ತಮ್ಮ ಪತಿ ನಟಿಯೊಬ್ಬರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಈ ವರ್ಷದ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತಮಿಳುನಾಡು ಸಿಎಂ ವಿಜಯ್‌ ಪತ್ನಿ ಸಂಗೀತಾ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ತಮ್ಮ ಅರ್ಜಿ ಹಿಂಪಡೆದಿದ್ದಾರೆ.

ಚೆನ್ನೈ: ತಮ್ಮ ಪತಿ ನಟಿಯೊಬ್ಬರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಈ ವರ್ಷದ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತಮಿಳುನಾಡು ಸಿಎಂ ವಿಜಯ್‌ ಪತ್ನಿ ಸಂಗೀತಾ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ತಮ್ಮ ಅರ್ಜಿ ಹಿಂಪಡೆದಿದ್ದಾರೆ.

ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದ ಸಂಗೀತಾ ತಮ್ಮ ಅರ್ಜಿಯನ್ನು ಹಿಂಪಡೆಯುವುದಾಗಿ ನ್ಯಾಯಾಧೀಶರ ಮುಂದೆ ತಿಳಿಸಿದರು. ಜತೆಗೆ ಕೆಲ ಕಾರಣಗಳನ್ನೂ ನೀಡಿದರು. ಅದರಂತೆ ನ್ಯಾಯಾಲಯ, ‘ಅರ್ಜಿ ಹಿಂಪಡೆಯಲಾಗಿದೆ’ ಎಂದು ಅವರ ಅರ್ಜಿಯನ್ನು ವಿಲೇವಾರಿ ಮಾಡಿತು.

1998ರಲ್ಲಿ ವಿಜಯ್‌ ಅವರನ್ನು ಮದುವೆಯಾಗಿದ್ದ ಸಂಗೀತಾ ಈ ವರ್ಷದ ಫೆಬ್ರವರಿಯಲ್ಲಿ ‘ನನ್ನ ಪತಿಗೆ ನಟಿಯೊಬ್ಬರ ಜತೆ ವಿವಾಹೇತರ ಸಂಬಂಧವಿದೆ. ನನ್ನನ್ನು ನಿರ್ಲಕ್ಷಿಸಿ ತೊರೆದು ಹೋಗಿದ್ದಾರೆ’ ಎಂದು ಅರ್ಜಿ ಸಲ್ಲಿಸಿದ್ದರು.