ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ಮತ್ತೊಂದು ಹೇಯ ಕೃತ್ಯ : ಬಾಲಕಿ ಮತ್ತು ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ

KannadaprabhaNewsNetwork |  
Published : Sep 02, 2024, 02:03 AM ISTUpdated : Sep 02, 2024, 05:22 AM IST
ಲೈಂಗಿಕ ಕಿರುಕುಳ | Kannada Prabha

ಸಾರಾಂಶ

ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ 13 ವರ್ಷದ ಬಾಲಕಿಗೆ ಲ್ಯಾಬ್ ಟೆಕ್ನೀಷಿಯನ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಮತ್ತೊಂದು ಪ್ರಕರಣದಲ್ಲಿ ಬೀರ್‌ಭೂಮ್‌ನ ಆಸ್ಪತ್ರೆಯಲ್ಲಿ ರೋಗಿಯೊಬ್ಬ ನರ್ಸ್‌ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಕೋಲ್ಕತಾ: ವೈದ್ಯೆ ಮೇಲಿನ ರೇಪ್ ಕೇಸ್‌ ಘಟನೆ ಬೆನ್ನಲ್ಲೇ ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 13 ವರ್ಷದ ಪುಟ್ಟ ಬಾಲಕಿಗೆ ಲ್ಯಾಬ್‌ ಟೆಕ್ನೀಷಿಯನ್ ಕಿರುಕುಳ ನೀಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಆ ವೇಳೆ ಬಾಲಕಿಯನ್ನು ಸಿಟಿ ಸ್ಕ್ಯಾನ್‌ಗೆ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಅಮನ್ ರಾಜ್ ಎನ್ನುವ ಲ್ಯಾಬ್‌ ಟೆಕ್ನೀಷಿಯನ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.ಲ್ಯಾಬ್‌ನಿಂದ ಹೊರ ಬಂದ ಬಳಿಕ ಬಾಲಕಿ ನಡೆದ ಸಂಗತಿಯನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಪೊಲೀಸರು ಲ್ಯಾಬ್ ಟೆಕ್ನೀಷಿಯನ್‌ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ರಾತ್ರಿ ಪಾಳಿಯಲ್ಲಿದ್ದ ನರ್ಸ್‌ಗೆ ರೋಗಿಯಿಂದ ಲೈಂಗಿಕ ಕಿರುಕುಳ

ಕೋಲ್ಕತಾ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಎಲ್ಲಾ ರೀತಿಯ ರಕ್ಷಣೆ ನೀಡುವ ಕೇಂದ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳ ಭರವಸೆ ನಡುವೆಯೇ ಪಶ್ಚಿಮ ಬಂಗಾಳದದ ಬೀರ್‌ಭೂಮ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ ಮೇಲೆ ರೋಗಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಬೀರ್‌ಭೂಮ್‌ನ ಇಲಂಬಜಾರ್‌ ಆರೋಗ್ಯ ಕೇಂದ್ರದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಬಂದಿದ್ದ ವ್ಯಕ್ತಿಯೊಬ್ಬನಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ನರ್ಸ್‌ ಡ್ರಿಪ್ಸ್ ಹಾಕುವ ವೇಳೆ ಆಕೆ ಜೊತೆ ರೋಗಿ ಅನುಚಿತವಾಗಿ ವರ್ತಿಸಿ, ಆಕೆಯನ್ನು ಕೆಟ್ಟದಾಗಿ ಸ್ಪರ್ಶಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

 ಈ ಘಟನೆ ಸಂದರ್ಭದಲ್ಲಿ ರೋಗಿ ಕುಟುಂಬಸ್ಥರು ಕೂಡ ಘಟನಾ ಸ್ಥಳದಲ್ಲಿದ್ದರು ಎನ್ನಲಾಗಿದೆ.‘ಪುರುಷ ರೋಗಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಆತನ ನನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ್ದಾನೆ. ಮಾತ್ರವಲ್ಲದೇ ತನ್ನ ಜೊತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.’ ಎಂದು ನರ್ಸ್‌ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಭದ್ರತಾ ಕೊರತೆಯಿಂದ ಇಂತಹ ಕೃತ್ಯ ನಡೆದಿದೆ ಎಂದು ನರ್ಸ್‌ ಆರೋಪಿಸಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಆಸ್ಪತ್ರೆಯವರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಣಾಗೆ ಏಮ್ಸ್‌ನಲ್ಲಿ ದಯಾಮರಣ ಪ್ರಕ್ರಿಯೆ ಆರಂಭ
‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಗೆ ‘ಅತ್ಯುತ್ತಮ ಚಿತ್ರ’ ಆಸ್ಕರ್‌ ಗೌರವ