- ಜಾರ್ಖಂಡ್‌ ಪೊಲೀಸ್ ಬಲಪ್ರಯೋಗ ಖಂಡಿಸಿ ಎನ್‌ಡಿಎ ಪ್ರತಿಭಟನೆ

- ರಾಹುಲ್ ಗಾಂಧಿ ಜವಾಬ್ ದೋ’ ಎಂದು ಕೂಗಿ ಫಲಕಗಳ ಪ್ರದರ್ಶನಪಿಟಿಐ ನವದೆಹಲಿ

ವಿದ್ಯಾರ್ಥಿ ಪ್ರತಿಭಟನೆಯ ಕೇಂದ್ರವಾಗಿರುವ ಮಾರ್ಪಟ್ಟಿರುವ ಜಾರ್ಖಂಡ್‌ನಲ್ಲಿ ಕಾಂಗ್ರೆಸ್-ಜೆಎಂಎಂ ಮೈತ್ರಿ ಸರ್ಕಾರ ಇರುವ ಕಾರಣ, ಹೋರಾಟದ ಕಿಚ್ಚು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.

ಏಕೆಂದರೆ ರಾಹುಲ್‌ ದಿಲ್ಲಿ ಜೆನ್‌ಝೀ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಹಾಗೂ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಕುರಿತಂತೆ ದಿಲ್ಲಿ ಪೊಲೀಸ್‌ ಇಲಾಖೆಯ ಉಸ್ತುವಾರಿ ಹೊತ್ತಿರುವ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಆದರೆ ಇದೀಗ ಅವರು ಸೋಮವಾರ ಪ್ರತಿಭಟನೆ ನಡೆಸಿದ ರಾಂಚಿ ವಿದ್ಯಾರ್ಥಿಗಳ ಮೇಲೂ ಪೊಲೀಸ್‌ ಬಲಪ್ರಯೋಗವಾಗಿದೆ. ಅದನ್ನು ರಾಹುಲ್‌ ವಿರೋಧಿಸಿದ್ದರೂ, ಅವರದ್ದೇ ಸರ್ಕಾರದ ಅಧೀನದ ಪೊಲೀಸರ ನಡೆ ಕಾಂಗ್ರೆಸ್‌ಗೆ ಮುಜುಗರ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಸಂಸತ್ತಿನ ಮಕರದ್ವಾರದ ಬಳಿ ನೆರೆದ ಎನ್‌ಡಿಎ ಸಂಸದರು ಜಾರ್ಖಂಡ್‌ನಲ್ಲಿ ಉದ್ಯೋಗಾಕಾಂಕ್ಷಿಗಳ ಮೇಲಿನ ‘ಕ್ರೂರ’ ಪೊಲೀಸ್ ಕ್ರಮವನ್ನು ಖಂಡಿಸಿದರು ಹಾಗೂ ‘ಜಾರ್ಖಂಡ್ ಮೇ ಛತ್ರೋ ಪೆ ಲಾಠಿ ಚಾರ್ಜ್ ಪೆ ರಾಹುಲ್ ಗಾಂಧಿ ಜವಾಬ್ ದೋ’ ಎಂದು ಕೂಗಿ ಫಲಕ ಪ್ರದರ್ಶಿಸಿದರು.


ಇವರಿಂದ ಕೆಲವೇ ಮೀಟರ್‌ ದೂರದಲ್ಲಿ ನಿಂತಿದ್ದ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟದ ಸಂಸದರು, ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಹೊರಬೇಕು. ಸಂಸತ್ತಿನಲ್ಲಿ ರಾಮಮಂದಿರ ಚೋರಿ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪರಿಸ್ಥಿತಿ ಕೈಮೀರದಂತೆ ಭದ್ರತಾ ಪಡೆಗಳು ನಿಗಾ ವಹಿಸಿದ್ದವು.