ಕೃಷ್ಣ ಜನ್ಮಭೂಮಿ ಈದ್ಗಾ ಕೇಸು ಅನಾಮಿಕರಿಂದ ಅರ್ಜಿದಾರರಿಗೆ ಬೆದರಿಕೆ

KannadaprabhaNewsNetwork |  
Published : Mar 21, 2024, 01:01 AM IST
ಶ್ರೀಕೃಷ್ಣ ಜನ್ಮಭೂಮಿ | Kannada Prabha

ಸಾರಾಂಶ

ಶ್ರೀಕೃಷ್ಣ ಜನ್ಮಭೂಮಿ ಶಾಹಿ ಈದ್ಗಾ ಪ್ರಕರಣವನ್ನು ಹಿಂಪಡೆಯುವಂತೆ ಟ್ರಸ್ಟ್ ಅಧ್ಯಕ್ಷ ಮತ್ತು ಅರ್ಜಿದಾರರಿಗೆ ಬೆದರಿಕೆ ಕರೆ ಬಂದಿದೆ.

ಕೌಶಾಂಬಿ: ಶ್ರೀಕೃಷ್ಣ ಜನ್ಮಭೂಮಿ ಶಾಹಿ ಈದ್ಗಾ ಪ್ರಕರಣವನ್ನು ಹಿಂಪಡೆಯುವಂತೆ ಟ್ರಸ್ಟ್ ಅಧ್ಯಕ್ಷ ಮತ್ತು ಅರ್ಜಿದಾರರಿಗೆ ಬೆದರಿಕೆ ಕರೆ ಬಂದಿದೆ. ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ಅಶುತೋಶ್ ಪಾಂಡೆ ನೀಡಿದ ದೂರಿನ ಅನ್ವಯ ಶೈನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪಾಂಡೆಗೆ ಮಂಗಳವಾರ ರಾತ್ರಿ ಕರೆ ಮಾಡಿದವನು ನಕ್ಸಲ್ ಏಜೆಂಟ್ ಎಂದು ಗುರುತಿಸಲಾಗಿದೆ. ಅವನು ಮೂರು ದಿನಗಳಲ್ಲಿ ಪ್ರಕರಣ ಹಿಂಪಡೆಯದಿದ್ದರೆ ತೊಂದರೆ ನೀಡುವುದಾಗಿ ಕರೆಯಲ್ಲಿ ಹೇಳಿದ್ದಾನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ದೇವತೆಗಳನ್ನು ನಿಂದಿಸಿದ್ದಾರೆ ಎಂದು ಅಶುತೋಶ್ ಪಾಂಡೆ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಂದಿನಿಂದ ಪ್ರಧಾನಿ ಕಚೇರಿಗೆ ಹೊಸ ವಿ‍ಳಾಸ
ಹಸೀನಾ ಸರ್ಕಾರ ಉರುಳಿಸಿದ ಜೆನ್‌ಝೀಗಳಿಗೆ ಹೀನಾಯ ಸೋಲು