM ಎಂದು ಹಾಕಲಾಗಿದೆ.
ಪಿಎಸ್ ಐ ಗಳಾದ ಧನರಾಜು, ನಂಜಪ್ಪ ಸಿಬ್ಬಂದಿಗಳಾದ ಧನಂಜಯ, ಜವರೇಶ್, ಮಂಜು, ದೇವರಾಜು ತಂಡ ತಡರಾತ್ರಿ ಒಬ್ಬನ ಶವ ಮೇಲೆಕ್ಕೆತ್ತಿ ಪರಿಶೀಲಿಸಿದರು.
ಈರ್ವರನ್ನು ಬೇರೆ ಎಲ್ಲೋ ಕೊಲೆ ಮಾಡಿ ನಂತರ ಚೀಲದಲ್ಲಿ ಕಟ್ಟಿ ಕಾವೇರಿ ನದಿಗೆ ಬೀಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಮೃತನ ಶವವನ್ನು ಮೈಸೂರಿನ ಕೆ.ಆರ್.ಆಸ್ವತ್ರೆಯ ಹಳೇಶವಗಾರಕ್ಕೆ ಸಾಗಿಸಲಾಗಿದ್ದು ಯಾರಾದರು ವಾರಸುದಾರರು ಇದ್ದರೆ ಕೆ.ಆರ್. ನಗರ ಪೊಲೀಸರನ್ನ ಸಂಪರ್ಕಿಸುವಂತೆ ಕೋರಲಾಗಿದೆ.
ಕೊಲೆಯಾದವರ ವಾರಸ್ಸುದಾರರು ಪತ್ತೆಯಾದರೇ ಸುಲಭವಾಗಿ ಕೊಲೆಗಾರರನ್ನು ಕಂಡು ಹಿಡಿಯಲಾಗವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ತಿಳಿಸಿದರು.