ಕವಿತಾ ಬಂಧನ ಪ್ರಶ್ನಿಸಿ ಇ.ಡಿ ಅಧಿಕಾರಿಗಳ ಜತೆ ಕೆಟಿಆರ್‌ ಮಾತಿನ ಚಕಮಕಿ

KannadaprabhaNewsNetwork | Updated : Mar 16 2024, 07:40 AM IST

ಸಾರಾಂಶ

ಕವಿತಾ ಅವರ ಬಂಧನ ಕ್ರಮವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜೊತೆಗೆ ಕೆ ಟಿ ರಾಮರಾವ್‌ ವಾಗ್ದಾಳಿ ನಡೆಸಿದರು.

ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸೋದರಿ ಕವಿತಾ ಅವರ ಬಂಧನ ಖಂಡಿಸಿ ಬಿಆರ್‌ಎಸ್‌ ನಾಯಕ ಕೆ.ಟಿ.ರಾಮರಾವ್‌ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ ಘಟನೆ ಶುಕ್ರವಾರ ನಡೆಯಿತು.

ಅಧಿಕಾರಿಗಳು ಕವಿತಾ ಅವರನ್ನು ಬಂಧಿಸಲು ಮುಂದಾದ ವೇಳೆ, ‘ಸುಪ್ರೀಂ ಕೋರ್ಟಿನಲ್ಲಿ ಕವಿತಾ ವಿರುದ್ದ ಯಾವುದೇ ದಬ್ಬಾಳಿಕೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಇ.ಡಿ ವಾಗ್ದಾನ ನೀಡಿ, ಇದೀಗ ಆ ವಾಗ್ದಾನ ಉಲ್ಲಂಘಿಸಿದೆ.

ಜೊತೆಗೆ ಒಂದು ಕಡೆಯಿಂದ ಮತ್ತೊಂದು ಕಡೆ ಕರೆದೊಯ್ಯಲು ವಾರೆಂಟ್‌ ನೀಡಿಲ್ಲ. ಬಂಧನ ಕಾನೂನು ಬಾಹಿರ’ ಎಂದು ವಾಗ್ವಾದ ನಡೆಸಿದ್ದಾರೆ.

ಈ ವೇಳೆ ಅಧಿಕಾರಿಗಳು ಕೂಡಾ ರಾಮ್‌ರಾವ್‌ ಜೊತೆ ಮಾತಿನ ಚಕಮತಿ ನಡೆಸಿ ಕಾನೂನು ಪ್ರಕಾರವೇ ನಡೆದುಕೊಂಡಿರುವುದಾಗಿ ಹೇಳಿ ಕವಿತಾರನ್ನು ವಶಕ್ಕೆ ಪಡೆದರು.

Share this article