ಹನಿಟ್ರಾಪ್‌ಗೆ ಒಳಗಾಗಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ‘ಐಎಸ್‌ಐ’ನ ಮಹಿಳೆಯ ಜೊತೆ ಹಂಚಿಕೊಂಡ ಆರೋಪದ ಮೇರೆಗೆ ಭಾರತೀಯ ನೌಕಾಪಡೆಯ ನಾವಿಕನೊಬ್ಬನನ್ನು ಬಂಧಿಸಲಾಗಿದೆ.
ಕೊಯಮತ್ತೂರು : ಹನಿಟ್ರಾಪ್‌ಗೆ ಒಳಗಾಗಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ‘ಐಎಸ್‌ಐ’ನ ಮಹಿಳೆಯ ಜೊತೆ ಹಂಚಿಕೊಂಡ ಆರೋಪದ ಮೇರೆಗೆ ಭಾರತೀಯ ನೌಕಾಪಡೆಯ ನಾವಿಕನೊಬ್ಬನನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಪ್ರದೀಪ್ ಮುಖರ್ಜಿ
ಬಂಧಿತನನ್ನು ಪಶ್ಚಿಮ ಬಂಗಾಳ ಮೂಲದ ಪ್ರದೀಪ್ ಮುಖರ್ಜಿ ಎಂದು ಗುರುತಿಸಲಾಗಿದೆ. ಕೇಂದ್ರ ಬೇಹುಗಾರಿಕೆ ಸಂಸ್ಥೆಗಳಿಂದ ದೊರೆತ ರಹಸ್ಯ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ನೌಕಾಪಡೆಯ ತಾಂತ್ರಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ
ಮೂಲಗಳ ಪ್ರಕಾರ ನೌಕಾಪಡೆಯ ತಾಂತ್ರಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಸಾಮಾಜಿಕ ಜಾಲತಾಣದ ಮೂಲಕ ಪಾಕಿನದ ಗುಪ್ತಚರದ ಮಹಿಳಾ ಸಿಬ್ಬಂದಿಯ ಪರಿಚಯವಾಗಿತ್ತು. ಆಕೆ ಮುಖರ್ಜಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ರಹಸ್ಯ ಮಾಹಿತಿಗಳನ್ನು ಪಡೆದಿದ್ದಾಳೆ ಎನ್ನಲಾಗಿದೆ. ನೌಕಾ ಸ್ವತ್ತುಗಳು, ಫ್ಲೀಟ್ ಚಲನೆಗಳು ಮತ್ತು ವಿಶಾಖಪಟ್ಟಣಂ ನೆಲೆಯ ಕಾರ್ಯಾಚರಣೆಯ ಚೌಕಟ್ಟಿನ ಬಗ್ಗೆ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಆಂಧ್ರಪ್ರದೇಶ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಅಧಿಕಾರಿಗಳು ಕೊಯಮತ್ತೂರಿನಲ್ಲಿ ಮುಖರ್ಜಿ ಅವರನ್ನು ಬಂಧಿಸಿದ್ದಾರೆ.
